CRIMENEWSನಮ್ಮರಾಜ್ಯ

ಬನ್ನೂರು ಭ್ರೂಣ ಪರೀಕ್ಷೆ ಕೇಂದ್ರದ ಪ್ರಕರಣ: ಕಿಂಗ್ ಪಿನ್ ಶ್ಯಾಮಲಾ ಓದಿದ್ದು ಬಿಎಸ್ಸಿ ನರ್ಸಿಂಗ್- ನರ್ಸಿಂಗ್ ಹೋಂ ತೆರೆದು ದಂಧೆ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಹೈವೇ ಬಳಿಯ ಭ್ರೂಣ ಪರೀಕ್ಷೆ ( Fetal Tests) ಕೇಂದ್ರದ ಪ್ರಕರಣದಲ್ಲಿ ಕಿಂಗ್ ಪಿನ್ ಶ್ಯಾಮಲಾ ಓದಿದ್ದು ಬಿಎಸ್ಸಿ ನರ್ಸಿಂಗ್. ಓದು ಮುಗಿಸಿದ ಕೂಡಲೇ ಈಕೆ ಬನ್ನೂರಿನಲ್ಲೇ ನರ್ಸಿಂಗ್ ಹೋಂ ಆರಂಭಿಸಿದ್ದಳು.

ಬನ್ನೂರಿನ ಮಳವಳ್ಳಿ-ಮೈಸೂರು ಮುಖ್ಯ ರಸ್ತೆಯಲ್ಲಿ 15 ಬೆಡ್‌ಗಳ ಆಸ್ಪತ್ರೆ ಆರಂಭಿಸಿ ಅಲ್ಲಿ ಭ್ರೂಣ ಪರೀಕ್ಷೆ ದಂಧೆ ನಡೆಸುತ್ತಿದ್ದಳು. ಇದುವರೆಗೂ‌ 200ಕ್ಕೂ ಹೆಚ್ಚು ಭ್ರೂಣ ಪರೀಕ್ಷೆಯನ್ನು ಈ ಆಸ್ಪತ್ರೆಯಲ್ಲಿ ನಡೆಸಲಾಗಿದೆ ಎಂದು ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ.

ಶ್ಯಾಮಲಾ ತಮ್ಮ ಗೋವಿಂದರಾಜು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ. ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಪ್ರಕರಣ ಸಂಬಂಧ ಸಾಲಿಗ್ರಾಮ ತಾಲೂಕಿನ ಬೇರ್ಯ ಮೂಲದ ಶಿವಕುಮಾರ್, ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಹರೀಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯವರ್ತಿ ಪುಟ್ಟರಾಜು ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದೆ.

ಇನ್ನು ಆರೋಪಿಗಳು ಒಂದು ಭ್ರೂಣಪತ್ತೆಗೆ 25 ರಿಂದ 35 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಮಿಷಿನ್ ತಂದು ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ಶ್ಯಾಮಲಾ ಮನೆಯಲ್ಲಿಯೇ ಸ್ಕ್ಯಾನಿಂಗ್ ಮಿಷಿನ್ ಕೂಡ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೂರು ಸಮೀಪದಲ್ಲಿರುವ ಹುಣಗನಹಳ್ಳಿ ವ್ಯಾಪ್ತಿಯ ಫಾರಂ ಹೌಸ್ ಒಂದರಲ್ಲಿ ಲಿಂಗ ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ದಾಳಿ ವೇಳೆ 4 ಗರ್ಭಿಣಿಯರು ಭ್ರೂಣ ಲಿಂಗ ಪತ್ತೆಗೆ ಹಾಜರಿದ್ದರು. ಈ ಕೇಂದ್ರದಲ್ಲಿ ಸ್ಕ್ಯಾನಿಂಗ್‌ಗೆ ಬಳಕೆ ಮಾಡುವ ಉಪಕರಣವು ಇತ್ತು. ಈ ಹಿನ್ನೆಲೆಯಲ್ಲಿ ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Megha
the authorMegha

Leave a Reply

error: Content is protected !!