ಕೃಷಿನಮ್ಮರಾಜ್ಯ

ಕಬ್ಬು ಬೆಳೆಗಾರರ ಸಂಘ ಚಂದಾವಸೂಲಿ ಮಾಡುತ್ತಿಲ್ಲ- ವಂಚನೆಗೆ ಒಳಗಾಗದಿರಿ: ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಸ್ಪಷ್ಟನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಸಂಘದ ಹೆಸರಿನಲ್ಲಿ ವಿಶ್ವ ರೈತ ದಿನಾಚರಣೆ (ರೈತರ ಹಬ್ಬ) ಆಚರಣೆ ಅಂಗವಾಗಿ ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆ – ಇನ್ನಿತರೆ ಸಂಘದ ಸಭೆ ಸಮಾರಂಭಗಳನ್ನು ನಡೆಸಲು ಯಾವುದೇ ಚಂದಾ ವಸೂಲಿ ಮಾಡುತ್ತಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ನೌಕರರು, ರಾಜಕಾರಣಿಗಳು, ಜನಪ್ರತಿನಿಧಿಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಿರುವುದು ಕೇಳಿ ಬರುತ್ತಿದೆ. ಹೀಗಾಗಿ ನಮ್ಮ ಸಂಘಟನೆ ಯಾರ ಬಳಿಯೂ ಚಂದಾ ವಸೂಲಿ ಮಾಡುವುದಿಲ್ಲ. ಅಂಥ ಅವಶ್ಯಕತೆ ಬಿದ್ದಾಗ ಸಂಘಟನೆ ಪದಾಧಿಕಾರಿಗಳು ಹಾಗೂ ರೈತರಿಂದಲೇ ಹಣ ಸಂಗ್ರಹಿಸಿ ಖರ್ಚು ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಲೆಕ್ಕವನ್ನು ಒಪ್ಪಿಸುತ್ತೇವೆ. ಇದು ನಮ್ಮ ಸಂಘದ ಸಿದ್ಧಾಂತ.

ಆದರೆ, ಚಂದಾ ವಸೂಲಿಗೆ ಬಂದವರಿಗೆ ಹಣ ಕೊಟ್ಟು ವಂಚನೆಗೆ ಒಳಗಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿರುವ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೆಸರಿನಲ್ಲಿ ಪುಸ್ತಕ – ಬಿಡುಗಡೆ ಮಾಡುತ್ತೇವೆ ಎಂದು ಅಲ್ಲದೆ ರಾಷ್ಟ್ರೀಯ ಹಬ್ಬಗಳ ಆಚರಣೆ ಹೆಸರಿನಲ್ಲಿ ಹಣ ಮತ್ತು ದವಸ ಧಾನ್ಯಗಳು ಸೇರಿದಂತೆ ಚಂದಾ ವಸೂಲಿ ಮಾಡುತ್ತಿರುವುದು ಕೇಳಿಬಂದಿದೆ. ಇದಕ್ಕೆ ಸಂಘಟನೆಯಾಗಲಿ, ಸಂಘದ ಪದಾಧಿಕಾರಿಗಳಾಗಲಿ ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ರೀತಿಯ ವಂಚನೆಗೆ ಒಳಗಾಗಬೇಡಿ. ಸಂಘದ ಹೆಸರಿನಲ್ಲಿ ಚಂದಾವಸೂಲಿಗೆ ಬರುವಂತವರ ಮೇಲೆ ಅನುಮಾನ ಬಂದರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಿಗೆ ಒಪ್ಪಿಸಿ ಎಂದು ಅತ್ತಹಳ್ಳಿ ದೇವರಾಜ್ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!