ಫಾರಂ-4 ಉಲ್ಲಂಘಿಸಿ ಕಾರ್ಯಾಚರಣೆಗೆ ಸಾಥ್ ನೀಡುವ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ: ಹಾವೇರಿ ಸಾರಿಗೆ ವಿಭಾಗದ ಡಿಸಿ ಆದೇಶ

ಹಾವೇರಿ: ಅನುಸೂಚಿ ವಾಹನಗಳು Form-4 ವೇಳಾಪಟ್ಟಿ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಪ್ರಕರಣಗಳಿಗೆ ಸಾಥ್ ನೀಡುವ ಭದ್ರತಾ ಸಿಬ್ಬಂದಿ ವಿರುದ್ಧ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ನ.29ರಂದು ಆದೇಶ ಹೊರಡಿಸಿರುವ ಅವರು, ಈ ವಿಷಯದ ಕುರಿತು ನಿಷ್ಕಾಳಜಿ, ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಲ್ಲಿ ಅಂತಹ ಭದ್ರತಾ ಸಿಬ್ಬಂದಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಏಕೆ ಈ ಆದೇಶ?: ಈ Form-4 ವೇಳಾಪಟ್ಟಿ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಅನುಸೂಚಿ ವಾಹನಗಳು Form-4 ವೇಳಾಪಟ್ಟಿ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಸ್ತೆ ಅಪಘಾತಕ್ಕೆ ಮತ್ತು ಸಂಸ್ಥೆಗೆ ನಷ್ಟ ಉಂಟಾಗುವ ಸಾಧ್ಯೆತೆ ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಗಮನಿಸಿದ್ದಾರೆ.
ಹೀಗಾಗಿ ಈ ಸಂಬಂಧ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳು ನಮಗೆ ಜ್ಞಾಪನಾ ಪತ್ರ ಹೊರಡಿಸಿದ್ದು, ಸಕಾರಣ ಇಲ್ಲದೆ ನಮೂನೆ-4 ಸಮಯಕ್ಕಿಂತ ಮುಂಚಿತವಾಗಿ ಘಟಕದಿಂದ ವಾಹನ ಹೊರ ಹೋಗದಂತೆ ಹಾಗೂ ಒಳಗೆ ಬರದಂತೆ ಘಟಕದ ಭದ್ರತಾ ಸಿಬ್ಬಂದಿಗಳಿಗೆ ಲಿಖಿತ ಆದೇಶ ಹೊರಡಿಸಲು ನ.26ರಂದು ಸೂಚಿಸಿದ್ದಾರೆ.
ಅದರನ್ವಯ ಪ್ರಸ್ತುತ ಹಾವೇರಿ ವಿಭಾಗದಲ್ಲಿ ಅನುಸೂಚಿ ವಾಹನಗಳು Form-4 ಪ್ರಕಾರ ಘಟಕದಿಂದ ನಿರ್ಗಮನವಾಗುವ ಹಾಗೂ ಘಟಕಕ್ಕೆ ಆಗಮಿಸುವ ಅನುಸೂಚಿವಾರು ಅಧಿಕೃತ ವೇಳಾಪಟ್ಟಿಯನ್ನು ಅಡಕಗೊಳಿಸಿದ್ದು, ಈ ವೇಳಾಪಟ್ಟಿಯಂತೆ ಇಂದಿನಿಂದ ತಮ್ಮ ತಮ್ಮ ಘಟಕಗಳ ಅನುಸೂಚಿ ವಾಹನಗಳನ್ನು ಘಟಕದಿಂದ ಹೊರಗೆ ಬಿಡಲು ಹಾಗೂ ಘಟಕದ ಒಳಗೆ ತೆಗೆದುಕೊಳ್ಳಬೇಕು.
ಮುಖ್ಯವಾಗಿ ಯಾವುದೇ ಅನುಸೂಚಿ ವಾಹನಗಳನ್ನು ಸಕಾರಣಗಳಿಲ್ಲದೆ ನಮೂನೆ-4ರ ಸಮಯಕ್ಕಿಂತ ಮುಂಚಿತವಾಗಿ ಘಟಕದಿಂದ ಹೊರಗೆ ಬಿಡಬಾರು ಹಾಗೂ ನಮೂನೆ-4 ಸಮಯಕ್ಕಿಂತ ಮುಂಚಿತವಾಗಿ ವಾಹನವನ್ನು ಘಟಕದ ಒಳಗೆ ತೆಗೆದುಕೊಳ್ಳಬಾರದು ಹಾಗೂ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಗಳು ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಯಾವುದೇ ಭದ್ರತಾ ಸಿಬ್ಬಂದಿ ಈ ವಿಷಯದ ಕುರಿತು ನಿಷ್ಕಾಳಜಿ, ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಲ್ಲಿ ಅಂತಹ ಸಿಬ್ಬಂದಿಗಳ ವಿರುದ್ಧ ತಕ್ಷಣ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Related









