NEWSನಮ್ಮಜಿಲ್ಲೆ

NWKRTC ಬೆಳಗಾವಿ ಅಧಿಕಾರಿಗಳ ಬೇಜವಾಬ್ದಾರಿ: ಘಟಕ-1 ಮತ್ತು 2, ಮುಖ್ಯ ತಂಗುದಾಣದಲ್ಲಿ ಕುಡಿಯುವ ನೀರಿಗಾಗಿ ಸಿಬ್ಬಂದಿಗಳ ಪರದಾಟ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ಬೆಳಗಾವಿ ಘಟಕ -1 ಮತ್ತು 2 ಹಾಗೂ ಮುಖ್ಯ ತಂಗುದಾಣದಲ್ಲಿ ಕುಡಿಯುವ ನೀರಿಲ್ಲದೆ ನಿತ್ಯ ಸಂಸ್ಥೆಯ ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತುರ್ತು ಕ್ರಮ ತೆಗೆದುಕೊಂಡು ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಹಾಗೂ ವಿಭಾಗಗದ ಮೇಲಧಿಕಾರಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಸಲ್ಲಿಸಿದ್ದಾರೆ.

ಸಂಸ್ಥೆಯ ಸಿಬ್ಬಂದಿಗಳು ಎಂಡಿ ಅವರನ್ನು ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸುವುದಕ್ಕೆ ಕೆಳಹಂತದ ಅಧಿಕಾರಿಗಳು ಅವಕಾಶ ಮಾಡಿಕೊಡುವುದಿಲ್ಲ. ಅಂದರೆ ಎಂಡಿ ಅವರಿಗೆ ಸಮಸ್ಯೆ ತಿಳಿಸಲು ಹೋಗುವ ಸಿಬ್ಬಂದಿಗಳನ್ನು ಕಚೇರಿಯ ಬಾಗಿಲಿನಲ್ಲೇ ತಡೆದು ಮೇಡಂ ಅವರು ಈಗ ಬಿಸಿ ಇದ್ದಾರೆ. ಅವರನ್ನು ಭೇಟಿ ಮಾಡುವುದಕ್ಕೆ ಆಗುವುದಿಲ್ಲ ಹೋಗಿ ಎಂದು ಕಳಿಸಿ ಬಿಡುತ್ತಾರೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಸಿಬ್ಬಂದಿಗಳು ಮಾಡಿರುವ ಮನವಿ ಏನು?: ಬೆಳಗಾವಿ ವಿಭಾಗದ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವ ವಿಷಯ ಏನೆಂದರೆ ಬೆಳಗಾವಿ ಘಟಕ-1 ಬೆಳಗಾವಿ ಘಟಕ-2 ಹಾಗೂ ಮುಖ್ಯ ಬಸ್ ತಂಗುದಾಣದಲ್ಲಿ ಕುಡಿಯುವ ನೀರಿನ ಕೊರತೆ ಸುಮಾರು ದಿನಗಳಿಂದ ಇದೆ.

ಆ ಸಮಸ್ಯೆಯನ್ನು ಇವತ್ತಿನವರೆಗೂ ಯಾವುದೇ ಅಧಿಕಾರಿಗಳು ಈ ಕಡೆಗೆ ಗಮನ ಹರಿಸದೇ ಇರುವುದು ನಮ್ಮೆಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ತವ್ಯಕ್ಕಾಗಿ ನಾವೆಲ್ಲ ದೂರದ ಊರಿನಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ನಡುವೆ ಬಾಯಾರಿಕೆಯಾದರೆ ಕುಡಿಯುವ ನೀರಿಲ್ಲದೇ ಪರದಾಡುವಂತಾಗಿದೆ.

ಇನ್ನು ನಾವೆಲ್ಲ ಘಟಕದಲ್ಲಿ ಮೌಖಿಕವಾಗಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದರೂ ಈವರೆಗೂ ಯಾರು ಅದರ ಗೋಜಿಗೆ ಹೋದಂತೆ ಕಾಣಿಸುತ್ತಿಲ್ಲ. ದಯವಿಟ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿ ವಿನಂತಿಸುತ್ತೇವೆ. ಇದನ್ನೇ ಮನವಿ ಪತ್ರ ಅಂತ ತಿಳಿದು ಈ ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಲು ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ಸಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

Advertisement
Megha
the authorMegha

Leave a Reply

error: Content is protected !!