CRIMENEWSನಮ್ಮರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರ ಗೌಡ ಸೇರಿ 17 ಆರೋಪಿಗಳು ಹಾಜರ್‌- ಕೋರ್ಟ್​ ವಿಚಾರಣೆ ಹೇಗೆ ನಡೆಯಿತು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಇರುವ ದೋಷಾರೋಪವನ್ನು ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್​ನ ನ್ಯಾಯಾಧೀಶರು, ಆರೋಪಗಳನ್ನು ಆರೋಪಿಗಳ ಮುಂದೆ ಓದಿ ಹೇಳಿದ್ದಾರೆ.

ಕೋರ್ಟ್​ ವಿಚಾರಣೆ  ಹೇಗೆ ನಡೆಯಿತು?: ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ನ್ಯಾಯಾಧೀಶರು ಆರೋಪಿಗಳ ಹಾಜರಾತಿ ಪಡೆದುಕೊಂಡರು. ಬಳಿಕ ಎಲ್ಲ ಆರೋಪಿಗಳನ್ನೂ ಆರ್ಡರ್ ಪ್ರಕಾರ ಅಂದರೆ A-1, A-2 ಪ್ರಕಾರ ಕೋರ್ಟ್​ ಹಾಲ್​​ನಲ್ಲಿ ನಿಲ್ಲಿಸಿದರು. ಬಳಿಕ, ನಾವು ಮಾತನ್ನಾಡೋದು ಕೇಳಿಸಲಿಲ್ಲ ಅಂದರೆ ಹೇಳಿ ಎನ್ನುತ್ತ ದೋಷಾರೋಪಗಳನ್ನು ಓದಿದರು.

ಮೊದಲ ಆರೋಪಿ ಆಗಿರುವ ಪವಿತ್ರ ಗೌಡ ಮೇಲಿನ ಆರೋಪವನ್ನು ಮೊದಲು ಓದಿ ತಿಳಿಸಿದರು. ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾ ಗೌಡ ಪಾತ್ರದ ಬಗ್ಗೆ ನ್ಯಾಯಾಧೀಶರು ತಿಳಿಸಿದರು. ಕಿಡ್ನಾಪ್​ನಿಂದ ಹಿಡಿದು ಕೊಲೆವರೆಗೂ ಪವಿತ್ರಾ ಪಾತ್ರ ಹಾಗೂ ಸೆಕ್ಷನ್​ಗಳನ್ನು ನ್ಯಾಯಾಧೀಶರು ತಿಳಿಸಿದರು. ಅದಾದ ಬಳಿಕ ಶೆಡ್​ನಲ್ಲಿ ನಡೆದ ಘಟನೆಯ ವಿವವರನ್ನೂ ಓದಿದರು.

A-2 ದರ್ಶನ್ ಮೇಲಿನ ದೋಷಾರೋಪವನ್ನೂ ಓದು ಹೇಳಿದರು. ರೇಣುಕಾಸ್ವಾಮಿಗೆ ನನ್ನ ಹೆಂಡತಿಗೆ ಮೆಸೇಜ್ ಯಾಕೆ ಮಾಡಿದೆ ಎಂದು ಎ 2 ದರ್ಶನ್ ಹಲ್ಲೆ ಮಾಡಿದ್ದೀರಾ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದೀರಾ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವ ಸಂಪೂರ್ಣ ಮಾಹಿತಿಯನ್ನ ಜಡ್ಜ್ ಓದಿದರು.

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್​ನಿಂದ ಹಿಡಿದು ಕಿಡ್ನಾಪ್ ಪ್ಲಾನ್, ಕಿಡ್ನಾಪ್, ಹಲ್ಲೆ, ಕೊಲೆ ಹಾಗೂ ಸಾಕ್ಷ್ಯ ನಾಶದವರೆಗೆ ಎಲ್ಲಾ ಆರೋಪಿಗಳ ಪಾತ್ರದ ಕುರಿತು ನ್ಯಾಯಾಧೀಶರು ಓದಿ ಹೇಳಿದರು. 17 ಆರೋಪಿಗಳ ವಿರುದ್ಧದ ದೋಷಾರೋಪ ಓದಿದ ಬಳಿಕ ನಿಮ್ಮ ಮೇಲಿನ ಆರೋಪಗಳ ಬಗ್ಗೆ ನೀವು ಏನ್ ಹೇಳ್ತೀರಾ? ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು.

ಆಗ ನಮ್ಮ ಮೇಲಿನ ಆರೋಪಗಳು ಸುಳ್ಳು ಅಂತಾ ವಾದಿಸಿದರು. ಆರೋಪಿಗಳೆಲ್ಲ ಸುಳ್ಳೇ ಸುಳ್ಳು ಎಂದು ಜೋರಾಗಿ ಕೂಗಿ ಹೇಳಿದರು. ನಂತರ ನವೆಂಬರ್ 10ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿತು. ಮುಂದೆ ನವೆಂಬರ್ 10 ರಂದು ನಡೆಯುವ ವಿಚಾರಣೆ ವೇಳೆ ಟ್ರಯಲ್ ನಡೆಯುವ ದಿನಾಂಕವನ್ನು ಕೋರ್ಟ್​ ನಿಗದಿ ಮಾಡಲಿದೆ.

ದರ್ಶನ್, ಪವಿತ್ರ ಗೌಡ: ದೋಷಾರೋಪ ನಿಗದಿ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ಎಲ್ಲ ಆರೋಪಿಗಳಿಗೆ ನ್ಯಾಯಾಧೀಶರು ಈ ಮೊದಲೇ ತಿಳಿಸಿದ್ದರು. ಅದಂತೆ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಬೆಂಗಳೂರಿನ 64 ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಕ್ಕೆ ಕರೆತಂದರು. ಉಳಿದಂತೆ ಜಾಮೀನಿನ ಮೇಲೆ ಹೊರಗಿರುವ 11 ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Megha
the authorMegha

Leave a Reply

error: Content is protected !!