ಕಠ್ಮಂಡು: ಸಾಮಾಜಿಕ ಜಾಲತಾಣಗಳ ನಿರ್ಬಂಧ ಮಾಡಿದ್ದಕ್ಕೆ ಯುವಕರು ದಂಗೆ ಎದ್ದಿರುವ ಕಾರಣ ಭಾರತದ ನೆರೆಯ ರಾಷ್ಟ್ರ ನೇಪಾಳ ಹೊತ್ತಿ ಉರಿಯುತ್ತಿದೆ. ಸತತ 3ನೇ ದಿನವೂ ನೇಪಾಳ ಕುದಿಯುತ್ತಿದೆ.
ಈ ಮೂಲಕ ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದ್ದು, ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಯುವಕರ ಕೋಪಾತಾಪಕ್ಕೆ ನೇಪಾಳದ ಪ್ರಧಾನಿ ಓಲಿ ಸರ್ಕಾರ ಮಂಡಿಯೂರಿದೆ. ಪರಿಣಾಮ 120 ವರ್ಷಗಳಷ್ಟು ಹಳೆಯದಾದ ಅರಮನೆ ಧಗಧಗ ಹೊತ್ತಿ ಉರಿದಿದೆ.
ಭುಗಿಲೆದ್ದ ʻಜೆನ್ ಝಡ್ʼ ರಣಕೋಪಕ್ಕೆ ಕೆಪಿ ಶರ್ಮಾ ಓಲಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಬೇಕು ಎಂದು ಯುವಕರು ಪಟ್ಟು ಹಿಡಿದು ಇಂದು ಕೂಡ ಗಲಭೆ ಸೃಷ್ಟಿಸಿದ್ರು. ಕಠ್ಮಂಡುವಿನಲ್ಲಿ ಕರ್ಫ್ಯೂ ಮೀರಿ ಯುವಕರು ದಂಗೆ ಎದ್ದಿದ್ದಾರೆ.
ಇದರ ಪರಿಣಾಮ ಅಧ್ಯಕ್ಷರ ಭವನ, ಪ್ರಧಾನಿ ನಿವಾಸ, ಸಂಸತ್ ಭವನ, ಮಾಜಿ ಪಿಎಂ ಪ್ರಚಂಡ್ ಮನೆ, ಸಚಿವರ ನಿವಾಸಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತಿದ್ದ ಏಷ್ಯಾದ ಅತಿದೊಡ್ಡ ಅರಮನೆ (Asias Largest Palace) ʻಸಿಂಹ ದರ್ಬಾರ್ʼಗೂ (Singha Durbar) ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಅರಮನೆ ಧಗಧಗಿಸಿದ್ದು, ಭಾರೀ ಪ್ರಮಾಣದ ಸಂಪತ್ತು ನಷ್ಟವಾಗಿದೆ.
120 ವರ್ಷಗಳಷ್ಟು ಹಳೆಯದಾದ ಅರಮನೆ ಧಗಧಗ: ಹೊಸ ವಿಡಿಯೋಗಳು ವೈರಲ್ ಆಗಿದ್ದು, ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಏಷ್ಯಾದ ಅತಿದೊಡ್ಡ ಅರಮನೆಯಾದ ʻಸಿಂಹ ದರ್ಬಾರ್ʼಗೂ ಬೆಂಕಿ ಹಚ್ಚಿದ್ದಾರೆ. 1903ರಲ್ಲಿ ನೇಪಾಳದ ಪ್ರಧಾನಿಯ ಅಧಿಕೃತ ನಿವಾಸವಾಗಿ ಈ ಅರಮನೆಯನ್ನ ನಿರ್ಮಿಸಲಾಗಿತ್ತು. ಬಳಿಕ ಐತಿಹಾಸಿಕ ಅರಮನೆಯಾಗಿ ಗುರುತಿಸಿಕೊಂಡಿದ್ದ ಈ ಅರಮನೆಯನ್ನ ಪ್ರವಾಸಿ ತಾಣವಾಗಿಯೂ ಮಾಡಲಾಗಿತ್ತು. ಇದೀಗ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದಲ್ಲದೇ ಇದ್ದಬದ್ದ ವಸ್ತುಗಳೆಲ್ಲವನ್ನು ಲೂಟಿ ಮಾಡಿದೆ.
ನೇಪಾಳದಲ್ಲಿ ಅರಾಜಕತೆ ಸೃಷ್ಟಿಗೆ ಕಾರಣವೇನು?
* ಸಾಮಾಜಿಕ ಜಾಲತಾಣಗಳ ನಿರ್ಬಂಧ ಹೋರಾಟ ನೆಪವಷ್ಟೇ
* ಕೆಪಿ ಶರ್ಮಾ ಓಲಿ ಸಮ್ಮಿಶ್ರ ಸರ್ಕಾರ ವಿರುದ್ಧ ಇದ್ದ ಅಸಮಾಧಾನ
* ಭ್ರಷ್ಟಾಚಾರ, ಪಾರದರ್ಶಕತೆ ಕೊರತೆ ಆರೋಪ
* ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ
* ಆರ್ಥಿಕ ಅಭಿವೃದ್ಧಿಯಲ್ಲಿನ ಅಸಮಾನತೆ ಬಗ್ಗೆ ಟೀಕೆ

ನೇಪಾಳದ ಆಡಳಿತ ವಹಿಸಿಕೊಂಡ ಸೇನೆ: ಇನ್ನೂ ನೇಪಾಳದಲ್ಲಿ ಮೂರನೇ ದಿನವೂ ಪ್ರತಿಭಟನೆ ನಿಲ್ಲದ ಹಿನ್ನೆಲೆ ಸೇನೆಯು ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಶಿಗ್ಡೆಲ್ ಆಡಳಿತ ವಹಿಸಿಕೊಂಡಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೆ ಅಶೋಕ್ ರಾಜ್ ಶಿಗ್ಡೆಲ್ ನೇತೃತ್ವದಲ್ಲೇ ಆಡಳಿತ ನಡೆಯಲಿದೆ. ನೇಪಾಳದ ಸ್ವಾತಂತ್ರ್ಯ, ಸಾರ್ವಭೌಮತ್ವ, ರಾಷ್ಟ್ರೀಯ ಏಕತೆ, ನೇಪಾಳಿಗರ ಸುರಕ್ಷತೆ ಕಾಪಾಡಲು ಬದ್ಧ ಅಂತ ಅಶೋಕ್ ರಾಜ್ ಶಿಗ್ಡೆಲ್ ಹೇಳಿದ್ದಾರೆ.
Related


You Might Also Like
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 47,848 ಮನೆಗಳು ಮಂಜೂರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಹಿಂದಿನ ಬಾರಿ ನಮ್ಮ ಸರ್ಕಾರವಿದ್ದಾಗ 43,874 ಮನೆಗಳು ಸೇರಿದಂತೆ ಒಟ್ಟು 47,848 ಮನೆಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 13,303...
ಅರ್ಹರಿಗೆ ತಕ್ಷಣವೇ ಬಿಪಿಎಲ್ ಕಾರ್ಡ್ ನೀಡಬೇಕು: ಅಧಿಕಾರಿಗಳಿಗೆ ಸಿಎಂ ತಾಕೀತು
ಬೆಂಗಳೂರು: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ, ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅರ್ಹರು ಯಾರಾದರೂ ಬಿಟ್ಟು ಹೋಗಿದ್ದರೆ...
ಸಾರಿಗೆ ನೌಕರರ ವೇತನ ಹೆಚ್ಚಳ-38 ತಿಂಗಳ ಹಿಂಬಾಕಿ ಪ್ರಕರಣ ಸೆ.17ಕ್ಕೆ ಮುಂದೂಡಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ಭ್ರಷ್ಟ ಕಾರ್ಮಿಕ ಅಧಿಕಾರಿಗೆ ಕೆಆರ್ಎಸ್ ಪಕ್ಷದಿಂದ ನಾಗರೀಕ ಸನ್ಮಾನ
ಬೆಂಗಳೂರು: ಕಾರ್ಮಿಕ ಪರವಾನಿಗೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಗೆ ಸಿಕ್ಕಿದ ಕಾರ್ಮಿಕ ಅಧಿಕಾರಿಗೆ ಕೆಆರ್ಎಸ್ ಪಕ್ಷದ ವತಿಯಿಂದ ಸನ್ಮಾನ ಮಾಡಲು ಕಚೇರಿಗೆ ಹೋದಾಗ ಅಧಿಕಾರಿ...
KSRTC ಚಿಲ್ಲರೇ ಗಲಾಟೆ: ಸಂಸ್ಥೆ ನೌಕರನ ವಿರುದ್ಧ ಮೃಗದಂತೆ ವರ್ತಿಸಿ ರಾಜೀನಾಮೆ ಕೇಳಿದ ವಿಭಾಗೀಯ ನಿಯಂತ್ರಣಾಧಿಕಾರಿ
ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಾಗೂ ಸಂಘಟನೆಗಳ ಬಳಿ ನೋವು ತೋಡಿಕೊಂಡ ನೊಂದ ನೌಕರ ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್...
KSRTC: ಚಿಲ್ಲರೆಗಾಗಿ ಗಲಾಟೆ ಘಟನೆ- ಕಂಡಕ್ಟರ್ಗೆ ಬೈದು ರಾಜೀನಾಮೆ ಕೇಳಿದ ಡಿಸಿ ಅಶೋಕ್ ವಿರುದ್ಧ ದೂರು ದಾಖಲು
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ...
ಸಾರಿಗೆ ಬಸ್ಗಳು ಅಪಘಾತವಾದರೆ ಚಾಲಕರಿಗೆ ಡಿಎಂಗಳು ಜಾಮೀನು ಕೊಡಬೇಕು: ಸಿಟಿಎಂ ಆದೇಶ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಅಪಘಾತವಾದ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡುವ ವ್ಯವಸ್ಥೆಯನ್ನು ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ಮುಖ್ಯ ಸಂಚಾರ...
ಬದುಕಲಾಗುತ್ತಿಲ್ಲ ದಯಮಾಡಿ ನನಗೆ ವಿಷ ಕೊಡಿ: ನ್ಯಾಯಾಧೀಶರಲ್ಲಿ ನಟ ದರ್ಶನ್ ಮನವಿ
ಬೆಂಗಳೂರು: ದಯಮಾಡಿ ನನಗೆ ವಿಷ ಕೊಡಿ ಎಂದು ನಟ ದರ್ಶನ್ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಹಾಜರಾದ ವೇಳೆ ಮನವಿ ಮಾಡಿದ್ದಾರೆ....
ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲಪತ್ತೆ: 1.17 ಕೋಟಿ ರೂ.ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ- ಇಬ್ಬರ ವಿರುದ್ಧ FIR ದಾಖಲು
ಯಾದಗಿರಿ: ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಮಾರಾಟ ಮಾಡುತ್ತಿದ್ದ ಅಪ್ಪ ಮಕ್ಕಳಿಗೆ ಸೇರಿದ ಎರಡು ರೈಸ್ ಮಿಲ್ಗಳ ಮೇಲೆ ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ...