ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ಎಲ್ಲ ಮುಖ್ಯ ಸಂಘಟನೆಗಳ ಕ್ರೂಢೀಕೃತ ಅಭಿಪ್ರಾಯ ಸಂಗ್ರಹ ಹಾಗೂ ಸಮೂಹಿಕ ಹೋರಾಟ ಕಾರ್ಯಕ್ರಮ ರೂಪಿಸುವುದಕ್ಕೆ ನೌಕರರ ಒಕ್ಕೂಟ ಇಂದು ಆಹ್ವಾನ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ನಾವೆಲ್ಲ ನಮ್ಮ ನಮ್ಮ ಸಂಘಗಳ ವತಿಯಿಂದ ಪ್ರತ್ಯೇಕವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಸಹ ಯಾವುದೇ ಪ್ರಯೋಜನ ನೌಕರರಿಗೆ ಆಗಿಲ್ಲ.
ಜತೆಗೆ ಮುಖ್ಯ ಮಂತ್ರಿಗಳು, ಸಾರಿಗೆ ಸಚಿವರು ಮತ್ತು ಅಧಿಕಾರಗಳ ನೇತೃತ್ವದಲ್ಲಿ ಹಲವು ಸುತ್ತುಗಳ ಸಭೆಗಳು ನಡೆದಿದ್ದರೂ ಯಾವುದೇ ನಿರ್ಣಾಯಕ್ಕೆ ಬಾರದೆ ಕಾಲಹರಣ ಆಗುತ್ತಿರುವ ಕಾರಣ ನೌಕರರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ.
ಹೀಗಾಗಿ ಈ ಎಲ್ಲ ನಡೆಯಿಂದ ನೌಕರರ ಆರ್ಥಿಕ ಪರಿಸ್ಥಿತಿ ಹೇಳತ್ತಿರದಷ್ಟು ತೀರ ಕೇಳ ಹಂತಕ್ಕೆ ತಲುಪಿದೆ. ಇದೇ ರೀತಿಯಲ್ಲಿ ನಾವು ಪ್ರತ್ಯೇಕ ಹೋರಾಟ ಮತ್ತು ಸಭೆಗಳನ್ನು ಮಾಡುತ್ತ ಮುಂದುವರಿದರೆ ನೌಕರರು ಮತ್ತಷ್ಟು ಅವರ ಆರ್ಥಿಕ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾದ ಸಂಭವವಿದೆ.
ಆದ್ದರಿಂದ ಎಲ್ಲ ಸಂಘಟನೆಗಳು ಒಂದುಗೂಡಿ ಒಮ್ಮತದ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಹೋರಾಟಗಳನ್ನು ಹಮ್ಮಿಕೊಳ್ಳಲು ತುರ್ತಾಗಿ ಸಭೆ ಸೇರಬೇಕಾದ ಅನಿರ್ವಾಯ ಪರಿಸ್ಥಿತಿ ಇರುವುದರಿಂದ ತಾವೇ ಸ್ಥಳ ಮತ್ತು ಸಮಯ ನಿಗದಿಪಡಿಸಿ ನಮಗೆ ತಿಳಿಸಿದರೆ ನೌಕರರ ಹಿತದೃಷ್ಟಿಯಿಂದ ಒಕ್ಕೂಟದ ಪದಾಧಿಕಾರಿಗಳು ಬರಲು ಸಿದ್ದರಿದ್ದೇವೆ ಎಂದು ಒಕ್ಕೂಟದ ಪದಾಧಿಕಾರಿಗಳ ಪರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಲಿಖಿತವಾಗಿ ಮನವಿ ಕೊಡುವ ಮೂಲಕ ಎಲ್ಲ ಸಂಘಟೆಗಳ ಪದಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
ಯಾವಯಾವ ಸಂಘಟನೆಗಳಿಗೆ ಆಹ್ವಾನ ಮನವಿ ಕೊಡಲಾಗಿದೆ: ಅಧ್ಯಕ್ಷರು, ಪ್ರಧಾನ ಕಾರ್ಯಾದರ್ಶಿಗಳು ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್ ಬೆಂಗಳೂರು.
ಅಧ್ಯಕ್ಷರು, ಪ್ರಧಾನ ಕಾರ್ಯಾದರ್ಶಿಗಳು ಕ.ರಾ.ರ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬೆಂಗಳೂರು.
ಅಧ್ಯಕ್ಷರು,ಪ್ರಧಾನ ಕಾರ್ಯಾದರ್ಶಿಗಳು ಕ.ರಾ.ರ.ಸಾ. ನಿಗಮಗಳ ಸಂಚಾರ ಮೇಲ್ಪಚಾರಕ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು.
ಅಧ್ಯಕ್ಷರು, ಪ್ರಧಾನ ಕಾರ್ಯಾದರ್ಶಿಗಳು ಭಾರತೀಯ ಮಜ್ದೂರ್ ಸಂಘ ಬೆಂಗಳೂರು.
ಅಧ್ಯಕ್ಷರು, ಪ್ರಧಾನ ಕಾರ್ಯಾದರ್ಶಿಗಳು ಕೆ.ಎಸ್.ಆರ್.ಟಿ.ಸಿ ಆಫೀಸರ್ ವೆಲ್ಫರ್ ಅಸೋಶಿಯೇಶನ್ ನಂ.6, ಸ್ಫೂರ್ತಿ ನಿಲಯ, ಮಂಜುನಾಥ ನಗರ, ಗೋಕುಲ ರೋಡ್ ಹುಬ್ಬಳ್ಳಿ.
ಅಧ್ಯಕ್ಷರು, ಪ್ರಧಾನ ಕಾರ್ಯಾದರ್ಶಿಗಳು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಲೆಕ್ಕಪತ್ರ, ಮೇಲ್ವಚಾರಕ & ಅಧೀಕ್ಷಕರ ಕ್ಷೇಮಾಭಿವೃದ್ಧಿ ಸಂಘ ಧಾರವಾಡ ಇವರು ಸೇರಿದಂತೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳಿಗೆ ಆಹ್ವಾನ ಮನವಿ ಪತ್ರ ಸಲ್ಲಿಸಿದ್ದಾರೆ.
Related










