ಬೀದರ್: ಸಾರಿಗೆ ನೌಕರರಿಗೆ ಅವಾಚ್ಯವಾಗಿ ಬೈದಿರುವ ಕಿಡಿಗೇಡಿಯ ಬಂಧಿಸಿ- ಪೊಲೀಸರಿಗೆ ದೂರು ಕೊಟ್ಟ ಕೂಟದ ಪದಾಧಿಕಾರಿಗಳು

ಬೀದರ್: ಸಾಮಾಜಿಕ ಜಾಲತಾಣದಲ್ಲಿ ಕೆ.ಎಸ್.ಆರ್.ಟಿ.ಸಿಯ ಚಾಲಕರಿಗೆ ಮನಬಂದಂತೆ ಅವಾಚ್ಯ ಶಬ್ದದಿಂದ ಬೈದಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೂತನ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ದೂರು ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ (04-12-2025) ಮಧ್ಯಾಹ್ನ ಸಾಮಾಜಿಕ ಜಾಲತಾಣವಾದ instagram ID: Mr_smile_009 ರಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಚಾಲಕ, ನಿರ್ವಾಹಕರಿಗೆ ಹೆಂಡತಿ, ತಾಯಿ, ತಂಗಿಯನ್ನುವುದನ್ನೇ ಮರೆತು ಅವಾಚ್ಯ ಶಬ್ದದಿಂದ ಬೈಯ್ದಿರುವ ವಿಡಿಯೋ ಹರಿದಾಡುತಿದೆ.
ಹಗಲಿರುಳೆನ್ನದೇ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ನಿಗಮದ ನೌಕರರಿಗೆ ಇದನ್ನು ನೋಡಿ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಅಲ್ಲದೆ ಸಾರ್ವಜನಿಕರಲ್ಲಿ ನಿಗಮದ ನೌಕರರ ಮರ್ಯಾದೆ ಕಳೆದಿದ್ದಾನೆ.
ನಿಗಮದ ನೌಕರರ ಗೌರವಕ್ಕೆ ಧಕ್ಕೆ ತರುವಂತ ಈ ವಿಡಿಯೋ ಮಾಡಿ ಸರಕಾರದ ಅಂಗ ಸಂಸ್ಥೆಯಾದ ಕೆ.ಎಸ್.ಆರ್.ಟಿ.ಸಿಯ ಗೌರವಕ್ಕೂ ಧಕ್ಕೆ ಉಂಟು ಮಾಡಿರುವ ಈ ವ್ಯಕ್ತಿಯೂ ಸಮವಸ್ತ್ರವಿಲ್ಲದೇ ಆಟೋ ಚಾಲನೆ ಮಾಡುತ್ತಾ ರಸ್ತೆ ನಿಯಮವನ್ನು ಉಲ್ಲಂಘನೆ ಮಾಡಿ ನೌಕರರ ಬಗ್ಗೆ ಕೆಟ್ಟದಾಗಿ ಬೈಯಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ಆದುದ್ದರಿಂದ, ತಾವು ಈ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ instagram ID: Mr_smile_009 ಸಂಬಂಧ ಪಟ್ಟ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾರಿಗೆ ನೌಕರರ ಕೂಟದ ವತಿಯಿಂದ ದೂರು ಸದಲ್ಲಿಸುತ್ತಿದ್ದೇವೆ.
ಒಂದು ಒಳ್ಳೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟದ ಹಾದಿ ಹಿಡಿಯಲಾಗುವುದೆಂದು ಈ ಮೂಲಕ ಸಾರಿಗೆ ನೌಕರರ ಕೂಟ ಆಗ್ರಹಿಸಿದೆ.
ದೂರು ಸಲ್ಲಿಸುವ ವೇಳೆ ಕೂಟದ ಬೀದರ್ ವಿಭಾಗದ ಅಧ್ಯಕ್ಷ ಬಸವರಾಜ ಚಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಇದ್ದರು.
Related









