NEWSನಮ್ಮಜಿಲ್ಲೆಮೈಸೂರು

ಬೋನಿನಲ್ಲಿದ್ದ ಕರುವ ಬೇಟೆಯಾಡಲು ಬಂದು ತಿನ್ನದೆ ಅಚ್ಚರಿ ಮೂಡಿಸಿದ ಚಿರತೆ !

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಚ್ಚರಿಯೊಂದು ನಡೆದಿದೆ. ಬೋನಿನಲ್ಲಿ ಹಸುವಿನ ಕರು ಇದ್ದರೂ ಅದನ್ನು ತಿನ್ನದೆ ಚಿರತೆ ಹಾಗೆಯೇ ಅದರ ಜತೆಗೆ ಇದ್ದಿದ್ದು ಭಾರಿ ಅಚ್ಚರಿ ಮೂಡಿಸಿದೆ.

ಹುಲಿ ಸೆರೆಗೆ ಎಂದು ಬೋನ್ ಇಡಲಾಗಿತ್ತು. ಆದರೆ ಆ ಬೋನಿ​​ನಲ್ಲಿ ಚಿರತೆ ಬಿದ್ದಿದೆ. ಬೋನಿನಲ್ಲಿ‌ ಇರಿಸಿದ್ದ ಹಸುವಿನ ಕರು ಭಕ್ಷಿಸಲು ಬಂದ ಚಿರತೆ ಬಂಧಿಯಾಗಿದ್ದು, ಪರಿಣಾಮ ಒಂದೇ‌ ಬೋನಿನಲ್ಲಿ‌ ಕರು‌ ಮತ್ತು ಚಿರತೆ ಚಿರತೆ ಎರಡೂ ಇದ್ದರೂ ಕರುವನ್ನು ಮಾತ್ರ ಅದು ಏನು ಮಾಡಿಲ್ಲ.

ಇನ್ನು ತಾನು ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ ಚಿರತೆ ಗಾಬರಿಯಾಗಿದೆ. ಭಯದಲ್ಲಿ ಹಸುವಿನ ಕರುವಿಗೆ ಯಾವುದೇ ಅಪಾಯ ಮಾಡಿಲ್ಲ. ಚಿರತೆ ಮನಸ್ಸು ಮಾಡಿದ್ದರೆ ಸುಲಭವಾಗಿ ಅದನ್ನು ತಿನ್ನಬಹುದಿತ್ತು. ಆದರೆ ಕರವನ್ನು ಮುಟ್ಟದೇ ಇರೋದನ್ನ ನೋಡಿದ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಎಚ್.ಡಿ.ಕೋಟೆ ಪಟ್ಟಣದ ನಿವಾಸಿ ಹೆತ್ತನಾಯ್ಕರ ಜಮೀನಿನಲ್ಲಿ ಬೋನು ಇಡಲಾಗಿತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿದ್ದು, ಹುಲಿ ಬಂದಿಲ್ಲ.

ಇನ್ನು ಅಚ್ಚರಿ ಎಂದರೆ ಹಸುವಿನ ಕರು ಇನ್ನು ಚಿಕ್ಕದಾಗಿದ್ದರಿಂದಲೋ ಏನು ಚಿರತೆ ಆ ಕರುವಿಗೆ ಏನು ಮಾಡಿಲ್ಲ. ಅಂದರೆ ಚಿರತೆ ಬೇಟೆಯಾಡುವುದಕ್ಕೂ ಇದು ಕರು ಇದನ್ನು ಬೇಟೆಯಾಡುವುದು ಸಲ್ಲ ಎಂದು ಅಂದುಕೊಂಡಿತ್ತೇನೋ? ಇಲ್ಲ ಚಿರತೆಗಳು ಚಿಕ್ಕಚಿಕ್ಕ ಕರುಗಳನ್ನು ಬೇಟೆಯಾಡುವುದಿಲ್ಲವೇನೋ ಗೊತ್ತಿಲ್ಲ. ಆದರೆ ಇದು ಪ್ರಕೃತಿಯ ಮಹಿಮೆ ಹೇಗಿದೆ ಎಂಬುದನ್ನು ಮಾತ್ರ ನಾವು ಇಲ್ಲಿ ಕಾಣುತ್ತಿದ್ದೇವೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!