NEWSದೇಶ-ವಿದೇಶನಮ್ಮರಾಜ್ಯ

ಸೆ.23ರಂದು ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ EPS-95 NAC ಜಿಲ್ಲಾ ಪದಾಧಿಕಾರಿಗಳ ಬೃಹತ್‌ ಸಭೆ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕದ ಎಲ್ಲ ಜಿಲ್ಲೆಗಳ ಇಪಿಎಸ್-95 ಎನ್‌ಎಸಿ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಇದೇ ಸೆ. 23ರಂದು ರಾಷ್ಟ್ರೀಯ ಸಂಘರ್ಷ ಸಮಿತಿ ಹಮ್ಮಿಕೊಂಡಿದೆ ಎಂದು ಸಮಿತಿಯ ಮುಖ್ಯ ರಾಷ್ಟ್ರೀಯ ಸಂಯೋಜಕ ರಮಾಕಾಂತ ನರಗುಂದ ತಿಳಿಸಿದ್ದಾರೆ.

ಅಂದು ಬೆಳಗ್ಗೆ 1030ಕ್ಕೆ ಗಾಂಧಿನಗರದಲ್ಲಿರುವ (ಮೆಜೆಸ್ಟಿಕ್)  ಗುಬ್ಬಿ ವೀರಣ್ಣ ಥಿಯೇಟರ್‌ ಮುಂಬಾಗದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸಭೆ ಆಯೋಜಿಸಿದ್ದು ಸುಮಾರು 81ಲಕ್ಷ ನಿವೃತ್ತರಿಗೆ ಕನಿಷ್ಠ ಪಿಂಚಣಿ 7500 ರೂ. ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು.

ಇನ್ನು ದೇಶಾದ್ಯಂತ ಭವಿಷ್ಯ ನಿಧಿಯ ನೌಕರರ ಪಿಂಚಣಿ ಯೋಜನೆ-95ರಡಿಯಲ್ಲಿ 81 ಲಕ್ಷ ಪಿಂಚಣಿದಾರರಿದ್ದಾರೆ. ಈ ಯೋಜನೆಯಲ್ಲಿ ಕನಿಷ್ಠ ಪಿಂಚಣಿ 1000 ರೂ. ಗಳನ್ನು ಪ್ರಸ್ತುತ ನಿಗದಿ ಮಾಡಲಾಗಿದೆ. ನಮ್ಮ ಎಲ್ಲ ನಿವೃತ್ತ ಉದ್ಯೋಗಿಗಳು EPS 95 ಪಿಂಚಣಿ ನಿಧಿಗೆ ಕೊಡುಗೆ ನೀಡುವುದರ ಜತೆಗೆ ಸುಮಾರು 30 ರಿಂದ 35 ವರ್ಷಗಳವರೆಗೆ ಸೇವೆ ಸಲ್ಲಿಸಿದ ನಂತರ ಸರಾಸರಿ 1175 ರೂ.ಗಳನ್ನು ತಿಂಗಳಿಗೆ ಕಡಿಮೆ ಪಿಂಚಣಿ ಪಡೆಯುತ್ತಿರುವುದು ಕರುಣಾಜನಕ ಸ್ಥಿತಿಯಾಗಿದೆ.

ಆದ್ದರಿಂದ ವಯೋವೃದ್ಧ ದಂಪತಿಗಳಿಗೆ ಎರಡು ದಿನದ ಊಟ, ಆರೋಗ್ಯ ವೆಚ್ಚಗಳಿಗೆ ದರಗಳು ಹೆಚ್ಚಿರುವ ಈ ಸಮಯದಲ್ಲಿ ಸಿಗುತ್ತಿರುವ ಈ ಪಿಂಚಣಿ ಸಾಕಾಗುವುದಿಲ್ಲ! ಹೀಗಾಗಿ ನಾವು ಈ ನಿಟ್ಟಿನಲ್ಲಿ ಬಹುತೇಕ ಎಲ್ಲ ಸಂಸದರನ್ನು ಭೇಟಿಯಾಗಿ ಅವರ ಸಹಾಯ ಮತ್ತು ಮಧ್ಯಸ್ಥಿಕೆಗಳನ್ನು ಕೋರಿ ಅವರಿಗೆ ಪತ್ರಗಳನ್ನು ಸಲ್ಲಿಸಿದ್ದೇವೆ.

ಇನ್ನು ನಮ್ಮ ನಾಯಕರು ನಮ್ಮ ಪ್ರಧಾನಿಯನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ ಮತ್ತು ಅವರು ನಮ್ಮ ಕಷ್ಟಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಈ ಹಿನ್ನೆಲೆಯಲ್ಲಿ ಕಮಾಂಡರ್ ಅಶೋಕ್ ರಾವತ್ ವೀರೇಂದ್ರ ಸಿಂಗ್ ಸಮರ್ಥ ನಾಯಕತ್ವದಲ್ಲಿ ನಮ್ಮ ರಾಷ್ಟ್ರೀಯ ಸಂಘರ್ಷ ಸಮಿತಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಮ್ಮ ಸಂಘಟನೆ ಸುದೃಢವಾಗಿದ್ದು ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ.

Advertisement

ಈ ನಮ್ಮ ಹೋರಾಟದ ನಡುವೆ ಅಕ್ಟೋಬರ್‌ 11 ಮತ್ತು 12 ರಂದು ಕೇಂದ್ರ ಸರ್ಕಾರದ ಕೇಂದ್ರೀಯ ಭವಿಷ್ಯ ನಿಧಿ ಸಂಘಟನೆಯ ಉನ್ನತ ಮಟ್ಟದ ಸಮಿತಿಯಾದ ಸಿಬಿಟಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧಾರವಾಗಿದೆ. ಈ ಸಂದರ್ಭದಲ್ಲಿ ಇಪಿಎಸ್ 95 ಪಿಂಚಣಿದಾರರ ಕನಿಷ್ಠ ಪಿಂಚಣಿ ಹಾಗೂ ಇತರೆ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೆಚ್ಚುವರಿ ಪಿಂಚಣಿಯನ್ನು ಜಾರಿಗೊಳಿಸಿ ಎಂದು ನಾವು ಆಗ್ರಹ ಮಾಡುತ್ತಿದ್ದೇವೆ.

ಈ ಎಲ್ಲ ಅಂಶಗಳ ಬಗ್ಗೆ ಎನ್‌ಎಸಿ ಸೆ.23ರಂದು ಹಮ್ಮಿಕೊಂಡಿರುವ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಹಾಗಾಗಿ ಈ ಮಹತ್ವದ ಸಭೆಗೆ ಸಮಸ್ತರು ಆಗಮಿಸ ಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ರಾಜ್ಯ ಸಂಯೋಜಕರಾದ ಆರ್. ಸುಬ್ಬಣ್ಣ ( ಮೊ.ನಂ.99026 25795) ಅವರನ್ನು ಸಂಪರ್ಕಿಸಲು ಕೋರಿದ್ದಾರೆ.

Megha
the authorMegha

Leave a Reply

error: Content is protected !!