NEWSಬೆಂಗಳೂರು

ಅನಧಿಕೃತ ಪೇಯಿಂಗ್ ಗೆಸ್ಟ್ ನಿಯಂತ್ರಣಕ್ಕೆ ಕ್ರಮ: GBA ಅಪರ ಆಯುಕ್ತ ಸುಧಾಕರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಹಾಗೂ ನಿಯಮಬಾಹಿರ ಪೇಯಿಂಗ್ ಗೆಸ್ಟ್ (PG) ಮತ್ತು ವಸತಿಗೃಹಗಳ ಪರವಾನಗಿ ಹಾಗೂ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ, ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿ.ಬಿ.ಎ. ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ ಪೇಯಿಂಗ್ ಗೆಸ್ಟ್ ಹಾಗೂ ವಸತಿಗೃಹಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಈ ಉದ್ದೇಶಕ್ಕಾಗಿ, ಪೂರ್ವ ನಗರ ಪಾಲಿಕೆಯಿಂದ ವಲಯದ ಆರೋಗ್ಯ ವೈದ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ, ಅವರ ನೇತೃತ್ವದಲ್ಲಿ ತಪಾಸಣಾ ತಂಡಗಳನ್ನು ರಚಿಸಿ, ನಿಗದಿತ ವೇಳಾಪಟ್ಟಿಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಹದೇವಪುರ ವಲಯ: ನೋಡಲ್ ಅಧಿಕಾರಿ ಡಾ. ರಾಕೇಶ್ ಎನ್ ಅವರ ನೇತೃತ್ವದಲ್ಲಿ ಹೂಡಿ, ವೈಟ್‌ಫೀಲ್ಡ್ ಹಾಗೂ ಮಾರತಹಳ್ಳಿ ಉಪವಿಭಾಗಗಳಲ್ಲಿ ಕ್ರಮವಾಗಿ ನವೆಂಬರ್ 12, 13 ಹಾಗೂ 14 ರಂದು ಬೆಳಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

ಕೆ.ಆರ್.ಪುರ ವಲಯ: ನೋಡಲ್ ಅಧಿಕಾರಿ ಡಾ|| ಕೆ.ಎಂ. ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಹೊರಮಾವು, ಕೆ.ಆರ್.ಪುರ ಹಾಗೂ ಹೆಚ್.ಎ.ಎಲ್ ಉಪವಿಭಾಗಗಳಲ್ಲಿ ಕ್ರಮವಾಗಿ ನವೆಂಬರ್ 12, 13 ಹಾಗೂ 14 ರಂದು ಬೆಳಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

ನಿಯಮಬಾಹಿರ ಪೇಯಿಂಗ್ ಗೆಸ್ಟ್ ಹಾಗೂ ವಸತಿಗೃಹಗಳ ವಿರುದ್ಧದ ನಿಯಂತ್ರಣ ಮತ್ತು ಕಾರ್ಯಾಚರಣೆಯನ್ನು ಪ್ರಮಾಣಿತ ಕಾರ್ಯಾಚರಣೆ ವಿಧಾನದ (Standard Operating Procedures) ಅನ್ವಯ ನಿಗದಿತ ದಿನಾಂಕಗಳಲ್ಲಿ, ಪೂರ್ವ ನಿರ್ಧರಿತ ಮಾರ್ಗನಕ್ಷೆಯ ಪ್ರಕಾರ ಸಮನ್ವಯದೊಂದಿಗೆ ಜಾರಿಗೆ ತರುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Megha
the authorMegha

Leave a Reply

error: Content is protected !!