NEWSದೇಶ-ವಿದೇಶನಮ್ಮರಾಜ್ಯ

ಮೇಕೆದಾಟು ವಿಚಾರ- ತಮಿಳುನಾಡಿಗೆ ಭಾರೀ ಮುಖಭಂಗ: ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ತಿರಸ್ಕೃತ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕಾವೇರಿ ವಿಚಾರದಲ್ಲಿ ಸದಾ ಕಾಲು ಕೆರೆದುಕೊಂಡು ಕರುನಾಡಿನ ಜತೆ ಕಿರಿಕ್​​ ತೆಗೆಯುವ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ಇಂದು ಭಾರೀ ಮುಖಭಂಗವಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್​ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಇದರಿಂದ ರಾಜ್ಯದ ಯೋಜನೆಗೆ ಎದುರಾಗಿದ್ದ ಆರಂಭಿಕ ಸವಾಲು ನಿವಾರಣೆಯಾಗಿದೆ.

ಪ್ರತಿ ಮಳೆಗಾಲದಲ್ಲೂ ಅಪಾರ ಪ್ರಮಾಣದ ಕಾವೇರಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿ, ಸಿದ್ಧ ಪಡಿಸಿತ್ತು.

ಇದರ ಬೆನ್ನಲ್ಲೇ ಕಾವೇರಿ ವಿಚಾರದಲ್ಲಿ ಸದಾ ಕಾಲು ಕರೆದುಕೊಂಡು ಕ್ಯಾತೆ ತೆಗೆಯುವ ತಮಿಳುನಾಡು ಮೇಕೆದಾಟು ವಿಚಾರಕ್ಕೂ ಅಡ್ಡಗಾಲು ಹಾಕಿತ್ತು. ಈ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ಆದರೆ, ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದ್ದು, ಇದು ಕರ್ನಾಟಕಕ್ಕೆ ದೊಡ್ಡ ಗೆಲುವು ಸಿಕ್ಕಿದೆ.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನಾ ವರದಿಯನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇದರ ವಿಚಾರಣೆ ನಡೆಸಿದ್ದು, ತಮಿಳುನಾಡಿನ ಮನವಿ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕಾರ ಮಾಡಿದೆ.

ಯೋಜನೆ ವಿರುದ್ಧದ ಅರ್ಜಿಯು ಅವಧಿಗೆ ಮುನ್ನವೇ ಸಲ್ಲಿಕೆ. ಸದ್ಯ ಪ್ರಸ್ತಾವನೆಯು ತಜ್ಞ ಸಂಸ್ಥೆಗಳ ಪರಿಶೀಲನಾ ಹಂತದಲ್ಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಹಲವಾರು ಸಮಿತಿಗಳು ಇದರ ಬಗ್ಗೆ ಚರ್ಚೆ ನಡೆಸುತ್ತಿವೆ.ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ.

ಅನುಮೋದನೆಗಳು ಕಾವೇರಿ ನೀರು ನಿಯಂತ್ರಣ ಸಮಿತಿ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಬರಬೇಕು. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಆಕ್ಷೇಪಣೆಗಳು, ತಜ್ಞರ ಅಭಿಪ್ರಾಯ ಪರಿಗಣಿಸಿಯೇ ಒಪ್ಪಿಗೆ. CWC ಅನುಮೋದಿಸಿದಾಗ ಪ್ರಶ್ನೆ ಮಾಡಲು ತಮಿಳುನಾಡು ಸ್ವತಂತ್ರ.

ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ- ಡಿಸಿಎಂ ಡಿಕೆಶಿ: ಮೇಕೆದಾಟು ಯೋಜನೆಗಾಗಿ ಡಿಸಿಎಂ ಡಿಕೆಶಿ, ನಮ್ಮ ನೀರು ನಮ್ಮ ಹಕ್ಕು ಎಂದು ಈ ಹಿಂದೆಯೇ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಜನರ ಮನಗೆದ್ದಿದ್ರು. ಸದ್ಯ ಸುಪ್ರೀಂಕೋರ್ಟ್​​ನಲ್ಲಿ ರಾಜ್ಯದ ಮೇಕೆದಾಟು ಯೋಜನೆಗೆ ಗೆಲವು ಸಿಕ್ಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಮೇಕೆದಾಟು ಕರ್ನಾಟಕದ ನ್ಯಾಯಯುತ ಯೋಜನೆ. ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಕಾವೇರಿ ನದಿ ಹಳೆಮೈಸೂರು ಭಾಗದ ಜೀವನಾಡಿ ಒಂದೆಡೆಯಾದ್ರೆ.. ರಾಜಕೀಯ ಪಕ್ಷಗಳಿಗೆ ಕಾವೇರಿ ರಾಜಕೀಯ ಅಸ್ತ್ರ ಅನ್ನೋದ್ರರಲ್ಲಿ ಎರಡು ಮಾತಿಲ್ಲ. ಅದೇನೆ ಇರಲಿ.. ಸದ್ಯ ಮೇಕೆದಾಟು ಯೋಜನೆಗೆ ಎದುರಾಗಿದ್ದ ಆರಂಭಿಕ ಸವಾಲಿನಲ್ಲಿ ರಾಜ್ಯಕ್ಕೆ ಮುನ್ನಡೆಯಾಗಿದ್ದು, ಕೇಂದ್ರ ಜಲ ಆಯೋಗದಿಂದ ಡಿಪಿಆರ್​​ಗೆ ಅನುಮೋದನೆ ಸಿಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

Megha
the authorMegha

Leave a Reply

error: Content is protected !!