KSRTC ಮಳವಳ್ಳಿ: ಕಡಿದಾದ ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದ ಬಸ್ ಬ್ರೇಕ್ ಫೇಲ್- ತಪ್ಪಿದ ಭಾರಿ ದುರಂತ, ಕಂಡಕ್ಟರ್‌ಗೆ ಗಾಯ

ಮಳವಳ್ಳಿ: ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ವೊಂದು ಬ್ರೇಕ್ ವಿಫಲವಾಗಿ ಕಲ್ಲಿಗೆ ಡಿಕ್ಕಿ ಹೊಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.

KSRTC ಕನಕಪುರ ಘಟಕ ಬಸ್ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ಕಾರ್ತಿಕ ಮಾಸದ ಅಂಗವಾಗಿ ದೇವರ ದರ್ಶನ ಪಡೆಯಲು 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ತೆರಳುತ್ತಿತ್ತು.
ಈ ವೇಳೆ ಬಸ್ ಕೆಸರಕ್ಕಿ ಹಳ್ಳದ ಕಡಿದಾದ ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದಾಗ ಬಸ್‌ನ ಬ್ರೇಕ್ ಫೇಲಾಗಿದೆ. ಆದರೂ ವಿಚಲಿತರಾಗದ ಚಾಲಕ ಜಯರಾಜ್ ಪ್ರಯಾಣಿಕರಿಗೆ ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಧೈರ್ಯ ಹೇಳಿ ಕೂಡಲೇ ಬಸ್ ನಿಯಂತ್ರಣ ಕಳೆದುಕೊಳ್ಳದಂತೆ ಚಾಲನೆ ಮಾಡುತ್ತಾ ರಸ್ತೆ ಬದಿಯಲ್ಲಿದ್ದ ಕಲ್ಲಿನ ಗುಡ್ಡೆಗೆ ಹತ್ತಿಸಿ ನಿಲ್ಲಿಸಿದ್ದಾರೆ.
ಬಸ್ ನಿಯಂತ್ರಣಕ್ಕೆ ತೆಗೆದುಕೊಳ್ಳುವ ವೇಳೆ ಕಲ್ಲಿನ ಗುಡ್ಡೆಗೆ ಹತ್ತಿಸಿ ನಿಲ್ಲಿಸಿದ್ದಾರೆ. ಆದರೆಮ ಅಪಘಾತದ ತೀವ್ರತೆಯನ್ನು ಬಸ್‌ನ ಮುಂದಿನ ಭಾಗವೇ ಹೇಳುತ್ತದೆ. ಅಂದರೆ ಬಸ್‌ನ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದ್ದು ಯಾವ ರೀತಿಯ ಅಪಘಾತ ಸಂಭವಿಸಿದೆ. ಆದರೂ ಚಾಲಕ ಪ್ರಯಾಣಿಕರಿಗೆ ಧೈರ್ಯತುಂಬಿ ಯಾವುದೇ ಅನಾಹುತ ಸಂಭವಿಸದಂತೆ ಸಮಯ ಪ್ರಜ್ಞೆ ಮೆರೆದಿದ್ದಾರೆ ಎಂದರೆ ಅವರನ್ನು ಮೆಚ್ಚಲೇ ಬೇಕು.
ಆದರೆ, ಈ ವೇಳೆ ನಿರ್ವಾಹಕರಾದ ಸೌಜನ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಹಲಗೂರಿನ ಬಸ್ ನಿಲ್ದಾಣದ ಮೇಲ್ವಿಚಾರಕ ಸಿ.ಎಂ.ಗೌಡ ಹಲಗೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಎತ್ತರ ಮತ್ತು ಇಳಿಜಾರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಕಂಡಿಷನಾಗಿರಬೇಕು. ಹಳೆಯ ಬಸ್‌ಗಳನ್ನು ಕೊಟ್ಟರೆ ಇದೇ ರೀತಿ ಆಗುವುದು. ಸಂಸ್ಥೆ ಹಾಗೂ ಸಾರಿಗೆ ಸಚಿವರು ಇಂಥ ಬಸ್‌ಗಳನ್ನು ಬಿಟ್ಟು ಜನರ ಪ್ರಾಣದ ಜತೆ ಚಲ್ಲಾಟವಾಡುವುದು ಸರಿಯಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Related









