NEWSನಮ್ಮರಾಜ್ಯಮೈಸೂರುಸಂಸ್ಕೃತಿ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಖಾಸಗಿ ದರ್ಬಾರ್​ ಆರಂಭ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಖಾಸಗಿ ದರ್ಬಾರ್​ ಆರಂಭವಾಗಿದೆ. ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಿದ್ದು, ರಾಜವಂಶಸ್ಥ ಯದುವೀರ್ ಒಡೆಯರ್​ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನಡೆಸುತ್ತಿದ್ದಾರೆ.

ಬೆಳಗ್ಗೆ 5.30 ರಿಂದ 6.45 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗಿತ್ತು. ಬಳಿಕ ಬೆಳಗ್ಗೆ 9:55 ರಿಂದ 10 : 15 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಯಿತು.

ಬೆಳಗ್ಗೆ 11: 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಮಹಿಳೆಯರು ಕಳಸ ಹೊತ್ತು ಆಗಮಿಸಿದ್ದು, ಮಂಗಳವಾದ್ಯದೊಂದಿಗೆ ಸವಾರ್ ತೊಟ್ಟಿಯ ಬಳಿ ಪೂಜಾ ಕಂಕೈರ್ಯಗಳು ನೆರವೇರಿದವು. ನಂತರ ಮಧ್ಯಾಹ್ನ 2:05 ರ ಒಳಗೆ ಚಾಮುಂಡೇಶ್ವರಿ ಅಮ್ಮನವರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ವಿಜಯ ಯಾತ್ರೆ ಸಾಗಿತು.

ಸೆಪ್ಟೆಂಬರ್​ 23 ರಿಂದ 29ರ ಸಂಜೆವರೆಗೆ ಖಾಸಗಿ ದರ್ಬಾರ್ ಜರುಗಲಿದೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ 10:10 ರಿಂದ 10:30 ರ ಒಳಗೆ ಒಡೆಯರ್ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ. ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನಡೆಯಲಿದೆ.

ಆಯುಧ ಪೂಜೆಯ ದಿನದಂದು ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ನಡೆಯಲಿದೆ. ಬಳಿಕ ಬೆಳಗ್ಗೆ 7:30 ರಿಂದ 7:42 ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸ ಆಯುಧಗಳನ್ನ ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನದ ಕಳುಹಿಸಿ ಪೂಜೆ ನೆರವೇರಿಸಲಾಗುವುದು.

ನಂತರ ಬೆಳಗ್ಗೆ 8 ರಿಂದ 8: 40 ರ ಒಳಗೆ ಕತ್ತಿ ಹಾಗೂ ಖಾಸ ಆಯುಧಗಳನ್ನ ಕಲ್ಯಾಣ ಮಂಟಪಕ್ಕೆ ಕರೆತಂದು ಪೂಜೆ. ಬೆಳಗ್ಗೆ 10: 35 ಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ಜರುಗಲಿದೆ. ಅಂದು ಸಂಜೆ ಸಿಂಹ ಹಾಗೂ ಯದುವೀರ್, ತ್ರಿಷಿಕಾ ಕುಮಾರಿ ಒಡೆಯರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

Advertisement

ಅಕ್ಟೋಬರ್ 2 ರಂದು ಬೆಳಗ್ಗೆ 10 ಗಂಟೆಗೆ ವಿಜಯ ದಶಮಿ ಪೂಜೆ ನಡೆಯಲಿದೆ. ಬಳಿಕ ಬೆಳಗ್ಗೆ 10:55ಕ್ಕೆ ವಿಜಯ ಯಾತ್ರೆ ಆರಂಭಗೊಳ್ಳಲಿದೆ. ಎಲ್ಲಾ ಪೂಜೆ ಕೈಂಕರ್ಯ ಮುಗಿದ ಬಳಿಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿ ಸಾಗಲಿದೆ.

Megha
the authorMegha

Leave a Reply

error: Content is protected !!