NEWSನಮ್ಮಜಿಲ್ಲೆನಮ್ಮರಾಜ್ಯ

Higher pension ಪಡೆಯಲು ಕಾನೂನು ಹೋರಾಟಕ್ಕೆ EPS ಪಿಂಚಿಣಿದಾರರ ನಿರ್ಧಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್ ಪಿಂಚಿಣಿದಾರರ 94ನೇ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ ನವೆಂಬರ್ 2 ಭಾನುವಾರ ಯಶಸ್ವಿಯಾಗಿ ಜರುಗಿದ್ದು, ಈ ಸಭೆಯಲ್ಲಿ  ಹೆಚ್ಚುವರಿ ಪಿಂಚಣಿ  ಸೇರಿದಂತೆ ವಿವಿಧ ಭತ್ಯೆಗಳನ್ನು ಪಡೆಯಲು ಪಡೆಯಲು ಕಾನೂನು ಹೋರಾಟಕ್ಕೆ  EPS ಪಿಂಚಣಿದಾರರು ನಿರ್ಧರಿಸಿದ್ದಾರೆ.

ಮಾಸಿಕ ಸಭೆಯನ್ನು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.

ಈ ಮಾಸಿಕ ಸಭೆಯಲ್ಲಿ ಕೆಲವೊಂದು ಮಹತ್ವದ ಅಂಶಗಳನ್ನು ಚರ್ಚಿಸಲಾಯಿತು. ಈ ವೇಳೆ ಇಪಿಎಸ್ ಪಿಂಚಿಣಿದಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧ ಫ್ರೀಡಂ ಪಾರ್ಕ್ ಹಾಗೂ ಇಪಿಎಫ್ಒ ಕಚೇರಿಯಲ್ಲಿ ನಡೆದ ಪ್ರತಿಭಟನೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗುವ ಮೂಲಕ ದೇಶಾದ್ಯಂತ ಸುದ್ದಿಯಾಗಿತೇ ಹೊರೆತು, ಇದರಿಂದ ನಿವೃತ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ ಇದು ತುಂಬ ಬೇಸರದ ಸಂಗತಿ ಎಂದು ಸರ್ವ ಸದಸ್ಯರು ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಧುರೈ ರಾಜ್ಯ ಉಚ್ಚ ನ್ಯಾಯಾಲಯವು ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡುವ ಸಂಬಂಧ ಇತ್ತೀಚೆಗೆ ನೀಡಿರುವ ತೀರ್ಪು ಆದರಿಸಿ, ನಾವು ಸಹ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಸದಸ್ಯರು ಪ್ರಸ್ತಾವನೆಯನ್ನು ಸಭೆಯಲ್ಲಿ ನಡೆಸಿದ್ದು, ಈ ಸಂಬಂಧ ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಅದರ ಸಾಧಕ ಬಾಧಕಗಳ ಬಗ್ಗೆ ಸದಸ್ಯರಲ್ಲಿ ಅರಿವು ಮೂಡಿಸಲಾಯಿತು. ಹಕ್ಕುನ್ನು ನ್ಯಾಯಾಲಯದಲ್ಲಿ ಪ್ರತಿಪಾದಿಸುವುದು ಸದಸ್ಯರ ವಿವೇಚನೆಗೆ ಬಿಟ್ಟಿದ್ದು, ಆದರೆ ಬೇಡಿಕೆಗಳ ಬಗ್ಗೆ ನ್ಯಾಯಯುತ ಹೋರಾಟದ ಮೂಲಕ ಪ್ರತಿಪಾದಿಸಲು ನಿರ್ಧರಿಸಲಾಯಿತು.

ಲಾಲ್‌ಬಾಗ್‌ಗೆ ಬಂದ ಸಂಸದರು: ಇನ್ನೇನು ಸಭೆ ಮುಕ್ತಾಯವಾಗುವ ಹೊತ್ತಿನಲ್ಲಿ, ಸದಸ್ಯರು ಮಹತ್ವದ ನಿರ್ಣಯ ಕೈಗೊಂಡಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅನ್ಯ ಕಾರ್ಯಕ್ರಮ ನಿಮಿತ್ತ ಲಾಲ್‌ಬಾಗ್ ಆವರಣಕ್ಕೆ ಬಂದಿದ್ದರು. ಈ ವೇಳೆ ಸಭೆ ನಡೆಯುತ್ತಿದ್ದರಿಂದ ನಾವು ಕೂಡಲೇ ಸಂಸದರನ್ನು ಕಂಡು ನಮ್ಮ ಪಿಂಚಣಿ ಬೇಡಿಕೆಗಳ ಬಗ್ಗೆ ಮಾತನಾಡೋಣ ಎಂದು ಸದಸ್ಯರೊಟ್ಟಿಗೆ ನಿರ್ಧರಿಸಿ, ಅದರಂತೆ ನಾವೆಲ್ಲರೂ ಸಂಸದರನ್ನು ಭೇಟಿ ಮಾಡಿ, ಪ್ರಸ್ತಾವನೆಯನ್ನು ಮಂಡಿಸಿದೆವು. ಅದಕ್ಕೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಪಾರ್ಲಿಮೆಂಟ್ ಮುಂಗಾರು ಅಧಿವೇಶನ ಇದೇ ನವೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಮನವಿ ಪತ್ರ, ನ್ಯಾಯಾಲಯಗಳ ತೀರ್ಪು, ಟಿಪ್ಪಣಿ ಎಲ್ಲವನ್ನು ಸಿದ್ಧಪಡಿಸಿಕೊಂಡು, ಸಂದರ್ಶನಕ್ಕೆ ಕಾಲಾವಕಾಶ ಪಡೆದು, ನಂತರ ನಾವೆಲ್ಲರೂ ಒಟ್ಟಾಗಿ ಭೇಟಿ ಮಾಡಿ ಚರ್ಚೆ ನಡೆಸೋಣ ಎಂದು ತೀರ್ಮಾನಿಸಲಾಯಿತು.

ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ  ಅಧ್ಯಕ್ಷ ನಂಜುಂಡೇಗೌಡ, ಖಜಾಂಚಿ ನಾಗರಾಜು ಹಾಗೂ ಚಿಕ್ಕಬಳ್ಳಾಪುರ ಟ್ರಸ್ಟ್ ಖಜಾಂಚಿ ರಮೇಶ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ರುಕ್ಮೇಶ್, ಕೃಷ್ಣಮೂರ್ತಿ ಹಾಜರಿದ್ದು ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ಸಭೆಯ ಆರಂಭದಲ್ಲಿ ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿದ್ದು, ಇತ್ತೀಚೆಗೆ ಮೃತರಾದ ಇಪಿಎಸ್ ನಿವೃತ್ತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.

Megha
the authorMegha

Leave a Reply

error: Content is protected !!