BMTC EV ಬಸ್ ಚಾಲಕರು ಮೊಬೈಲ್ ಬಳಸದಂತೆ ನಿಷೇಧ- ಚಾಲಕರು ತಪ್ಪೆಸಗಿದರೆ ನಿರ್ವಾಹಕರ ಮೇಲೂ ಶಿಸ್ತು ಕ್ರಮದ ಎಚ್ಚರಿಕೆ!
ಸಾಂದರ್ಭಿಕ ಚಿತ್ರ.- ಚಾಲಕರು ಮಾಡುವ ತಪ್ಪಿಗೆ ನಿರ್ವಾಹಕರನ್ನೂ ಹೊಣೆ ಮಾಡುವ ಆದೇಶಕ್ಕೆ ಕಂಡಕ್ಟರ್‌ಗಳ ಅಸಮಾಧಾನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ಬಸ್ ಓಡಿಸುವ ವೇಳೆ ಮೊಬೈಲ್ ಬಳಸದಂತೆ ನಿಷೇಧ ಹೇರಿ BMTC ಆದೇಶ ಹೊರಡಿಸಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಂದ ಅಪಘಾತ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಅಪಘಾತಗಳಿಗೆ ಮೊಬೈಲ್ ಬಳಕೆಯೂ ಒಂದು ಪ್ರಮುಖ ಕಾರಣವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ.
ಅಲ್ಲದೇ ಡಿಜಿಟಲ್ ಗ್ಯಾಜೆಟ್ಸ್‌ಗಳಾದ ಬ್ಲೂಟೂತ್ ಹಾಗೂ ಇಯರ್ ಫೋನ್‌ಗಳನ್ನೂ ಬಳಸುವಂತಿಲ್ಲ. ಸಂಗೀತ, ಆಡಿಯೋ ಆಲಿಸುವುದು ಹಾಗೂ ಚಾಟಿಂಗ್ ಕೂಡ ಮಾಡುವಂತಿಲ್ಲ ಎಂದು ಬಿಎಂಟಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇನ್ನು ಈ ನಿಯಮಗಳನ್ನು ಉಲ್ಲಂಘಿಸಿದರೇ ಚಾಲಕರ ಜತೆಗೆ ಕಂಡಕ್ಟರ್‌ಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಿಎಂಟಿಸಿ ಭದ್ರತಾ ಹಾಗೂ ಜಾಗೃತಾ ನಿರ್ದೇಶಕರು ಎಲ್ಲ ಡಿಪೋ ಮ್ಯಾನೇಜರ್‌ಗಳಿಗೂ ತಿಳಿವಳಿಕೆ ನೀಡುವಂತೆ ಪತ್ರ ಬರೆದಿದ್ದಾರೆ.
ಇಲ್ಲಿ ಚಾಲಕರು ಬಸ್ ಓಡಿಸುವ ವೇಳೆ ಮೊಬೈಲ್ ಬಳಸದಂತೆ ನಿಷೇಧ ಹೇರಿ ಆದೇಶ ಮಾಡಿರುವುದು ಸರಿಯಾದ ಕ್ರಮವಾಗಿದೆ ಆದರೆ ಚಾಲಕರು ಮಾಡುವ ತಪ್ಪಿಗೆ ನಿರ್ವಾಹಕರನ್ನು ಹೊಣೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಸಂಸ್ಥೆಯ ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ನಮಗೆ ಎಲೆಕ್ಟ್ರಿಕ್ ಬಸ್‌ಗಳ ಚಾಲಕರ ನಿಯಂತ್ರಿಸು ಅಧಿಕಾರವನ್ನು ನೀವು ಕಟ್ಟಿದ್ದರೆ ಆಗ ನಾವು ನಿಮ್ಮ ಆದೇಶದಂತ ನಡೆದುಕೊಳ್ಳಬಹುದು. ಆದರೆ, ನಮಗೆ ಚಾಲಕರ ನಿಯಂತ್ರಣದಲ್ಲಿಡುವ ಯಾವುದೇ ಅಧಿಕಾರವನ್ನು ಕೊಡದೆ ತಮಗೆ ಇಷ್ಟಬಂದಂತೆ ಈರೀತಿ ಗದಾಪ್ರಹಾರ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
Related









