ಆರೋಗ್ಯಲೇಖನಗಳುಶಿಕ್ಷಣ-ಸಂಸ್ಕೃತಿ

ಸೀಬೆಹಣ್ಣು ಬರಿ ಹಣ್ಣಲ್ಲ ಔಷಧೀಯ ಗುಣಗಳ ಆಗರ

ವಿಜಯಪಥ ಸಮಗ್ರ ಸುದ್ದಿ

ಸೀಬೆಹಣ್ಣನ್ನು ನಾವು ಬರಿ ಹಣ್ಣಾಗಷ್ಟೆ ಸವಿಯುತ್ತೇವೆ ಆದರೆ, ಇದರಿಂದ ನಮ್ಮ ಆರೋಗ್ಯ ಎಷ್ಟು ವೃದ್ಧಿಸುತ್ತದೆ ಇದು ನಮ್ಮ ದೇಹಕ್ಕೆ ಎಷ್ಟು ಅಮೂಲ್ಯವಾದುದು ಎಂಬುದನ್ನು ಇಂದು ನಾವು ತಿಳಿದುಕೊಳ್ಳೊಣ್ಣ.

ಈ ಹಣ್ಣನ್ನು ಅಮೃತಾ ಫಲಂ, ಪೇರಳೆ, ಸೀಬೆಕಾಯಿ, ಚೇಪೆಕಾಯಿ, ಸೀಬೆ ಹಣ್ಣು, ಜಾಮುಕಾಯಿ,ಕೊಯ್ಯ ಫಳಮ್, ಗುವ, ಅಮೃದ್ ಹೀಗೆ ನಾನಾ ಹೆರುಗಳಿಂದ ಕರೆಯುವುದುಂಟು.

ಒಂದು ಕಾಲದಲ್ಲಿ ಕೆರೆ ಕಟ್ಟೆಗಳ ಮೇಲೆ, ಹೊಲ,ಗದ್ದೆಗಳ ಬದುಗಳ (ತೆವರಿ) ಮೇಲೆ ಕೆಲವು ಕಡೆ ತೋಟಗಳಲ್ಲಿ ವಿರಳವಾಗಿ ಬೆಳೆಯುತ್ತಿದ್ದ ಸೀಬೆಹಣ್ಣು ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು, ಈಗ ಎಲ್ಲೆಲ್ಲೂ ವಾಣಿಜ್ಯ ಬೆಳೆಯಾಗಿ ಹೇರಳವಾಗಿ ಬೆಳೆದು ಅಪಾರ ಲಾಭವನ್ನು ರೈತರು ಗಳಿಸುತ್ತಿದ್ದಾರೆ.

ಎಲೆಗಳಲ್ಲಿರುವ ಔಷಧಗುಣ

ಸೀಬೆ ಎಲೆಗಳನ್ನು ತಂದು,ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಉಗುರು ಬೆಚ್ಚಗಿದ್ದಾಗ ಸೋಸಿ, ದಿನಕ್ಕೆ 50ml ನಂತೆ ಸೇವಿಸುತ್ತಿದ್ದರೆ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ದೇಹದ
ತೂಕ ಇಳಿಯುತ್ತದೆ.ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತೆ.ರಕ್ತದ್ಲಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತೆ. ಜೀರ್ಣಕ್ರಿಯೆ ಚೆನ್ನಾಗಾಗಿ, ಹೊಟ್ಟೆಯಲ್ಲಿನ ಹುಣ್ಣನ್ನುಗುಣಪಡಿಸುವ ಗುಣವನ್ನು ಹೊಂದಿದೆ.

2 ಸೀಬೆ ಎಲೆ 2 ಮಾವಿನ ಎಲೆ 2 ನೇರಳೆ ಎಲೆ 10 ತುಳಸಿ ಎಲೆ 4 ದೊಡ್ಡ ಪತ್ರೆ 200ml ನೀರಿನಲ್ಲಿ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ ಸೋಸಿ, ಉಗುರು ಬೆಚ್ಚಗಾದಾಗ 2 ಚಮಚ ಕಷಾಯಕ್ಕೆ 1 ಚಮಚ ಜೇನುತುಪ್ಪ ಬೆರೆಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ,ನೆಗಡಿ,ಕೆಮ್ಮು,ಕಫ,ವಾತ, ಪಿತ್ತ, ಜ್ವರ, ಅಜೀರ್ಣ ಸಮಸ್ಯೆ ಗುಣವಾಗುತ್ತೆ. ಒಣ ಕೆಮ್ಮು, ಅಸ್ತಮಾ ಸಹಾ ವಾಸಿಯಾಗುತ್ತೆ. ತೊಗಟೆಯನ್ನು ಗಂಧ ತೇಯ್ದು ಬಾವು, ಗಾಯ, ಹುಣ್ಣುಗಳ ಮೇಲೆ ಲೇಪನ ಮಾಡಿದರೆ ವಾಸಿಯಾಗುತ್ತೆ.

ಸೀಬೆ ಹಣ್ಣಿನಲ್ಲಿ ನಾರಿನಾಂಶ ಅಧಿಕ
ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯಿಂದ ಮುಕ್ತಿಹೊಂದಬಹುದು. ಹಸಿಕಾಯಿ ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ. ಸೀಬೆಕಾಯಿ ರಸ ತೆಗೆದು ಅದಕ್ಕೆ ಜೇನುತುಪ್ಪ ಕಲಸಿ ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಿ, ಹೃದಯವನ್ನು ಗಟ್ಟಿಗೊಳಿಸುತ್ತೆ.

ಕಣ್ಣು ನೋವು, ಕಣ್ಣು ಕೆಂಪಗೆ ಇದ್ದಾಗ ಸೀಬೆ ಹೂವಿನ ರಸ ಹಿಂಡಿ, ಅದನ್ನು ಹರಳೆಣ್ಣೆಯಲ್ಲಿ ರಂಗಳಿಸಿ, ಕಣ್ಣಿಗೆ ಎರಡು ಮೂರು ತೊಟ್ಟು ಬಿಟ್ಟರೆ ಶೀಘ್ರ ವಾಸಿಯಾಗುತ್ತೆ. ವಸಡುಗಳಲ್ಲಿ ಬಲವಿಲ್ಲದೆ ಹಲ್ಲುಗಳು ಅಲ್ಲಾಡುವುದು, ವಸುಡುಗಳಲ್ಲಿ ರಕ್ತ ಸುರಿಯುವಾಗ ಸೀಬೆ ದ್ವಾರಕಾಯಿಯನ್ನು ಜಗಿದು ತಿನ್ನುತ್ತಿದ್ದರೆ,
ವಸಡುಗಳು ಬಲಗೊಂಡು ದಂತಪಂಕ್ತಿ ಗಟ್ಟಿಯಾಗಿ ರಕ್ತಸ್ರಾವ ನಿಲ್ಲುತ್ತೆ.

ಹಸಿ ಸೀಬೆಕಾಯಿಯನ್ನು ಜಜ್ಜಿ 200ml ನೀರು ಹಾಕಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಸೋಸಿ ಉಗುರು ಬೆಚ್ಚಗಾದಾಗ ಮಜ್ಜಿಗೆಯಲ್ಲಿ ಕಲಸಿ ಕುಡಿದರೆ, ಅತಿಸಾರ ಭೇದಿ, ವಾಂತಿ ನಿಲ್ಲುತ್ತೆ.

ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣಿನ ರಸ ತೆಗೆದು,(ಬೀಜ ಬಿಸಾಕಿ) ಸೋಸಿದ ರಸಕ್ಕೆ 2 ಚಮಚ
ಜೇನುತುಪ್ಪ ಕಲಸಿ, ಅದನ್ನು ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಬಲಹೀನತೆ ದೂರವಾಗುತ್ತೆ. ಇದರಲ್ಲಿ ವಿಟಮಿನ್ C ಇದ್ದು, ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ದೊರೆಯುತ್ತದೆ.
(ಗರ್ಭಿಣಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಟಾನಿಕ್ ನಂತೆ ಅದ್ಭುತವಾಗಿ ಕೆಲಸ ಮಾಡುತ್ತೆ)
ಇದು ಹೃದಯ ಬಲ ಹೀನತೆ, ಜೀರ್ಣಕ್ರಿಯೆ, ಮೂತ್ರದಲ್ಲಿನ ಉರಿ ಮುಂತಾದ ಸಮಸ್ಯೆಗಳಿಗೂ ಅದ್ಭುತವಾಗಿ ಕೆಲಸ ಮಾಡುತ್ತೆ.

ನೋಡಿ ಹೀಗೆ ಸೀಬೆಯಲ್ಲಿ ಔಷಧೀಯ ಭಂಡಾರವೆ ತುಂಬಿದ್ದು, ಇದನ್ನು ತಿಂದರೆ ನಮ್ಮ ಆರೋಗ್ಯವು ವೃದ್ಧಿಸಲಿದೆ. ಅಂದಹಾಗೆ ಇದನ್ನು ಮಕ್ಕಳಿಂದ- ವಯೋವೃದ್ಧರು ತಿನ್ನಬಹುದು.

l ಸಂಗ್ರಹ

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...