NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯ ಬಾಕಿ ಹಣ 4,006.47 ಕೋಟಿ ರೂ.ಗಳಲ್ಲಿ 441 ಕೋಟಿ ರೂ. ಸರ್ಕಾರದಿಂದ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಸುಭದ್ರ ಮಾಡಿಕೊಳ್ಳಲು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಗೃಹಲಕ್ಷ್ಮಿ ಯೋಜನೆಯ ಇದೇ 2025ರ ಫೆಬ್ರವರಿ ಮತ್ತು ಮಾರ್ಚ್‌ನ ಎರಡು ತಿಂಗಳುಗಳ ಹಣವನ್ನು ಬಾಕಿ ಉಳಿಸಿಕೊಂಡಿರುವ ಸರ್ಕಾರ, ಶಕ್ತಿ ಯೋಜನೆಯ 4 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನೂ ಬಾಕಿ ಉಳಿಸಿಕೊಂಡಿದ್ದು ಈ ಬಗ್ಗೆ ದಾಖಲೆ ಸಮೇತ ಬೆಳಕಿಗೆ ಬಂದಿದೆ.

ಹೌದು! ಕಳೆದ ಎರಡೂವರೆ ವರ್ಷಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಾಹಾನಗರ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈ 4 ಸಾರಿಗೆ ನಿಗಮಗಳಿಂದ ಬರೋಬ್ಬರಿ 4,006.47 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಈ ಎರಡೂವರೆ ವರ್ಷದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಸಾರಿಗೆ ನಿಗಮಗಳಿಗೆ ಸರ್ಕಾರ ಒಟ್ಟು 4,006.47 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ವಿಜಯಪಥ ಮಾಡಿದ್ದ ಸಮಗ್ರ ವರದಿಯ ಬೆನ್ನಲ್ಲೇ ಶಕ್ತಿ ಯೋಜನೆಗೆ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.

ನಾಲ್ಕೂ ಸಾರಿಗೆ ನಿಗಮಗಳಿಗೂ ಒಟ್ಟಾರೆ 441 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ನಿಗಮಕ್ಕೆ 171.41 ಕೋಟಿ ರೂ., ಬಿಎಂಟಿಸಿ ನಿಗಮಕ್ಕೆ 75.65 ಕೋಟಿ ರೂ., ಕೆಕೆಆರ್‌ಟಿಸಿ ಸಂಸ್ಥೆಗೆ 86.92 ಕೋಟಿ ರೂ. ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮಕ್ಕೆ 107.67 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಇನ್ನು ಇತ್ತ 2023ರ ಜೂನ್ ತಿಂಗಳಿಂದ ಆರಂಭವಾದ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಹಾಕಿದ್ದು 2023ರ ಆಗಸ್ಟ್‌ನಲ್ಲಿ ಒಟ್ಟು 3 ತಿಂಗಳು ಖಾತೆಗೆ ಹಣ ಹಾಕಿತ್ತು. 2024ರಲ್ಲಿ ಪೂರ್ತಿ 12 ತಿಂಗಳು ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆ ಆಗಿದೆ. ಆದರೆ 2025ರಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆರ್ಥಿಕ ವಿಘ್ನ ಎದುರಾಗಿದ್ದು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣವನ್ನು ಹಾಕದೆ 2025ರ ಏಪ್ರಿಲ್‌ನಿಂದ 2025ರ ಆಗಸ್ಟ್‌ವರೆಗೆ ಹಣ ಹಾಕಲಾಗಿದೆ.

ಈ ಬಗ್ಗೆ ಡಿ.8ರಿಂದ ಡಿ.19ರವರೆಗೂ ಅಂದರೆ ನಿನ್ನೆವರೆಗೂ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳು ಎಲ್ಲವನ್ನು ಬಹಿರಂಗ ಪಡಿಸಿದ್ದರಿಂದ ಇದು ಬೆಳಕಿಗೆ ಬಂದಿದ್ದು, ಸದ್ಯ ಅದನ್ನು ಇದೇ ಡಿಸೆಂಬರ್‌ ತಿಂಗಳಿನಲ್ಲಿ ಹಾಕುವ ಮೂಲಕ 2026ರ ಜನವರಿಗೆ ಗೃಹಲಕ್ಷ್ಮಿಯರ ಮೊಗದಲ್ಲಿ ಮಂಹಾಸ ಮೂಡಿಸಲಾಗುವುದು ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್‌ಕರ್‌ ತಿಳಿಸಿದ್ದಾರೆ.

ಇನ್ನು ಶಕ್ತಿ ಯೋಜನೆಯಡಿ ಸರ್ಕಾರ ಕೊಡಬೇಕಿರುವ ಬಾಕಿ ಹಣ ಎಷ್ಟು?: * 2023-2024 ರ ವರ್ಷದಲ್ಲಿ- ಕೆಎಸ್‌ಆರ್‌ಟಿಸಿ – 452.62 ಕೋಟಿ ರೂ., ಬಿಎಂಟಿಸಿ – 205.43. ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ನಿಗಮ – 283.91 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – 238.66 ಕೋಟಿ ರೂ. ಅಂದರೆ ಒಟ್ಟು ಹಣ ಬಾಕಿ ಉಳಿಸಿಕೊಂಡಿರುವುದು- 1,180.62 ಕೋಟಿ ರೂಪಾಯಿಗಳು.

ಅದರಂತೆ 2024-2025ನೇ ಸಾಲಿನಲ್ಲಿ ಕೆಎಸ್‌ಆರ್‌ಟಿಸಿಗೆ -495.80 ಕೋಟಿ ರೂ., ಬಿಎಂಟಿಸಿಗೆ- 194.78 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ – 275.55 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗೆ – 204.32 ಕೋಟಿ ರೂ. ಕೊಡಬೇಕಿದೆ. ಹೌಉ ಒಟ್ಟಾರೆ– 1,170.45 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ರಾಜ್ಯ ಸರ್ಕಾರ.

ಇನ್ನು ಪ್ರಸ್ತುತ ಆರ್ಥಿಕ ವರ್ಷ ಅಂದರೆ 2025-26(ನವೆಂಬರ್ ಅಂತ್ಯಕ್ಕೆ) ಕೆಎಸ್‌ಆರ್‌ಟಿಸಿಗೆ – 631.73 ಕೋಟಿ ರೂ., ಬಿಎಂಟಿಸಿಗೆ – 310.6 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ -428.64 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ – 284.43 ಕೋಟಿ ರೂ. ಬಾಕಿ ಕೊಡಬೇಕಿದೆ. ಅಂದರೆ ಒಟ್ಟಾರೆ -1,655.40 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದೆ.

ಈ ಎಲ್ಲವನ್ನು ಅಂದರೆ ಕಳೆದ 2.5 ವರ್ಷಗಳಲ್ಲಿ 4 ನಿಗಮಗಳಿಂದ ಸರ್ಕಾರ ಉಳಿಸಿಕೊಂಡ ಒಟ್ಟು ಬಾಕಿ ಹಣ ಕೆಎಸ್‌ಆರ್‌ಟಿಸಿಗೆ ಕೊಡಬೇಕಿರುವುದು – 1580.15 ಕೋಟಿ ರೂ., ಬಿಎಂಟಿಸಿಗೆ ಕೊಡದೆ ಉಳಿಸಿಕೊಂಡಿರುವುದು – 710.81 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗೆ – 988.1 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ – 727.41 ಕೋಟಿ ರೂಪಾಯಿ ಕೊಡಬೇಕಿದ್ದು ಎಲ್ಲ ನಾಲ್ಕೂ ನಿಗಮಗಳಿಗೆ ಒಟ್ಟು – 4,006.47 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಸದ್ಯಕ್ಕೆ 441ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

Megha
the authorMegha

Leave a Reply

error: Content is protected !!