NEWSನಮ್ಮಜಿಲ್ಲೆಸಿನಿಪಥ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ವಯೋ ಸಹಜ ಅನಾರೋಗ್ಯದಿಂದ ನಿಧನ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇಂದು ವಿಧಿವಶರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ನಿಧನರಾಗಿದ್ದಾರೆ.

ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ (89). ನೊದೆ ಕೊಪ್ಪಲು ಗ್ರಾಮದ ಹಿರಿಯರು. ತಿಥಿ ಸಿನಿಮಾ ಬಳಿಕ ನಾಡಿನಾದ್ಯಂತ ಹೆಚ್ಚು ಜನಪ್ರಿಯತೆ ಪಡೆದಿದ್ದರು.

ಗುಡ್ಡಪ್ಪ ಅವರು ವಯೋಸಹಜವಾಗಿ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಆಪರೇಷನ್ ಆಗಿತ್ತು.

ಇಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಗಡ್ಡಪ್ಪ ಅವರ ಪುತ್ರಿ ಶೋಭಾ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ. ಈ ಸಿನಿಮಾದಲ್ಲಿ ಗಡ್ಡಪ್ಪ ತುಂಬಾ ಫೇಮಸ್ ಆದರು. ನಂತರ ‘ತರ್ಲೆ ವಿಲೇಜ್’ ‘‘ಏನ್ ನಿನ್ ಪ್ರಾಬ್ಲಮ್ಮು’ ಚಿತ್ರಗಳದಲ್ಲಿ ನಟಿಸಿದ್ದರು. ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು.

Megha
the authorMegha

Leave a Reply

error: Content is protected !!