KSRTC-ಪ್ರಯಾಣಿಕರು ಟಿಕೆಟ್ ಕಳೆದುಕೊಂಡರೆ ಕಂಡಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು: ಎಂಡಿ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಟಿಕೆಟ್ ಕಳೆದುಕೊಂಡಿರುವುದು ತನಿಖಾ ಸಿಬ್ಬಂದಿಗೆ ತಪಾಸಣೆ ವೇಳೆ ತಿಳಿದು ಬಂದರೆ ಅಂಥವರಿಗೆ ಮತ್ತೆ ಟಿಕೆಟ್‌ಕೊಡಬೇಕು. ಅದನ್ನು ಬಿಟ್ಟು ನಿರ್ವಾಹಕರ ವಿರುದ್ಧ ಯಾವುದೆ ಕ್ರಮ ತೆಗೆದುಕೊಳ್ಳಬಾರದು ಎಂದು 2020ರಲ್ಲೇ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಆದೇಶ ಹೊರಡಿಸಿದ್ದಾರೆ.
ಆದರೆ, ಈ ಆದೇಶವನ್ನು ಪಾಲಿಸದ ಕೆಲ ತನಿಖಾ ಸಿಬ್ಬಂದಿಗಳು ಪ್ರಯಾಣಿಕರಿಗೆ ದಂಡ ವಿಧಿಸುವ ಜತೆಗೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಿ ದೋಷಾರೋಪಣ ಪತ್ರ ನೀಡುತ್ತಿದ್ದಾರೆ. ಇದು ಆದೇಶಕ್ಕೆ ವಿರುದ್ಧವಾಗಿದೆ ಎಂದು ಶಿಕ್ಷೆಗೆ ಒಳಗಾಗುತ್ತಿರುವ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂದಿನ ಎಂಡಿ ಶಿವಯೋಗಿ ಸಿ. ಕಳಸದ ಅವರು 20/02/2020ರಂದು ಸಂಖ್ಯೆ/ಕರಾಸಾ/ಕೇಕ/ಸಂ/ಕೇ.ತ.ದ/ 4936 /19-20 ಸುತ್ತೋಲೆ ಸಂಖ್ಯೆ: 1531ರಡಿ ಮಾರ್ಗ ತನಿಖಾ ಪದ್ಧತಿಯಲ್ಲಿನ ಮಾರ್ಗದರ್ಶನಗಳ ಬಗ್ಗೆ ಆದೇಶ ಹೊರಡಿಸಿದ್ದು ಈ ಆದೇಶ ಅಂದಿನಿಂದಲೇ ಜಾರಿಗೆ ಬಂದಿದೆ.
ರಾಜ್ಯದೊಳಗೆ ಹಾಗೂ ನೆರೆ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡುತ್ತಿರುವ ನಿಗಮದ ವಾಹನಗಳನ್ನು ಪರಿಣಾಮಕಾರಿಯಾಗಿ ತನಿಖೆಗೆ ಒಳಪಡಿಸಿದಾಗ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಂದರೆ, ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಪ್ರಯಾಣದ ಟಿಕೆಟ್ ಕಳೆದುಕೊಂಡ (Loss of ticket) ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳು ಇಲ್ಲ, ಈ ಸಂದರ್ಭಗಳಲ್ಲಿ ಮಾರ್ಗ ತನಿಖಾ ಸಿಬ್ಬಂದಿಗಳು ಈ ಮಾರ್ಗಸೂಚಿಗಳನ್ನು ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದುಕೊಂಡು, ಆಕಸ್ಮಿಕವಾಗಿ ಕಳೆದುಕೊಂಡ ಸಂರ್ದಭದಲ್ಲಿ (Loss of ticket) ಮಾರ್ಗ ತನಿಖಾ ಸಿಬ್ಬಂದಿಯು ಇಟಿಎಂ/ಮುಂಗಡ ಕಾಯ್ದಿರಿಸಿದ ಟ್ರಿಪ್ ಶೀಟ್‌ಗಳಿಂದ ಆ ಪ್ರಯಾಣಿಕರು ಟಿಕೆಟ್ ಪಡೆದಿದ್ದು, ತದನಂತರ ಕಳೆದುಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಆ ಬಳಿಕ ತನಿಖಾ ಸ್ಥಳದಿಂದ ಮುಂದೆ ಪ್ರಯಾಣಿಕರು ಪ್ರಯಾಣಿಸುವ ಸ್ಥಳಕ್ಕೆ ನಿರ್ವಾಹಕರ ಇಟಿಎಂ ಯಂತ್ರದಿಂದ ಮರುಟಿಕೆಟ್ ವಿತರಿಸುವುದು ಹಾಗೂ ಮರುವಿತರಣೆ ಟಿಕೆಟ್‌ನ ಮೊತ್ತವನ್ನು ಸಂಬಂಧಿಸಿದ ಪ್ರಯಾಣಿಕರಿಂದ ಪಡೆಯುವುದು ಹಾಗೂ ಈ ಬಗ್ಗೆ ಮಾರ್ಗಪತ್ರದಲ್ಲಿ ಪರಾ ದಾಖಲಿಸುವುದು. ಈ ರೀತಿಯ ಸಂದರ್ಭದಲ್ಲಿ ನಿರ್ವಾಹಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು.
ಈ ಸುತ್ತೋಲೆಯಲ್ಲಿನ ಅಂಶಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಮಾರ್ಗ ತನಿಖಾ ಸಿಬ್ಬಂದಿಗೆ ಅಗತ್ಯ ತಿಳಿವಳಿಕೆಯನ್ನು ನೀಡುವುದು. ಈ ಸುತ್ತೋಲೆ ಈ ಕೂಡಲೇ ಜಾರಿಗೆ ಬರುತ್ತದೆ. ಸುತ್ತೋಲೆ ಸ್ವೀಕರಿಸಿದ್ದಕ್ಕೆ ಸ್ವೀಕೃತಿ ಮತ್ತು ಅನುಸರಣಾ ವರದಿ ನೀಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ 2020ರ ಫೆಬ್ರವರಿ 20ರಂದೆ ಆದೇಶ ಹೊರಡಿಸಿದ್ದಾರೆ.
ಇನ್ನಾದರೂ ತನಿಖಾ ಸಿಬ್ಬಂದಿಗಳು ಈ ಆದೇಶವನ್ನು ಪಾಲನೆ ಮಾಡುವ ಮೂಲಕ ನಿರ್ವಾಹಕರ ವಿರುದ್ಧ ದೋಷಾರೋಪಣ ಪತ್ರ ನೀಡುವುದನ್ನು ನಿಲ್ಲಿಸಬೇಕು ಎಂದು ನೌಕರರು ತಿಳಿಸಿದ್ದಾರೆ.
Related


You Might Also Like
ಅಕ್ರಮ ಆನ್ಲೈನ್ ಬೆಟ್ಟಿಂಗ್ನಲ್ಲಿ 2,000 ಕೋಟಿ ರೂ. ಲಾಭಗಳಿದ ಶಾಸಕ ವೀರೇಂದ್ರ ಪಪ್ಪಿ: ಇಡಿ ದಾಳಿ ವೇಳೆ ಬಯಲು!
ಚಿತ್ರದುರ್ಗ: ಜನಪ್ರತಿನಿಧಿಗಳು ಎಂದರೆ ಸಾಮಾನ್ಯ ಜನರಿಗೆ ಮಾದರಿಯಾಗಿರಬೇಕು. ಆದರೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಕ್ರಮ ಆನ್ಲೈನ್ ಬೆಟ್ಟಿಂಗ್ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆಂಬುವುದು...
ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಿ: 5 ನಗರ ಪಾಲಿಕೆಗಳ ಆಯುಕ್ತರಿಗೆ ತುಷಾರ್ ಗಿರಿನಾಥ್ ಸೂಚನೆ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಎಲ್ಲ ವಿಭಾಗಗಳ ಕುರಿತು ಸಮಗ್ರ ಪರಿಚಯ ಹಾಗೂ ವಿಶೇಷವಾಗಿ 3 ವಿಷಯಗಳಾದ ರಸ್ತೆ ಗುಂಡಿ, ಬೀದಿ ದೀಪ ಹಾಗೂ ಕಸದ ಸಮಸ್ಯೆ...
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರು ಸುಳ್ಳು ದೂರು ದಾಖಲಿಸಬೇಡಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ
ಬೆಂಗಳೂರು ಗ್ರಾಮಾಂತರ: ಸಾರ್ವಜನಿಕರು ಲೋಕಾಯುಕ್ತ ಹಾಗೂ ಇನ್ನಿತರೆ ನ್ಯಾಯಾಲಯಗಳಲ್ಲಿ ಸುಳ್ಳು ಕೇಸ್ ದಾಖಲಿಸಬೇಡಿ, ಸುಳ್ಳು ಕೇಸ್ ಎಂದು ಸಾಬೀತಾದರೆ ಅರ್ಜಿದಾರರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ಜತೆಗೆ ನಿಜವಾದ...
ಜಿಬಿಎ-ಗುಂಡಿ ಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ, ಮುಕ್ತ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕಠಿಣ ಕ್ರಮ: ರಾಜೇಂದ್ರ ಚೋಳನ್
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ, ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ಗುಂಡಿ ಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ...
ಆ.5ರ ಮುಷ್ಕರ ದಿನದ ಚಾಲಕ, ನಿರ್ವಾಹಕರ ವೇತನ ಕಡಿತ- ಇದು ನ್ಯಾಯಸಮ್ಮತವೇ?
ಬೆಂಗಳೂರು: ಕಳೆದ 2021ರ ಏಪ್ರಿಲ್ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಲಾಗಿತ್ತು. ಈ...
ಮೈಸೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಬುಧವಾರ...
ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಸವರಾಜು ಸೂಚನೆ
ಬೆಂಗಳೂರು ಗ್ರಾಮಾಂತರ: ಯುವನಿಧಿ ಯೋಜನೆಯಡಿ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಫಲಾನುಭವಿಗಳ ಆಸಕ್ತಿ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಕ್ರಮ...
ಜಿಬಿಎ: ನೂತನ ಪಾಲಿಕೆ ಕಚೇರಿಗಳ ನಿರ್ಮಾಣಕ್ಕೆ ನ.1 ರಂದು ಭೂಮಿಪೂಜೆ: ಉಪಮುಖ್ಯಮಂತ್ರಿ ಶಿವಕುಮಾರ್
ಐದು ಪಾಲಿಕೆಗಳಿಗೆ 300 ಕೋಟಿ ರೂ. ಅನುದಾನ ಹಂಚಿಕೆ ಬೆಂಗಳೂರು: “ಐದು ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್ 1 ರಂದು ನೆರವೇರಿಸಲಾಗುವುದು. ಎಲ್ಲ ಪಾಲಿಕೆಗಳ ಗಡಿ...