KSRTC: ಯಾವ ತಪ್ಪು ಮಾಡಿರುವುದಕ್ಕೆ ಚಂದ್ರು ಕೆಲಸಗಾರರ ಕ್ಷಮೆ ಕೇಳಬೇಕು- ಅನಂತ ಸುಬ್ಬರಾವ್‌ಗೆ ನೌಕರರ ಪ್ರಶ್ನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇದರಲ್ಲಿ ನೌಕರರ ಒಕ್ಕೂಟ ಮತ್ತು ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಈ ಎರಡೂ ಪ್ರಮುಖ ಪಾತ್ರವಹಿಸುತ್ತಿವೆ. ಆದರೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಮಾತ್ರ ಸರಿ ಸುಮಾರು 5 ವರ್ಷಗಳು ಕಳೆದರೂ ಸಿಕ್ಕಿಲ್ಲ ಎಂಬುವುದು ತುಂಬಾ ನೋವಿನ ಸಂಗತಿ.

ಈ ನಡುವೆ ಸಿಎಂ ಅಧ್ಯಕ್ಷತೆಯಲ್ಲಿ ಹಾಗೂ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಅಲ್ಲದೆ ಎಂಡಿಗಳ ಅಧ್ಯಕ್ಷತೆಯಲ್ಲಿಯೂ ಹಲವಾರು ಸಭೆಗಳು ನಡೆದರೂ ಕೂಡ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವ ಬಗ್ಗೆ ಮುಂದೂಡಿಕೊಂಡೆ ಬರಲಾಗುತ್ತಿದೆ. ಇದರಿಂದ ಈಗಾಗಲೇ ಸಮಸ್ತ ಸಾರಿಗೆ ನೌಕರರು (ಅಧಿಕಾರಿಗಳನ್ನು ಒಳಗೊಂಡಂತೆ) ಭಾರಿ ಅಸಮಾಧಾನಗೊಂಡಿದ್ದಾರೆ.
ಇನ್ನು ಮೊನ್ನೆ ಅಂದರೆ ಇದೇ ಡಿಸೆಂಬರ್ 13ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯೂ ಕೂಡ ವಿಫಲವಾಗಿದೆ. ಇದರಿಂದ ನೌಕರರು ಕೊತಕೊತ ಕುದಿಉತ್ತಿದ್ದು, ನೌಕರರ ಒಕ್ಕೂಟ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ನಾವು ಬರಿ ಒಕ್ಕೂಟದಿಂದ ಹೋರಾಟ ಮಾಡಿದರೆ ಸರ್ಕಾರ ಮಣಿಯುವಂತೆ ಕಾಣುತ್ತಿಲ್ಲ, ಹೀಗಾಗಿ ನಾವೇ ನೌಕರರ ಹಿತ ದೃಷ್ಟಿಯಿಂದ ಒಮ್ಮೆ ಸೋತರು ಪರವಾಗಿಲ್ಲ ಜಂಟಿ ಕ್ರಿಯಾ ಸಮಿತಿಯವರ ನೇತೃತ್ವದಲ್ಲೇ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸೋಣ ಎಂದು ಒಂದು ಹೆಜ್ಜೆ ಮುಂದಿಟ್ಟು ನಿನ್ನೆ ಅಂದರೆ ಡಿ.15ರಂದು ಒಗ್ಗಟ್ಟಾಗಿ ಹೋಗೋಣ ಎಂಬ ಆಹ್ವಾನವನ್ನು ನೀಡಿದೆ.
ಆದರೆ, ಈ ಜಂಟಿ ಕ್ರಿಯಾ ಸಮಿತಿಯ ಹಿರಿಯರು ಆಗಿರುವ ಅನಂತ ಸುಬ್ಬರಾವ್ ಅವರು ಯೂಟ್ಯೂಬ್ ಜಾಲತಾಣ ನಿಗಮ ಟಿವಿ ಚ್ಯಾನಲ್‌ನಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಮೊದಲು ಚಂದ್ರು ಕೆಲಸಗಾರರ ಕ್ಷಮೆ ಕೇಳಲಿ ಅಮೇಲೆ ನಮ್ಮ ಬಳಿ ಬರಲಿ ಎಂದು. ಈ ಹೇಳಿಕೆ ನೀಡಿರುವುದು ನೌಕರರಲ್ಲಿ ಅನುಮಾನ ಹುಟ್ಟುಹಾಕಿದೆ. ಈಗ ಚಂದ್ರು ಅವರೆ ಒಂದು ಹೆಜ್ಜೆ ಮುಂದೆ ಬಂದು ನಿಮ್ಮ ನೇತೃತ್ವದಲ್ಲೇ ಸರ್ಕಾರದ ಬಳಿಗೆ ಹೋಗೋಣ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸೋಣ ಎಂದು ಆಹ್ವಾನ ಕೊಟ್ಟ ಮೇಲೂ ಇದೇನಿದು ಹೊಸ ವರಸೆ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಇನ್ನು ವಿಧಾನಸಭೆಯ ಚುನಾವಣಾ ಪೂರ್ವದಲ್ಲಿ ಒಂದು ರಾಷ್ಟ್ರೀಯ ಪಕ್ಷವೇ ತನ್ನ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವ ಬಗ್ಗೆ ಹಾಕಿದೆ. ಬಳಿಕ ಅದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಅಂದರೆ ಈಗ ಈ ಸರ್ಕಾರವನ್ನು ನೀವು ಕೊಟ್ಟ ಭರವಸೆಯಂತೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡಿ ಎಂದು ಏಕೆ ಕೇಳುತ್ತಿಲ್ಲ ಎಂದು ನೌಕರರು ನಿಮ್ಮನ್ನು ಕೇಳುತ್ತಿದ್ದಾರೆ. ಇದಕ್ಕೆ ಸಮಂಜಸವಾದ ಉತ್ತರ ಕೊಡುವ ಜವಾಬ್ದಾರಿ ಈಗ ನಿಮ್ಮದಾಗಿದೆ.
ಇಲ್ಲಿ ಚಂದ್ರು ಕೆಲಸಗಾರರ ಬಳಿ ಏಕೆ ಕ್ಷಮೆ ಕೇಳಬೇಕು. ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳಿ ಈ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ನೌಕರರ ಮೇಲಿನ ದೌರ್ಜನ್ಯಕ್ಕೆ ಕೊನೆ ಮೊಳೆ ಹೊಡೆಯಬೇಕು ಎಂದು ಪ್ರಯತ್ನಿಸುತ್ತಿರುವುದಕ್ಕೆ ಕ್ಷಮೆ ಕೇಳಬೇಕಾ? ಇದು ಯಾವನ್ಯಾಯಸ್ವಾಮಿ ಅನಂತ ಸುಬ್ಬರಾವ್ ಅವರೆ?
ನೋಡಿ ನೀವೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುತ್ತಿರುವವರಿಗೆ ಸರಿ ಸಮಾನ ವೇತನ ಕೊಡಬೇಕು ಎಂದು ಪ್ರತಿಭಟನೆ ಮಾಡುತ್ತೀರ. ಆದರೆ ಇಲ್ಲಿ ಸಾರಿಗೆ ನೌಕರರಿಗೆ ಕೊಟ್ಟ ಭರವಸೆಯಂತೆ ಸರಿ ಸಮಾನ ವೇತನಕೊಡಿ ಎಂದು ಸರ್ಕಾರವನ್ನು ಕೇಳಲು ಆಗುವುದಿಲ್ಲ ಎಂದು ಹೇಳುತ್ತೀರ. ಏಕೆ ಈ ಡಬಲ್‌ಸ್ಟ್ಯಾಂಡ್ ಅನಂತ ಸುಬ್ಬರಾವ್ ಅವರೇ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಇನ್ನು ಇದೆಲ್ಲವನ್ನು ಬಿಟ್ಟು ಹಿರಿಯರು, ಹೋರಾಟದ ಮುಸ್ಸದ್ದಿಗಳು ಆಗಿರುವ ತಾವು ಇನ್ನಾದರೂ ನಮ್ಮ ನೌಕರರ ಮನದಾಳವನ್ನು ಅರ್ಥಮಾಡಿಕೊಂಡು ನೌಕರರ ಒಕ್ಕೂಟ ಏನು ನಿಮಗೆ ಆಹ್ವಾನ ನೀಡಿದೆಯೋ ಆ ಬಗ್ಗೆ ಕುಳಿತು ಚರ್ಚೆ ಮಾಡಿ ನೌಕರರಿಗೆ ಒಳ್ಳೇದಾಗುವ ನಿಟ್ಟಿನಲ್ಲಿ ಹೋರಾಟ ರೂಪಿಸಿಕೊಂಡು ಸರ್ಕಾರದ ಮುಂದೆ ಒಗ್ಗಾಟಾಗಿ ಬರಬೇಕು ಎಂಬುವುದೇ ನಮ್ಮ ಮನವಿ ಎಂದು ನೌಕರರು ವಿನಂತಿಸಿಕೊಂಡಿದ್ದಾರೆ.
ಹೌದು! ಸಾರಿಗೆ ನಿಗಮಗಳ ಅಧಿಕಾರಿಗಳು ಹಾಗೂ ಸೂಪರ್‌ವೈಸರ್‌ಗಳು ಸಿಬ್ಬಂದಿಗಳ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲ ಸಂಘಟನೆಗಳ ಪದಾಧಿಕಾರಿಗಳೂ ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒಪ್ಪಿಕೊಂಡಿವೆ. ಆದರೆ ತಾವು ಮಾತ್ರ ಅಡ್ಡಗೋಡೆಮೇಲೆ ದೀಪವಿಟ್ಟಂತೆ ಹೇಳಿಕೆ ಕೊಟ್ಟಿದ್ದೀರಿ. ಹೋಗಲಿ ಈಗಲೂ ಈ ಎಲ್ಲವನ್ನು ಬಿಟ್ಟು ನಮ್ಮ ಒಳಿತಿಗೆ ಒಂದಾಗಿ ಎಂದು ನೌಕರರು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಇನ್ನು ನೌಕರರ ಈ ಮನದಾಳವನ್ನು ಅರ್ಥಮಾಡಿಕೊಂಡು ಅನಂತ ಸುಬ್ಬರಾವ್ ಅವರು ಒಗ್ಗಟ್ಟಾಗಿ ಹೋರಾಟಕ್ಕೆ ಹೋಗುವುದಕ್ಕೆ ಒಪ್ಪುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಈ ನಡುವೆ ಒಬ್ಬ ನಿರ್ವಾಹಕನ ಮೇಲೆ ಡಿಪೋ 9ರಲ್ಲಿ ಚಂದ್ರ ಹೋಗಿ ಹಲ್ಲೆ ಮಾಡಿದ್ದಾನೆ ಎಂದು ಹೇಳಿಕೆ ಕೊಟಟ್ಟಿದ್ದೀರಿ, ಇಲ್ಲಿ ಒಬ್ಬ ವಿವಾಹಿತ ಹೆಣ್ಣು ಮಗಳಿಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಅದೂ ಕೂಡ ಇದೆಲ್ಲ ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟು ಪೊಲೀಸ್ ಕೇಸ್ ಕೂಡ ಆದಮೇಲೂ ಈ ರೀತಿ ಮತ್ತೆ ಮತ್ತೆ ಆ ಹೆಣ್ಣುಮಗಳ ಗೌರವಕ್ಕೆ ಧಕ್ಕೆ ಆಗುವರೀತಿ ನಡೆದುಕೊಂಡರೆ ಏನು ಮಾಡಬೇಕು? ಇದೇ ರೀತಿ ನಿಮ್ಮ ಮನೆ ಹೆಣ್ಣು ಮಗಳ ಬಗ್ಗೆ ನಡದುಕೊಂಡರೆ ತಾವೇನು ಮಾಡುತ್ತೀರಾ? ಇರಲಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡೋಣ ಈಗ ತಾವು ಇಂಥ ವಿಷಯಗಳನ್ನು ಬಿಟ್ಟು ನಮಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿ…
Related









