NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರು: ಅಗ್ರಿಮೆಂಟ್ ಬೇಕು ಎನ್ನುವವರೇ ಒಮ್ಮೆ ನೋಡಿ..!

ವಿಜಯಪಥ ಸಮಗ್ರ ಸುದ್ದಿ

ಮ್ಮಲ್ಲಿಯ ಅಗ್ರಿಮೆಂಟ್ ಹೇಗೆಂದರೆ ಪ್ರತಿ ವರ್ಷ ನಡೆಯುವ ಊರಿನ ಜಾತ್ರೆಯ ತೇರು/ರಥೋತ್ಸವ ಇದ್ದ ಹಾಗೆ.

ಈ ತೇರು ತನ್ನಷ್ಟಕ್ಕೆ ಹೊಗುವುದಿಲ್ಲ. ಅದಕ್ಕೆ ಎಲ್ಲರೂ ಸೇರಿ ಹಗ್ಗಕಟ್ಟಿ ಎಳೆದರೆ ಮಾತ್ರ ಚಲಿಸುವುದು.

ನಮ್ಮ ಅಗ್ರಿಮೆಂಟ್ ಕೂಡಾ ಜಾತ್ರೆಯ ತೇರು ಇದ್ದ ಹಾಗೇನೆ. ಯಾಕೆಂದರೆ ಈ ಹಿಂದಿನ ಪ್ರತಿ ಅಗ್ರಿಮೆಂಟ್‌ಅನ್ನು ಒಮ್ಮೆ ಹಿಂತಿರುಗಿ ನೋಡಿ.

ಪ್ರತಿ ಅಗ್ರಿಮೆಂಟ್ ತೆಗೆದುಕೊಳ್ಳುವಾಗಲೂ ಸಣ್ಣ ಪ್ರಮಾಣದ ಮುಷ್ಕರ (ಸಿಬ್ಬಂದಿಗಳ ವರ್ಗಾವಣೆ, ಡಿಸ್ಮಿಸ್, ಅಮಾನತು) ಮಾಡಲೇಬೇಕು. ನ್ಯಾಯಬದ್ದವಾಗಿ ಒಮ್ಮೆಯಾದರೂ ಸರಿಯಾಗಿ ನಾಲ್ಕು ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳ ಒಂದನೇ ತಾರಿಖಿನಂದು ಕೊಟ್ಟಿದ್ದಾರಾ? ಅದನ್ನು ಕೂಡ ಹೋರಾಟ ಮಾಡಿಯೇ ತೆಗೆದುಕೊಳ್ಳಬೇಕು ಮತ್ತು ಸಿಬ್ಬಂದಿಗಳು ವರ್ಗಾವಣೆ, ಸಸ್ಪೆಂಡ್, ವಜಾ ಪ್ರಕರಣಗಳನ್ನು ಅನುಭವಿಸಲೇಬೇಕು.

ಹೋರಾಟ ಮಾಡುವುದೇ ನಿಜ ಅಂದಮೇಲೆ ಯಾಕಾಗಿ ಸಣ್ಣ ಮತ್ತು ಉಪಯೋಗವಿಲ್ಲದ ಹೋರಾಟ ಮಾಡಬೇಕು?

ಅದು ಅಲ್ಲದೇ ಅಷ್ಟು ಶಿಸ್ತು ಪ್ರಕರಣ ಅನುಭವಿಸಿಯೂ ನಮ್ಮಗಳ ಅಗ್ರಿಮೆಂಟ್ ಯಾವ ತರಹ ಗೊತ್ತಾ?

Advertisement

ಒಂದು ಸತ್ತ ಎಮ್ಮೆಯನ್ನು ತಿನ್ನಲು ಹೇಗೆ ಕಿತ್ತಾಡಿ ಜಗಳ ಮಾಡಿಕೊಂಡು ಹಂಚಿಕೊಂಡು ತಿನ್ನುತ್ತಾರೋ ಹಾಗೆ ನಮ್ಮ ಪ್ರತಿ ನಾಲ್ಕು ವರ್ಷದ ಅಗ್ರಿಮೆಂಟ್.

ಇಷ್ಟಾದರೂ ಪ್ರಸ್ತುತ ಪ್ರತಿ ತಿಂಗಳು ಕನಿಷ್ಠ ಎರಡು ಸಿಬ್ಬಂದಿಗಳು ಆದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ಯಾಕಾಗಿ ಧ್ವನಿ ಎತ್ತುವುದಿಲ್ಲಾ ಗೋಸುಂಬೆಗಳಾ?

ಸತ್ತವರು ಸತ್ತರು, ನಮಗೆ ಸಿಗಬೇಕಾಗಿದ್ದು ಸಿಕ್ಕಿತು ಎಂಬ ಮನೋಧೋರಣೆಯಾ ಹೆತ್ಲಾಂಡಿಗಳಾ?

ಮೂಲವ್ಯಾಧಿ ಆಗಿ ಇಷ್ಟು ನೋವು ಅನುಭವಿಸುತ್ತಿದ್ದರೂ ಯಾಕಾಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುತ್ತಿಲ್ಲಾ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸದೇ, ಸಮಾಜದಲ್ಲಿ ಒಳ್ಳೆಯ ಸಂತೃಪ್ತಿ ಬದುಕನ್ನು ಸಾಗಿಸದೇ, ನಾಚಿಕೆಗೆಟ್ಟು ಕಂಡ ಕಂಡವರ ಹತ್ತಿರ ಸಾಲ ಮಾಡಿಕೊಂಡು ಬಂಡ ಬಾಳಲ್ಲಿ ಬದುಕುತ್ತಿರಿ.

ಇನ್ನಾದರೂ ಒಳ್ಳೆಯ ಯೋಚನೆ ಸಂಘಟನೆ, ಒಳ್ಳೆಯ ಪರಿಹಾರದತ್ತ ಮುಖ ಮಾಡು ಎಂಜಿಲು ಕಾಸಿನ ಮೂಢ ಮಾನವಾ!

ಹೊಗಲಿ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕ, ತಂಗಿ, ಹೆಂಡತಿ, ತಾಯಿ ಮಕ್ಕಳು, ಪರಿಚಯಸ್ಥರು ಪ್ರಸ್ತುತ ಇಷ್ಟು ಪ್ರಮಾಣದಲ್ಲಿ ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಕೇಳುವುದಿಲ್ಲವಾ ನಿಮ್ಮನ್ನಾ? ನಿಮ್ಮ ಆತ್ಮಸಾಕ್ಷಿ ಸತ್ತುಹೊಗಿದೇಯಾ?

“ಸಾರಿಗೆ ನೌಕರರಿಗೆ ಒಳ್ಳೆಯದು ಆಗಲಿ” ನೋವಿನೊಂದಿಗೆ ಸಾರಿಗೆ ನೌಕರ….

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!