ಸಾರಿಗೆ ಸಂಸ್ಥೆಯ ಗೈರಾಗಿರುವ ನೌಕರರಿಗೆ ಎಚ್ಚರಿಕೆ: ನಾಳೆಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ ಉಗ್ರ ಶಿಕ್ಷೆಯ ಎಚ್ಚರಿಕೆ

ಬೆಂಗಳೂರು: ಸಾರಿಗೆ ಸಂಸ್ಥೆಯ ಗೈರು ಹಾಜರಿಯಲ್ಲಿರುವ ಸಿಬ್ಬಂದಿಗಳು ಡಿಸೆಂಬರ್ 4-2025ರ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಉಗ್ರ ಶಿಕ್ಷೆ (Major punishment ) ವಿಧಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಭದ್ರತಾ & ಜಾಗೃತ ವಿಭಾಗದ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಸಂಬಂಧ ಎಲ್ಲ ಘಟಕಗಳ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಗೈರು ಹಾಜರಿ ನಿಯಂತ್ರಿಸುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು ಈ ಸಭೆಯಲ್ಲಿ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ.
1) ಗೈರು ಹಾಜರಿಯಲ್ಲಿರುವ ಸಂಸ್ಥೆಯ ಸಿಬ್ಬಂದಿಗಳನ್ನು ಸಂಪರ್ಕಿಸಿ ತಕ್ಷಣ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಿಳಿಸಬೇಕು. ಸಿಬ್ಬಂದಿ ತಕ್ಷಣವೇ ವರದಿ ಮಾಡಿಕೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳದೆ ಗೈರು ಪ್ರಕರಣವನ್ನು ತೀರ್ಮಾನಿಸಲಾಗುವುದು.
2) ಗೈರು ಹಾಜರಿಯಲ್ಲಿರುವವರು 04/12/2025ರ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಉಗ್ರ ಶಿಕ್ಷೆ (Major punishment ) ವಿಧಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
3) ಗೈರು ಹಾಜರಿಯಲ್ಲಿರುವ ಸಿಬ್ಬಂದಿ ತೀವ್ರ ತರಹದ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂತಹ ಸಿಬ್ಬಂದಿ ಸೂಕ್ತ ದಾಖಲೆಗಳೊಂದಿಗೆ ಹಾಜರಾದರೆ ಅವರಿಗೆ ರಜೆ ನೀಡಲಾಗುವುದು.
4) ಕರ್ತವ್ಯ ನಿರ್ವಹಿಸಲು ಆಶಕ್ತರಾದವರು (not-fit for duty ) VRS ತೆಗೆದುಕೊಳ್ಳಲು ತಿಳಿವಳಿಕೆ ನೀಡಬೇಕು.
5) ಪದೇಪದೇ ಗೈರು ಹಾಜರಾಗುವ ಸಿಬ್ಬಂದಿಗಳ Pass /ID-card ಅನ್ನು ವರ್ಷ ಪೂರ್ತಿ ನವೀಕರಿಸದೆ (renewal) ವಾರದ ಅಥವಾ ತಿಂಗಳ ಅವಧಿಗೆ ಮಾತ್ರ ನವೀಕರಿಸಬೇಕು (ಮುಂದುವರಿದ ನಿರ್ದೇಶನಗಳನ್ನು ನೀಡಲಾಗುವುದು).
6) ಗೈರು ಹಾಜರಿಯಲ್ಲಿರುವ ಸಿಬ್ಬಂದಿಗಳು ದೂರವಾಣಿ ಸಂಪರ್ಕಕ್ಕೆ ಸಿಗದೇ ಇದ್ದಾಗ, ಘಟಕದ Security/ Traffic asst / Est ಯವರು ಖುದ್ದಾಗಿ ಗೈರಾಗಿರುವ ಸಿಬ್ಬಂದಿಗಳ ಮನೆಗೆ ಭೇಟಿ ಇತ್ತು ಮನವರಿಕೆ ಮಾಡಬೇಕು. ಇನ್ನು ಮನೆ 25ಕಿಮೀ ಒಳಗಿದ್ದರೆ ಘಟಕದ ಜೀಪ್ ಉಪಯೋಗಿಸಬಹುದು ಎಂಬ ಮಹತ್ವದ ಸೂಚನೆಗಳನ್ನು ಘಟಕ ವ್ಯವಸ್ಥಾಪಕರಿಗೆ ಭದ್ರತಾ & ಜಾಗೃತ ವಿಭಾಗದ ನಿರ್ದೇಶಕರು ನೀಡಿದ್ದಾರೆ.
Related









