ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹಾಗೂ ಪಿಂಚಣಿ ವಿಷಯದಲ್ಲಿ ಸಾರಿಗೆ ನೌಕರರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಕಾರ್ಮಿಕ ಸಂಘಟನೆಗಳು ವಿಫಲವಾಗಿವೆ.

ಇನ್ನು ಮುಖ್ಯವಾಗಿ ಬೇಡಿಕೆ ಈಡೇರಿಸುವುದು ಈಗ ಆ ಎರಡೂ ಕಾರ್ಮಿಕ ಸಂಘಟನೆಗಳಿಗೆ ಬೇಕಾಗಿಲ್ಲ ಎಂದು ಕಾಣಿಸುತ್ತದೆ. ಅದಕ್ಕೆ ಕಾರಣ ನಮ್ಮ ಅಭಿಪ್ರಾಯದ ಪ್ರಕಾರ…
1) ಇಂದೇ ಸರ್ಕಾರಿ ನೌಕರರಿಗೆ ಸಿಗುತ್ತಿರುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಪಿಂಚಣಿ ದೊರಕಿಸಿಕೊಟ್ಟರೆ, ಚುನಾವಣೆ ಎನ್ನುವ ನಮ್ಮ ಪರಮ ಬೇಡಿಕೆ ಈಡೇರುವುದಿಲ್ಲ, ಅದಕ್ಕೆ ಮೊದಲು ಚುನಾವಣೆ ನಂತರ ಬೇಡಿಕೆ ಎಂದು ಒಂದು ಸಂಘಟನೆ ಚುನಾವಣೆ ನಡೆಸುವಂತೆ ಸರ್ಕಾರ ನಡೆಸುತ್ತಿರುವ ಆಡಳಿತ ಪಕ್ಷವನ್ನು ಓಲೈಸುತ್ತ ಅದರ ಕೈಗೊಂಬೆಯಂತೆ ವರ್ತಸುತ್ತಿದೆ.
2) ಜೀವಂತ ಇರುವಾಗಲೇ ಶವಯಾತ್ರೆ ಮಾಡಿರುವ ಸಾರಿಗೆ ನೌಕರರು ಸದಾ ಕೊರತೆ, ತೊಂದರೆ ಅನುಭವಿಸುತ್ತ, ನರಳುತ್ತಿರಬೇಕು. ಭಿಕ್ಷುಕರಿಗೆ ನೀಡಿದಂತೆ ನೀಡಬೇಕು. ನಾಯಿಗೆ ರೊಟ್ಟಿ ಒಗೆದಂತಾಗಬೇಕು.
3) ಇತಿಹಾಸವಿರುವ ನಮ್ಮ ಸಂಘಟನೆಯನ್ನು ತುಳಿದು ಮುಂದೆ ನುಗ್ಗುತ್ತಿರುವ ಆ ಸಂಘಟನೆ ಬಗ್ಗೆ ತಪ್ಪು ಕಲ್ಪನೆ ಮೂಡಿ, ಥೂ…ಛೀ.. ಎಂದು ಆ ಸಂಘಟನೆ ಇಲ್ಲದಂತೆ ಮಾಡಬೇಕು ಎನ್ನುತ್ತ ವೇತನ ಹಾಗೂ ಇತರ ಬೇಡಿಕೆ ಈಡೇರಿಸದೇ ನಮ್ಮೆದೆರು ಮೊಸಳೆ ಕಣ್ಣೀರು ಸುರಿಸುತ್ತ ಮುನ್ನಡೆದಿದೆ ಮತ್ತೊಂದು ಸಂಘಟನೆ.
ಒಟ್ಟಿನಲ್ಲಿ ಎರಡೂ ಕಾರ್ಮಿಕ ಸಂಘಟನೆಗಳ ಒಳಗಿನ ಮನಸ್ಥಿತಿ ಇದಾಗಿದೆ. ಇನ್ನು ಬೆನ್ನು ಹತ್ತಿದ ಇತರೇ ಕಾರ್ಮಿಕ ಸಂಘಟನೆಗಳ ಮುಖಂಡರೆನಿಸಿಕೊಂಡವರು ಅವರವರಿಗೇ ಜೈಕಾರ ಹಾಕುತ್ತ ಮುನ್ನಡೆಯುತ್ತಿದ್ದಾರೆ.
ಈ ಎಲ್ಲದಕ್ಕೂ ಇತಿಶ್ರೀ ಹಾಡಬೇಕಾದರೆ ಮೊದಲು ನಾವು ಅಧಿಕಾರಿಗಳು, ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಸೂಪರ್‌ವೈಸರ್‌ಗಳು, ಘಟಕ ವ್ಯವಸ್ಥಾಪಕರು ಎಂಬ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಮುಂದೆ ಹೋಗಬೇಕಿದೆ.
ಇದಕ್ಕೆ ನಾಲ್ಕೂ ನಿಗಮಗಳ ಸಮಸ್ತ ನೌಕರರು ಅಧಿಕಾರಿಗಳೂ ಒಳಗೊಂಡಂತೆ ಒಂದಾಗೋಣ ಇಂದಿನಿಂದಲೇ ಎಲ್ಲ ಡಿಪೋಗಳಲ್ಲೂ ಡಿಎಂ, ಎಟಿಎಸ್, ಟಿಐ ಹಾಗೂ ಟಿಸಿಗಳು ಕೂಡ ನೌಕರರಿಗೆ ಸಲಹೆ ನೀಡುವ ಮೂಲಕ ಒಗ್ಗಟ್ಟಿನಿಂದ ಮುನ್ನಡೆಯುವುದಕ್ಕೆ ಕರೆ ನೀಡಬೇಕು ಎಂದು ಸೂಪರ್‌ವೈಸರ್‌ಗಳ ಸಂಘದ ಪದಾಧಿಕಾರಿಗಳು ಕರೆ ನೀಡಿದ್ದಾರೆ.
Related











ವೇತನ ಮತ್ತು ಪಿಂಚಣಿ ವಿಚಾರದಲ್ಲಿ ನೌಕರರ ಹಕ್ಕುಗಳನ್ನು ಗಂಭೀರವಾಗಿ ನೋಡದೇ, ರಾಜಕೀಯ ಲಾಭದ ಲೆಕ್ಕದಲ್ಲಿ ನಡೆದುಕೊಳ್ಳುತ್ತಿರುವ ಸಂಘಟನೆಗಳ ಬಗ್ಗೆ ಲೇಖನದಲ್ಲಿ ಹೇಳಿರುವ ಅಸಹನೆ ಸ್ಪಷ್ಟವಾಗುತ್ತಿದೆ. ನಿಜವಾಗಿ ಒಗ್ಗಟ್ಟಿನಿಂದಲೇ ನೌಕರರ ಧ್ವನಿ ಬಲವಾಗಿ ಕೇಳಿಸಿಕೊಳ್ಳಲು ಸಾಧ್ಯ, ವಿಶೇಷವಾಗಿ ನಾಲ್ಕೂ ನಿಗಮಗಳ ಸಮಸ್ಯೆಗಳು ಒಂದೇ ಸ್ವರೂಪದ್ದಾಗಿರುವಾಗ. ಈ ಬಾರಿ ನೌಕರರು ಬೇಡಿಕೆಗಳನ್ನು ರಾಜಕೀಯದಾಚೆಗೆ ತೆಗೆದುಕೊಂಡು ನೈಜ ಪರಿಹಾರಕ್ಕೆ ಒತ್ತು ನೀಡುವುದೇ ಮುಖ್ಯ ಎನ್ನಿಸುತ್ತದೆ.