ಬೆಂಗಳೂರು: ಇಂದಿಗೆ 45 ವರ್ಷಗಳ ಹಿಂದೆ, 26.6.1975, ಬೆಳಗ್ಗೆ 9 ಗಂಟೆಗೆ ನನಗೆ “#ತುರ್ತುಪರಿಸ್ಥಿತಿ” ಎಂಬ ಪದದ ಪರಿಚಯವಾಯಿತು.
ಅಂದು ಬೆಳಗ್ಗೆ ಬೆಂಗಳೂರಿಗೆ ಸಂಸದೀಯ ನಿಯೋಗ ದಲ್ಲಿ ಬಂದಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾನಿ, ಮಧು ದಂಡವತೆ, ಶ್ಯಾಮನಂದನಮಿಶ್ರ ಮುಂತಾದ ದೇಶದ ದೊಡ್ಡ ನಾಯಕರನ್ನು ಶಾಸಕರ ಭವನದಿಂದ ಏನೂ ಕಾರಣ ನೀಡದೇ ಬಂಧಿಸಿ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು.
ಅಂದೇ ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕಿನ ಬಳಿ ನಡೆದ ತುರ್ತುಪರಿಸ್ಥಿತಿಯ ವಿರುದ್ಧದ ಮೊದಲ ಪ್ರತಿಭಟನೆಯಲ್ಲಿ ಭಾಗಿಯಾದೆ.
ಅಂದಿನ ಮತ್ತು ಆ ನಂತರದ ಹೋರಾಟದ, ಕರಪತ್ರಗಳನ್ನು ಕದ್ದು ಸಾಗಿಸುತ್ತಿದ್ದ, ಗುಪ್ತ ಸಭೆಗಳಲ್ಲಿ ಭಾಗವಹಿಸಿದ, ಅದೇ ವರ್ಷ ನವೆಂಬರ್ 7 ರಂದು ಅಶೋಕಾ ಹೋಟೆಲ್ ನಲ್ಲಿ ಬಂಧನಕ್ಕೀಡಾದ, ನಾಲ್ಕು ದಿನ ಹೈಗ್ರಂಡ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಆತಿಥ್ಯ “ಅನುಭವಿಸಿದ”, ನವೆಂಬರ್ 10 ರ ನಂತರದ 15 ತಿಂಗಳ ಬೆಂಗಳೂರು ಕೇಂದ್ರ ಸೆರೆಮನೆಯಲ್ಲಿ ದೊರಕಿದ ಬಹಳ ದೊಡ್ಡ ವ್ಯಕ್ತಿಗಳ ಸಹವಾಸ…
ಇವುಗಳು ನನ್ನ ಸ್ಮೃತಿಪಟಲದಿಂದ ಎಂದೂ ಮಾಸುವುದಿಲ್ಲ. ನನಗೆ ನಿಜವಾದ ಶಿಕ್ಷಣ ದೊರಕ್ಕಿದ್ದು ಆ ಅವಧಿಯಲ್ಲಿ ಎಂಬುದನ್ನು ಸ್ಮರಿಸಿಕೊಳ್ಳುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ದೇವರಾಜ್ ಸರ್… ಸಚಿವ ಸುರೇಶ್ ಕುಮಾರ್ ಅವರು ಫೇಸ್ ಬುಕ್ ಪೇಜ್ ನಲ್ಲಿ ಯಾವುದೇ ಅಕ್ಷರ ದೋಷವಿಲ್ಲದಂತೆ ಎಷ್ಟು ಚೆನ್ನಾಗಿ ಬರೆದಿದ್ದಾರೆ, ಆದರೆ ನಿಮ್ಮ ಸುದ್ದಿಯಲ್ಲಿ ಬಹಳ ದೋಷವಿದೆ. ದಯವಿಟ್ಟು ನಿಮ್ಮ ಎಲ್ಲಾ ಹಾಗೂ ಮುಂದಿನ ಸುದ್ದಿಗಳಲ್ಲಿರುವ ಅಕ್ಷರ ದೋಷಗಳನ್ನು ಸರಿಪಡಿಸಿ.