NWKRTC ಹಾವೇರಿ: ದುಷ್ಟ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಡಿದ ಚಲಿಸುತ್ತಿದ್ದ ಬಸ್ ಟೈರ್- ನಿರ್ವಾಹಕನ ಕಾಲಿನ ಮೂಳೆಗಳು ಪುಡಿಪುಡಿ

ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಹಿಂದಿನ ಎಡಗಡೆ ಟೈರ್ ಬಸ್ಟಾಗಿ ಸಂಸ್ಥೆಯ ನಿರ್ವಾಹಕನ ಕಾಲಿನ ಮೂಳೆಗಳೆಲ್ಲ ಪುಡಿಪುಡಿಯಾಗಿರುವ ಘಟನೆ ನಡೆದಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಗಿರುವ ಘಟನೆಯಾಗಿದೆ.

ಶನಿವಾರ ಇದೇ ಡಿ.27 ರಂದು ಬ್ಯಾಡಗಿ -ಹುಬ್ಬಳ್ಳಿ -ಬೆಂಗಳೂರು ಮಾರ್ಗಾಚಣೆ ಮಾಡುತ್ತಿದ್ದ KA27 F724 ಹಾವೇರಿ ವಿಭಾಗ ಬ್ಯಾಡಗಿ ಘಟಕದ ಬಸ್ ಶಿಗ್ಗವಿ ಬಳಿ ಬರುತ್ತಿದ್ದಂತೆ ಬಸ್‌ನ ಹಿಂಬದಿ ಎಡಗಡೆ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಆ ಸ್ಥಳದಲ್ಲೇ ಇದ್ದ ನಿರ್ವಾಹ ಜೇಸು ಎಂಬುವರ ಕಾಲಿನ ಮೂಳೆಗಳೆಲ್ಲ ಪುಡಿಪುಡಿಯಾಗಿವೆ.
ಅದು ಎಷ್ಟರ ಮಟ್ಟಿಗೆ ಪುಡಿಪುಡಿಯಾಗಿವೇ ಎಂಬುದನ್ನು Xರೇಯಿಂದ ತಿಳಿಯಬಹುದಾಗಿದ್ದು ಅದನ್ನು ನೋಡಿಸಿದ ಭಯವಾಗದೆ ಇರದು ಅಷ್ಟರ ಮಟ್ಟಿಗೆ ಕಾಲಿನ ಮೂಳಿಗಳು ಹಾನಿಗೊಳಗಾಗಿದ್ದು ನಿರ್ವಾಹಕ ನಡೆಯುವುದಕ್ಕೆ ಸಾಧ್ಯವಿಲ್ಲ ಪರಿಸ್ಥಿತಿಯಲ್ಲಿದ್ದಾರೆ.
ಇನ್ನು ಈ ರೀತಿ ಎಕ್ಸ್ ಪ್ರೆಸ್ ಬಸ್‌ಗಳಿಗೂ ರಿಬೋಲ್ಡ್ ಟೈರ್‌ಗಳನ್ನು ಬಳಸುತ್ತಿರುವುದೇ ಇದಕ್ಕೆಲ್ಲ ಕಾರಣ. ಹಾವೇರಿ ವಿಭಾಗದಲ್ಲಿ ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಆದರೂ ಘಟಕ ವ್ಯವಸ್ಥಾಪಕ ಜಿ.ಬಿ. ಅಡರಕಟ್ಟಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಎಚ್ಚೆತ್ತುಕೊಂಡಿಲ್ಲ.
ಅಲ್ಲದೆ ಡಿಸಿ ವಿಜಯಕುಮಾರ್ ಅವರಿಗೆ ಈ ರೀತಿ ಅನಾಹುತಗಳು ಸಂಭವಿಸುತ್ತಿವೆ ಅವುಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಿ ಎಂದು ಅನೇಕಬಾರಿ ಲಿಖಿತಗಾಗಿ ಹಾಗೂ ಮೌಖಿಕವಾಗಿ ಮನವಿ ಮಾಡಿದರೂ ಅವರು ನೌಕರರ ಮತ್ತು ನೌಕರರ ಮುಖಂಡರ ಮನವಿಯನ್ನು ಆಲಿಸುವ ವ್ಯಾವಧಾನವನ್ನೇ ತೋರಿಸುತ್ತಿಲ್ಲ. ಇದೇ ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಯ ಈ ವರ್ತನೆಗೆ ನೌಕರರು ಬೇಸತ್ತುಹೋಗಿದ್ದಾರೆ. ಇದು ನಮ್ಮ ಜೀವಕ್ಕೆ ಭದ್ರತೆ ಇಲ್ಲದ ಕರ್ತವ್ಯವಾಗಿದೆ, ಹಾಗಾಗಿ ಜೀವವನ್ನೇ ಕೈಯಲ್ಲಿ ಹಿಡಿದು ಕರ್ತವ್ಯ ಮಾಡುವಂತಾಗಿದೆ. ಇಂತಹ ಅವಘಡಗಳಿಗೆ ಕಾರಣರಾಗಿರುವರನ್ನು ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಅಮಾನತು ಮಾಡಬೇಕು ಎಂದು ನೌಕರರ ಮತ್ತು ನೌಕರರ ಮುಖಂಡರು ಒತ್ತಾಯಿಸಿದ್ದಾರೆ.
Related









