NEWSನಮ್ಮಜಿಲ್ಲೆರಾಜಕೀಯ

ಡಿಕೆಶಿ ಸಿಎಂ ಆಗ್ತಾರೋ, ಇಲ್ವೋ: ಗಿಳಿ ಶಾಸ್ತ್ರ ಕೇಳಿ ಟಕ್ಕರ್ ಕೊಟ್ಟ ಬಿಜೆಪಿ ನಾಯಕರು

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕದನ ಜೋರಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗ್ತಾರೋ, ಇಲ್ವೋ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು ಗಿಳಿ ಶಾಸ್ತ್ರ ಕೇಳಿದ್ದಾರೆ. ಈ ಮೂಲಕ ಡಿಕೆಶಿ ‘ಗಿಳಿ ಶಾಸ್ತ್ರ ಕೇಳಿ’ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ವಿಚಾರಕ್ಕೆ ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಡಿಕೆಶಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ನೀಡಿದ್ದಾರೆ.

ಮಂಡ್ಯದ ನಗರಸಭೆ ಎದುರು ಗಿಳಿ ಶಾಸ್ತ್ರ, ಕೇಳಲಾಯಿತು. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರಾ, ಇಲ್ಲ ಎಂದು ಬಿಜೆಪಿಗರು ಶಾಸ್ತ್ರ ಕೇಳಿದರು ಈ ವೇಳೆ ಚೊಂಬು ಇರುವ ಕಾರ್ಡ್‌ ನ್ನು ಗಿಳಿ ತೆಗೆದಿದೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ ಅವರ ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದಾಗ, ಈ ವೇಳೆ ಹೂ ಇರುವ ಕಾರ್ಡ್ ತೆಗೆದಿದೆ ಗಿಳಿ ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಎಂದು ಬಿಜೆಪಿ ಕಾರ್ಯಕರ್ತರು ವಿಡಂಬನೆ ಮಾಡಿದ್ದಾರೆ.

Megha
the authorMegha

Leave a Reply

error: Content is protected !!