KSRTC ಬಸ್ ಕಂಡಕ್ಟರ್, ಚಾಲಕರ ವಿರುದ್ಧ ದುರ್ವತನೆ ದಂಡನೀಯ ಅಪರಾಧ: ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಿದ ಪ್ರೌಢಶಾಲೆ

ಬಂಟ್ವಾಳ: ಕರ್ನಾಟಕೆರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ತಮ್ಮ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆಯೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆಯಲ್ಲಿರುವ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆ ಕೊಟ್ಟಿದೆ.
ಎಲ್ಲ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಶಿಸ್ತಿನೊಂದಿಗೆ ಹಾಗೂ ಗೌರವದಿಂದ ವರ್ತಿಸಬೇಕು. ಬಸ್ ಕಂಡಕ್ಟರ್, ಚಾಲಕ ಅಥವಾ ಸಹಪ್ರಯಾಣಿಕರೊಂದಿಗೆ ದುರ್ವತ್ರನೆ ಸಹಿಸಲ್ಪಡುವುದಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರು ನೋಟಿಸ್ ಕೊಟ್ಟಿದ್ದಾರೆ.
ಇದರ ಜತೆಗೆ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ಸ್ಪಷ್ಟವಾಗಿ ಸೂಚನೆ ನೀಡಿದ್ದು, ಅವುಗಳಲ್ಲಿ ಪ್ರಮುಖವಾಗಿ 1) ಕೆಎಸ್ಆರ್ಟಿಸಿ ಸಿಬ್ಬಂದಿಗಳೊಂದಿಗೆ ವಿನಮ್ರವಾಗಿ ಮಾತನಾಡಿರಿ. 2) ವಾದ-ವಿವಾದ, ಗದ್ದಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸಬೇಡಿ.
3) ಟಿಕೆಟ್‌ಗಳು, ಪಾಸ್‌ಗಳು ಮತ್ತು ಕುಳಿತ ಸ್ಥಳಗಳ ಬಗ್ಗೆ ಕಂಡಕ್ಟರ್ ಸೂಚನೆಗಳನ್ನು ಪಾಲಿಸಿರಿ. 4) ಸೀಟು, ಕಿಟಕಿ ಅಥವಾ ಬಸ್‌ನ ಯಾವುದೇ ಆಸ್ತಿಯನ್ನು ಹಾನಿಗೊಳಿಸಬೇಡಿ ಹಾಗೂ 5) ಸಾಮಾನ್ಯ ಶಿಸ್ತು ಪಾಲಿಸಿ, ಸಾರ್ವಜನಿಕ ಸಾರಿಗೆ ನಿಯಮಗಳಿಗೆ ಗೌರವ ನೀಡಿರಿ ಎಂದು ಸಲಹೆ ನೀಡಿದ್ದಾರೆ.
ಇನ್ನು ದುರ್ವತ್ರನೆಗೆ ವಿಧಿಸಲಾಗುವ ಶಿಕ್ಷೆಗಳ ಬಗ್ಗೆಯೂ ವಿದ್ಯಾರ್ಥೀಗಳಲ್ಲಿ ಜಾಗೃತಿ ಮೂಡಿಸಿದ್ದು ಕಾನೂನಿನ ಅರಿವನ್ನು ತಿಳಿಸಿದ್ದಾರೆ. ಅದರಲ್ಲಿ ಮೊದಲ ಬಾರಿ: ಎಚ್ಚರಿಕೆ ನೀಡಿ ಶಾಲೆ/ ಕಾಲೇಜಿಗೆ ವರದಿ ಮಾಡಲಾಗುತ್ತದೆ.
ಪುನರಾವರ್ತನೆ: ವಿದ್ಯಾರ್ಥಿ ಬಸ್ ಪಾನ್ ರದ್ದುಪಡಿಸಲಾಗುವುದು ಮತ್ತು ಶಾಲೆ/ ಕಾಲೇಜಿನಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಗಂಭೀರ ದುರ್ವತ್ರನೆಗಳು (ಅಪಮಾನ, ಬೆದರಿಕೆ, ಹಲ್ಲೆ ಅಥವಾ ಆಸ್ತಿ ಹಾನಿ) ತೂರಿದರೆ ಭಾರತೀಯ ದಂಡ ಸಂಹಿತೆ ಮತ್ತು ವಾಹನ ಕಾಯ್ದೆಯಡಿ ಪೊಲೀಸ್ ದೂರು. ದಂಡ, ಶಾಲೆ/ ಕಾಲೇಜಿನಿಂದ ಅಮಾನತು ಅಥವಾ ಕಾನೂನು ಕ್ರಮ (ಗಂಭೀರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಸಹ).

ಗಮನಿಸಿ: ಬಸ್ ಕಂಡಕ್ಟರ್ ಮತ್ತು ಚಾಲಕರು ಸರ್ಕಾರಿ ಸಿಬ್ಬಂದಿ. ಅವರ ವಿರುದ್ಧ ದುರ್ವತನೆ ತೋರುವುದು ಕಾನೂನಿನಡಿಯಲ್ಲಿ ದಂಡನೀಯ ಅಪರಾಧ. ಹೀಗಾಗಿ ನಾವು ಜವಾಬ್ದಾರಿಯುತವಾಗಿ ಪ್ರಯಾಣಿಸಿ, ಸಾರ್ವಜನಿಕ ಸಾರಿಗೆಯ ಗೌರವವನ್ನು ಕಾಪಾಡೋಣ ಎಂದು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು ಸೂಚನೆ ನೀಡಿದ್ದಾರೆ.
Related
