KSRTC: ಸಾಲುಸಾಲು ವಿಫಲಗೊಂಡ ಸಭೆಗಳು ಈಡೇರದ ವೇತನ ಹೆಚ್ಚಳದ ಬೇಡಿಕೆ- ನಾಳೆಯಿಂದಲೇ ಪ್ರತಿಭಟನೆಗೆ ಸಜ್ಜಾಗುತ್ತಿರುವ ನೌಕರರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ವೇತನಕ್ಕೆ ಸಂಬಂಧಪಟ್ಟಂತೆ ಸರ್ಕಾರ ವರ್ಸಸ್ ಸಾರಿಗೆ ನೌಕರರ ಜಟಾಪಟಿ ತಾರಕಕ್ಕೇರುತ್ತಿದ್ದು ಇದೇ ತಿಂಗಳು ಭಾರಿ ಪ್ರತಿಭಟನೆಗೆ ನೌಕರರು ಸಜ್ಜಾಗುತ್ತಿದ್ದಾರೆ.

ಹೌದು! ಸರ್ಕಾರ ಮತ್ತು ಸಾರಿಗೆ ಸಂಘಟನೆಗಳ ನಡುವೆ ನಡೆದ ಸಾಲುಸಾಲು ಸಂಧಾನ ಸಭೆಗಳು ವಿಫಲವಾಗಿರುವುದರಿಂದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ ಹಾದಿ ಹಿಡಿಯಲು ಸಿದ್ಧರಾಗಿದ್ದಾರೆ. ಇನ್ನು ಅಧಿವೇಶನ ಬಳಿಕ ಅಂದರೆ ಡಿ.19ರಂದು ಅಧಿವೇಶ ಕೊನೆಗೊಳ್ಳಲಿದ್ದು ನಂತದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರು ಕರಪತ್ರಗಳನ್ನು ಹಂಚುವ ಮೂಲಕ ಹೋರಾಟ ಮಾಡುವುದು ಶತಸಿದ್ಧ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸುತ್ತಿದ್ದಾರೆ.
ಇನ್ನು ನಾಳೆ (ಡಿ.15)ಯಿಂದ ಮತ್ತೆ ಮುಷ್ಕರ ನಡೆಸಲು ಸಾರಿಗೆ ಸಂಘಟನೆಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಮತ್ತೆ ಸಾರಿಗೆ ಸಂಘಟನೆಗಳು ಮುಷ್ಕರ ಸಂಬಂಧ ರೂಪುರೇಷೆ ರೂಪಿಸುತ್ತಿವೆ. ಸಾರಿಗೆ ಸಂಘಟನೆಗಳು ಸೋಮವಾರದಿಂದಲೇ ಮುಷ್ಕರ ಮಾಡುವುದಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಪ್ರತಿ ಡಿಪೋಗಳೀಗೂ ತೆರಳಿ ನೌಕರರಿಗೆ ಖುದ್ದು ಸರ್ಕಾರದ ನಿರ್ಧಾರ ತಿಳಿಸಲು ಪ್ಲಾನ್ ಮಾಡಿಕೊಂಡಿವೆ.
ಅಧಿವೇಶನ ಮುಗಿಯುತ್ತಿದ್ದಂತೆ ಮುಷ್ಕರದ ಬಗ್ಗೆ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಂಡಿವೆ. ಇನ್ನು ನಾವು ಬರಿ ಸಭೆಗಳು ಸಭೆಗಳು ಎಂದು ಕೂರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಪ್ರತಿಭಟನೆ ಮೂಲಕವೇ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂಬ ನಿರ್ಧಾರಕ್ಕೆ ಬಂದಿವೆ.
ಇನ್ನು ಅಧಿವೇಶನ ಮುಗಿಯುವವರೆಗೂ ಹಂತ ಹಂತವಾಗಿ ಪ್ರತಿಭಟನೆಗೆ ಯೋಜನೆ ನಡೆಸಿದ್ದು, ನಿಗಮಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ. ಸರ್ಕಾರ ನಿಗಮಗಳಿಗೆ ಕೊಡಬೇಕಿರುವುದನ್ನು ಕೊಟ್ಟರೆ ಯಾವುದೇ ಆರ್ಥಿಕ ಸಮಸ್ಯೆ ಆಗದು ಎಂದು ಹೇಳುತ್ತಿದ್ದಾರೆ. ಇನ್ನು ನೀವು ನಿಗಮಗಳ ಆರ್ಥಿಕ ಪರಿಸ್ಥಿತಿ ಕಾರಣ ಕೊಡುತ್ತಿರುವುದು ಸರಿಯಲ್ಲ ನೀವೆ ಸಾರಿಗೆ ಸಂಸ್ಥೆಗಳಿಗೆ ಕೊಡಬೇಕಿರುವುದನ್ನು ಬಾಕಿ ಉಳಿಸಿಕೊಂಡು ಇಲ್ಲ ಸಲ್ಲದ ಕಾರಣಕೊಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ ಸರ್ಕಾರದ ವಿರುದ್ಧ ನೌಕರರು ಆಕ್ರೋಶ ಹೊರಹಾಕುತ್ತಿದ್ದು, 2 ವರ್ಷದಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಹೋರಾಟ ನಡೆಸಿದ್ದಾರೆ. ಆದರೂ ಕೂಡ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ ನೌಕರರು ಮತ್ತೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಲೆ ಬೇಕು ಎಂದು ಸಕಲ ತಯಾರಿ ನಡೆಸಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಬಸ್ ಓಡಾಟಕೂಡ ಬಂದ್ ಮಾಡಿ ಮುಷ್ಕರಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ನೌಕರರ ಪ್ರತಿಭಟನಾ ಪೂರ್ವ ಸಿದ್ಧತೆ ಏನು?: ಸೋಮವಾರದಿಂದ (ಡಿ.15) ಕರ ಪತ್ರ ಹಂಚಿ ನೌಕರರಲ್ಲಿ ಜಾಗೃತಿ ಮೂಡಿಸುವುದು. ನೌಕರರ ಮುಖಂಡರು ಖುದ್ದು ಡಿಪೋಗಳಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗಿ ಆಗಲು ಮನ ಒಲಿಸುವುದು.
ಡಿಪೋ ಹಂತದಲ್ಲಿ ಪ್ರತಿಭಟನೆಗೆ ಸಜ್ಜು ಮಾಡುವುದು. ಯಾವುದೇ ಸಂದರ್ಭದಲ್ಲಿ ಮುಷ್ಕರಕ್ಕೆ ಕರೆ ಕೊಟ್ಟರು ನೀವು ಸಜ್ಜ ನಿಲ್ಲಬೇಕು ಎಂದು ಮಾನಸಿಕವಾಗಿ ರೆಡಿ ಮಾಡುವುದು. ಜತೆಗೆ ಅನಿರ್ದಿಷ್ಟವಾದಿ ಮುಷ್ಕರ ಮಾಡುವ ಮೂಲಕ ಸರ್ಕಾರವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಬೇಕು.
ನೌಕರರ ಬೇಡಿಕೆಗಳು ಏನು?: 2020 ಜನವರಿ 1ರಿಂದ ಅನ್ವಯವಾಗುವಂತೆ 2023 ಮಾರ್ಚ್‌ನಲ್ಲಿ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ವೇತನ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.
ಸರ್ಕಾರಿ ನೌಕರರಿಗೆ ನೀಡುವ ವೇತನದಂತೆ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿಸಮಾನ ವೇತನ ನೀಡಬೇಕು. ಅದು ಕೂಡ 2024 ಜನವರಿ 1ರಿಂದ ಜಾರಿಗೆ ಬರುವಂತೆ ಘೋಷಣೆ ಮಾಡಬೇಕು.
ಇನ್ನು ನಮ್ಮಲ್ಲಿ ಕಾರ್ಮಿಕರಿಲ್ಲ ನಾವು ಇರುವುದು ಸಾರಿಗೆ ನೌಕರರು ಹೀಗಾಗಿ ಕೆಲವರು ನಮ್ಮನ್ನು ಕಾರ್ಮಿಕರು ಎಂದು ಕರೆಯುವುದಕ್ಕೆ ತಡೆ ನೀಡುವ ಜತೆಗೆ ನಮಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
Related









