NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ಫಾರಂ-4 ಉಲ್ಲಂಘಿಸಿದರೆ ಹುಷಾರ್‌: ಮುಖ್ಯ ಭದ್ರತಾ- ಜಾಗೃತಾಧಿಕಾರಿ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಅನುಸೂಚಿ ವಾಹನಗಳ ಅನಧೀಕೃತ ಕಾರ್ಯಾಚರಣೆಯಿಂದ ಅಪಾಘಾತಗಳು ಹೆಚ್ಚಾಗುತ್ತಿರುವ ಜತೆಗೆ ಸಂಸ್ಥೆಯ ಆದಾಯದ ಮೇಲು ಪರಿಣಾಮ ಬೀರುತ್ತಿರುವುದರಿಂದ ಈ ಬಗ್ಗೆ ನಿಗಾವಹಿಸಿ ವರದಿ ಸಲ್ಲಿಸಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸೂಕ್ತಾಧಿಕಾರಿಗಳು 26/11/2025 ರಂದು ವಿಡಿಯೋ ಸಂವಾದದಲ್ಲಿ ಆದೇಶ ನೀಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಅನುಸೂಚಿ ವಾಹನಗಳು ವೇಳಾ ಪಟ್ಟಿ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಇದರಿಂದ ರಸ್ತೆ ಅಪಘಾತಕ್ಕೆ ಮತ್ತು ಸಂಸ್ಥೆಗೆ ನಷ್ಟ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಹಿನ್ನೆಲೆಯಲ್ಲಿ ನಾವು ಆದೇಶಿಸಿರುವ ಈ ಕೆಳಕಂಡ ವಿಷಯಗಳ ಬಗ್ಗೆ ನಿಗಾವಹಿಸಬೇಕು ಮತ್ತು ಮತ್ತು ಉಲ್ಲಂಘನೆಯ ಪ್ರಕರಣಗಳನ್ನು ವರದಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

1) ಅನುಸೂಚಿ ವೇಳಾ ಪಟ್ಟಿ (ನಮೂನೆ-4) ಉಲ್ಲಂಘಿಸಿ ನಿರಂತರ ಬಸ್ ಕಾರ್ಯಾಚರಣೆ ಮಾಡುತ್ತಿರುವ ಕುರಿತು ಘಟಕದ ಕರಾಸಾ ಹವಿಲ್ದಾರ ಅವರಿಂದ ವರದಿ ಪಡೆದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಈ ನಮ್ಮ ಕಚೇರಿಗೆ ವರದಿ ಸಲ್ಲಿಸಬೇಕು.

2) ಸಕಾರಣ ಇಲ್ಲದೇ ನಮೂನೆ-4ರ ಸಮಯಕ್ಕಿಂತ ಮುಂಚಿತವಾಗಿ ಘಟಕದಿಂದ ವಾಹನ ಹೊರಗೆ ಹೋಗಿರುವುದು (Early Departure) ಮತ್ತು ಮುಂಚಿತವಾಗಿ ಘಟಕದ ಒಳಗೆ ಬಂದಿರುವ (Early Arrival) ಪ್ರಕರಣ ಕಂಡು ಬಂದಲ್ಲಿ, ಇನ್ನು ಮುಂದೆ ಅಂತಹ ವಾಹನಗಳನ್ನು ಘಟಕದ ಭದ್ರತಾ ದ್ವಾರದಿಂದ ನಮೂನೆ-4ರ ಸಮಯಕ್ಕಿಂತ ಮುಂಚಿತವಾಗಿ ಹೊರಗೆ ಬಿಡದಂತೆ (Out) ಹಾಗೂ ಮುಂಚಿತವಾಗಿ ಒಳಗೆ (in) ತೆಗೆದುಕೊಳ್ಳದಂತೆ ಘಟಕದ ಭದ್ರತಾ ಸಿಬ್ಬಂದಿಗಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಲಿಖಿತ ಆದೇಶ ಹೊರಡಿಸಲು ಕ್ರಮವಹಿಸಬೇಕು.

ಅಲ್ಲದೇ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಸುರಕ್ಷಿತ ಚಾಲನೆ, ಸಾರಿಗೆ ಆದಾಯ ಸಂಗ್ರಹಣೆ ಮತ್ತು ಸಾರ್ವಜನಿಕ ಸೇವೆಗೆ ವ್ಯತ್ಯಯ ಉಂಟಾಗುವ ಗಂಭೀರ ಪ್ರಕರಣಗಳ ಬಗ್ಗೆ ನಿಗಾವಹಿಸಿ ಗಂಭೀರ ಪ್ರಕರಣಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಲಿಖಿತವಾಗಿ ಗಮನಕ್ಕೆ ತರಲು ಮತ್ತು ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.

ಇನ್ನು ನ.29-2025ರಂದು ಹೊರಡಿಸಿರುವ ಈ ಆದೇಶವು ಮುಂದಿನ ನಿರ್ದೇಶನದವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ನೌಕರರ ವೇತನ ಹೆಚ್ಚಳ ಸಂಬಂಧದ ಹೋರಾಟ ನಿಲ್ಲುವುದಿಲ್ಲ ಹೈ ಕೋರ್ಟ್‌ ನಿರ್ದೇಶನದಂತೆ ಮುಂದುವರಿಯಲಿದೆ- ಚಂದ್ರಶೇಖರ... ಏ.29ರಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ 2024ರ ಜ.1ರಿಂದ ನೌಕರರ ವೇತನ ಹೆಚ್ಚಳ, ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ... ಏ.29ರ ಒಳಗೆ ರೈತರ ಖಾತೆಗೆ ಬಾಕಿ ಹಣ ಜಮಾ ಡಿಸಿ ಭರವಸೆ ಹಿನ್ನೆಲೆ ಧರಣಿ ತಾತ್ಕಾಲಿಕ ಮುಂದೂಡಿಕೆ: ಕುರುಬೂರು ಶಾಂತಕುಮಾರ್... ಇದ್ದಲ್ಲಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೀರುವ ಸಾರಿಗೆ ನೌಕರರು: ಧರ್ಮ ಸಂಕಟದಲ್ಲಿ ಪೊಲೀಸರು ಮೈಸೂರು: ಹೆಚ್ಚುವರಿ ಹಣ 100 ರೂ. ಪಾವತಿಗೆ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ KSRTC: ಪ್ರಣಾಳಿಕೆ ಭರವಸೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ... KSRTC: ಅರಿಸಿನಕುಂಟೆಯಲ್ಲಿ ಪಾದಯಾತ್ರೆ ತಡೆದಿದ್ದ ಪೊಲೀಸರು ಸದ್ಯ ಫ್ರೀಡಂ ಪಾರ್ಕ್‌ನತ್ತ ಹೊರಟ ಸಾರಿಗೆ ನೌಕರರು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ, ಸಾರಿಗೆ ಸಚಿವರಿಗೆ ಮಾರ್ಗದರ್ಶನ ನೀಡುವಂತೆ ಹೈ ಕೋರ್ಟ್‌ ಸಿಜೆಗೆ ಲಿಖಿತ ಮನವ... KSRTC: ಬೆಂಗಳೂರಿಗೆ ಪಾದಯಾತ್ರೆ ಬರುತ್ತಿರುವ ಸಾರಿಗೆ ನೌಕರರ ಅರಿಸಿನಕುಂಟೆ ಬಳಿ ತಡೆದ ಪೊಲೀಸರು KSRTC: ಮುಂದಿನ ಚಕ್ರದ ಮುಡಿ ಕಟ್ಟಾಗಿ ಬಸ್‌ ಪಲ್ಟಿ- ಸಣ್ಣಪುಟ್ಟಗಾಯಗಳೊಂದಿಗೆ 74 ಪ್ರಯಾಣಿಕರು ಪಾರು