Vijayapatha – ವಿಜಯಪಥ
Friday, November 1, 2024
NEWSದೇಶ-ವಿದೇಶ

ಚೀನಾ ಮೇಲೆ ಡಿಜಿಟಲ್ ಏರ್‌ಸ್ಟ್ರೈಕ್: ಗೂಗಲ್ ಪ್ಲೇಸ್ಟೋರ್, ಆಪ್ ಸ್ಟೋರ್‌ನಿಂದ ಟಿಕ್‌ಟಾಕ್‌ ಔಟ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಭಾರತದ ವಿರುದ್ಧ ಕಾಲು ಕೆರೆದುಕೊಂಡು ಸುಖ ಸುಮ್ಮನೆ ಬೀದಿ ರಂಪಮಾಡುತ್ತಿರುವ ಚೀನಾ ಮೇಲೆ ಡಿಜಿಟಲ್ ಏರ್‌ಸ್ಟ್ರೈಕ್ ಆರಂಭಗೊಂಡಿದ್ದು, ಇದರಿಂದ ಸಿಟ್ಟಿಗೆದ್ದಿರುವ ಭಾರತದಿಂದ ನಿಷೇಧಿಕ ಟಿಕ್‌ಟಾಕ್ ಆಪ್‌ನ್ನು ಗೂಗಲ್ ಪ್ಲೇಸ್ಟೋರ್ ಹಾಗೂ ಆಪ್ ಸ್ಟೋರ್ ಗಳಿಂದ ತೆಗೆದುಹಾಕಲಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಎರಡು ದಿನದ ಹಿಂದಷ್ಟೆ ಚೀನಾದ ಸುಮಾರು 59 ಆಪ್‌ಗಳನ್ನು ಭಾರತ ನಿಷೇಧಿಸಿ ಚೀನಾಕ್ಕೆ ಬಿಸಿ ಮುಟ್ಟಿಸಿತ್ತು. ಅದರ ಬೆನ್ನಲ್ಲೇ ಅದನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಇಂದು ಟಿಕ್‌ಟಾಕ್‌ ಆಪ್‌ನ್ನು ತೆಗೆದುಹಾಕಲಾಗಿದೆ.

ಇನ್ನು ದೇಶದ ಸಾರ್ವಭೌಮತೆ ಹಾಗೂ ಐಕ್ಯತೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿ  ಗಡಿಯಲ್ಲಿ ತಗಾದೆ ತೆಗೆದಿರುವ ಚೀನಾ ರಾಷ್ಟ್ರಕ್ಕೆ ಈ ಮೂಲಕ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

ಭಾರತ ಸರ್ಕಾರ ನಿಷೇಧಿಸಿರುವ ಈ 59 ಆಪ್‌ಗಳನ್ನು ಇನ್ನು ಮುಂದೆ ಪ್ಲೇಸ್ಟೋರ್ ಅಥವಾ ಆ್ಯಪ್ ಸ್ಟೋರ್ ನಿಂದ ಡೌನ್’ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ.

ಚೀನಾ ಟಿಕ್ ಟಾಕ್ ಆಪ್ನ್ನು ಭಾರತೀಯರು ಭಾರಿ ಸಂಖ್ಯೆಯಲ್ಲಿ ಬಳಕೆ ಮಾಡುತ್ತಿದ್ದರು. ಸುಮಾರು 10 ಕೋಟಿ ಜನರು ಈ ಆಪ್ನ್ನು ಬಳಕೆ ಮಾಡುತ್ತಿದ್ದು. ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿರುವವರು ಟಿಕ್ ಟಾಕ್ ಆಪ್ನ್ನು ಬಳಕೆ ಮಾಡಬಹುದು. ಆದರೆ, ಮತ್ತೆ ಆಪ್ನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ನಿಮ್ಮ ಮೊಬೈಲ್ ನಲ್ಲಿ ಟಿಕ್ ಟಾಕ್ ಆ್ಯಪ್ ಇದ್ದರೆ ಮಾತ್ರ ಗೂಗಲ್ ಪ್ಲೇಸ್ಟೋರ್ ನಲ್ಲಿ ಕಾಣಿಸುತ್ತದೆ. ಒಮ್ಮೆ ಅನ್ ಇನ್ಸ್ಟಾಲ್ ಮಾಡಿದರೂ ಮತ್ತೆ ಪ್ಲೇಸ್ಟೋರ್ ನಲ್ಲಿ ಕಾಣಿಸುವುದಿಲ್ಲ.

ನಿಷೇಧದ ಬಿಸಿ ತಟ್ಟುತ್ತಿದ್ದಂತೆಯೇ ನಿನ್ನಯಷ್ಟೇ ಹೇಳಿಕೆ ನೀಡಿದ್ದ ಚೀನಾ, ಅಂತಾರಾಷ್ಟ್ರೀಯ ಹೂಡಿಕೆದಾರರ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಹಕ್ಕುಗಳನ್ನು ಭಾರತ ಎತ್ತಿಹಿಡಿಯಬೇಕು. ಭಾರತ ನೀಡಿರುವ ನೋಟಿಸ್ ನಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಭಾರತದ ನಡೆ ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ವಿದೇಶದಲ್ಲಿ ಉದ್ಯಮ ಸಹಕಾರದಲ್ಲಿ ತೊಡಗಿಸಿಕೊಂಡಾಗ ಅಂತಾರಾಷ್ಟ್ರೀಯ ಕಾನೂನುಗಳು, ಸ್ಥಳೀಯ ಕಾಯ್ದೆಗಳು ಹಾಗೂ ನಿಯಂತ್ರಣಗಳಿಗೆ ಬದ್ಧವಾಗಿರುವಂತೆ ಚೀನಾ ಸರ್ಕಾರ ಯಾವಾಗಲೂ ಚೀನಾ ಕಂಪನಿಗಳಿಗೆ ಸೂಚಿಸುತ್ತದೆ ಎಂದು ಹೇಳಿಕೆ ನೀಡಿದೆ.

ಭಾರತ ಹಾಗೂ ಚೀನಾ ನಡುವಣ ಪ್ರಾಯೋಗಿಕ ಸಹಕಾರ ಎರಡೂ ದೇಶಗಳಿಗೂ ಲಾಭ ತರುವಂತಹದ್ದು, ಆಪ್ ನಿಷೇಧ ಬೆಳವಣಿಗೆ ಭಾರತಕ್ಕೂ ಒಳ್ಳೆಯದಲ್ಲ ಎಂದು ನಿನ್ನೆ ಹೇಳಿದೆ.

ಇದರಂತೆ ಟಿಕ್ ಟಾಕ್ ಕೂಡ ಸ್ಪಷ್ಟನೆ ನೀಡಿ, ಭಾರತ ಸರ್ಕಾರ ನಿಷೇಧ ಹೇರಿ ಹೊರಡಿಸಿರುವ ಆದೇಶವನ್ನು ಪಾಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ಭಾರತೀಯ ಬಳಕೆದಾರರು ಮಾಹಿತಿಯನ್ನು ಚೀನಾ ಸೇರಿದಂತೆ ಯಾವುದೇ ದೇಶದ ಸರ್ಕಾರಗಳ ಜತೆ ಹಂಚಿಕೊಂಡಿಲ್ಲ. ಇನ್ನು ಮುಂದೆಯೂ ಯಾವುದೇ ಸರ್ಕಾರದಿಂದ ಕೋರಿಕೆ ಬಂದರೂ ನಾವು ನೀಡುವುದಿಲ್ಲ. ಬಳಕೆದಾರರ ಖಾಸಗಿತನ ಹಾಗೂ ಸಮಗ್ರತೆಗೆ ನಾವು ಅತ್ಯುನ್ನತ ಮಹತ್ವ ನೀಡುತ್ತೇವೆ ಎಂದಿದೆ.

ಹೀಗಾಗಿ ಚೀನಾ ವಿರುದ್ಧ ಭಾರತ ಸಾರಿರುವ ಸಮರದಲ್ಲಿ ಇಂದು ಚೀನಾಕ್ಕೆ ಸೋಲಿನ ಬೀತಿ ಎದುರಾಗಿದೆ. ಅಲ್ಲದೆ ಈ ಹಿಂದೆ ಕಬಳಿಸಿಕೊಂಡಿದ್ದ ಭೂಮಿಯಂತೆ ಇಂದು ಗಡಿಭಾಗದಲ್ಲಿ ಭಾರತದ ಭೂಮಿ ಕಬಳಿಸಲು ಅಣಿಯಾಗಿ ಕಿರಿಕ್‌ ಮಾಡಿದ್ದು, ಇದು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಇನ್ನು ಕೂಡ ಚೀನಾಕ್ಕೆ ಆದಂತೆ ಕಾಣಿಸುತ್ತಿಲ್ಲ.

ಒಟ್ಟಾರೆ ಚೀನಾ ಮಾಡುತ್ತಿರುವ ತಪ್ಪಿಗೆ ಅದೇ ತನ್ನ ಅಸ್ಥಿತ್ವನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿರುವುದು ನಿಜಕ್ಕೂ ಭಾರತಕ್ಕೆ ಪ್ರತ್ಯಕ್ಷವಾಗಿಯೋ ಅಥೌಆ ಪರೋಕ್ಷವಾಗಿಯೋ ಒಂದು ರೀತಿಯಲ್ಲಿ ಜಯ ಸಿಕ್ಕಂತ್ತಾಗುತ್ತಿದೆ. ಇದರಿಂದ ಚೀನಾ ಎಚ್ಚೆತ್ತುಕೊಂಡರೆ ಮುಂದೆ ಆಗುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಇಲ್ಲದಿದ್ದರೆ ಅದನ್ನು ತೀವ್ರ ತರವಾಗಿ ಎದುರಿಸಬೇಕಾಗುತ್ತದೆ.

1 Comment

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...