KSRTC: 6ತಿಂಗಳಲ್ಲೇ ಭ್ರಷ್ಟ ಓಂಕಾರಪ್ಪನಿಗೆ ಎರಡೆರಡು ಬಾರಿ ವರ್ಗಾವಣೆ- ಪ್ರಾಮಾಣಿಕ ನೌಕರರ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಕಿಡಿ

- ಸುಳ್ಳರು ಭ್ರಷ್ಟರ ಪ್ರೋತ್ಸಾಹಿಸುವ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಕೂಟದ ಪದಾಧಿಕಾರಿಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾದಲ್ಲಿ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಫರೇಟರ್ ಆಗಿರುವ ಎಸ್.ಓಂಕಾರಪ್ಪ ಮತ್ತು ಸಹಚರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಲೇಟರ್ ಹೇಡ್ ನಕಲು ಮಾಡಿ ಕೂಟದ ಹೆಸರನ್ನು ದುರ್ಬಳಕೆ ಮತ್ತು ನಕಲಿ ಸಹಿ ಮಾಡಿ ಕೂಟದ ಪದಾಧಿಕಾರಿಗಳು ಸಾರಿಗೆ ಮುಷ್ಕರಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ ನೌಕರರ ದಾರಿ ತಪ್ಪಿಸಿದ್ದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಈತನ ವಿರುದ್ಧ KSRTC ಸಂಸ್ಥೆಗೆ ಸಂಸ್ಥೆಯ ನಿಯಮಾವಳಿಗಳಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು ಈ ದೂರಿನ ಆಧಾರ ಮೇರೆಗೆ ದಾವಣಗೆರೆ ವಿಭಾಗದಿಂದ ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ಎರವಲು ಸೇವೆ ಮೇಲೆ ನಿಯೋಜನೆ ಮಾಡಿದ್ದನ್ನು ವಾಪಸ್ ಪಡೆದು ಮತ್ತೆ ದಾವಣಗೆರೆ ವಿಭಾಗಕ್ಕೆ ಕಳುಹಿಸಲಾಗಿತ್ತು.
2025ರ ಆಗಸ್ಟ್ ತಿಂಗಳಿನಲ್ಲಿ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಮತ್ತೆ ದಾವಣಗೆರೆಯಿಂದ ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಇದು ಸಂಸ್ಥೆಯ ನಿಯಮವಳಿಗೆ ವಿರುದ್ಧವಾಗಿದೆ. ಕಾರಣ ಈತನಿಗಿಂತ ಸೇವಾ ಹಿರಿತನದಲ್ಲಿರುವ ಅದೆಷ್ಟೋ ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೇ ಕಾಯುತ್ತಿದ್ದರು ಅಂಥವರ ವರ್ಗಾವಣೆ ಅರ್ಜಿಯನ್ನು ಪುರಷ್ಕರಸದೆ ಈತನನ್ನು ಮತ್ತೆ ಮೂರೇ ತಿಂಗಳಿಗೆ ಇವನಿಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಅಲ್ಲದೆ ಈತನನ್ನು ಬೆಂಗಳೂರು ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಿರುವುದನ್ನು ವಾಪಸ್ ತೆಗೆದುಕೊಂಡು ಸಂಸ್ಥೆಯ ನಿಯಮಾವಳಿಯಂತೆ ಸೇವಾ ಹಿರಿತನದ ಮೇಲೆ ವರ್ಗಾವಣೆಗೆ ಕೋರಿ ಅರ್ಜಿ ಹಾಕಿರುವವರಿಗೆ ಆಧ್ಯತೆ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಸ್.ಓಂಕಾರಪ್ಪ ವಿರುದ್ಧ ಎಫ್‌ಐಆರ್ ದಾಖಲು: 05.08.2025 ರಂದು ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಸಾರಿಗೆ ಮುಷ್ಕರಕ್ಕೆ ಓಂಕಾರಪ್ಪ ಮತ್ತು ಸಹಚರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಲೇಟರ್ ಹೇಡ್ ನಕಲು ಮಾಡಿ ಕೂಟದ ಹೆಸರನ್ನು ದುರ್ಬಳಕೆ ಮತ್ತು ನಕಲಿ ಸಹಿ ಮಾಡಿ ಬೆಂಬಲ ಘೋಷಣೆ ಮಾಡಿರುವುದಾಗಿ ಘೋಷಿಸಿದರು. ಇವರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಸಂಖ್ಯೆ:152/2025 ದೂರು ದಾಖಲಿಸಲಾಗಿದೆ. ಅಲ್ಲದೆ ಈ ನಕಲಿ ಸಹಿ ಮಾಡಿ ಒಂದು ಯೂನಿಯನ್‌ನ ಲೆಟರ್ ಹೆಡ್ ನಕಲಿ ಮಾಡಿರುವ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸ್ಥೆಗೆ ದೂರು ನೀಡಲಾಗಿದೆ.
ಎಸ್. ಓಂಕಾರಪ್ಪ ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ತಮ್ಮ ಹಣ ಮತ್ತು ಅಧಿಕಾರ ಬಲ ಬಳಸಿಕೊಂಡು ಸರ್ಕಾರದ ಸಾರಿಗೆ ಇಲಾಖೆಗೆ ಎರವಲು ಸೇವೆಗೆ ನಿಯೋಜನೆ ಮಾಡಿಕೊಂಡು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದರು. ಈ ನಡುವೆ 05.08.2025 ರಂದು ಕಾರ್ಮಿಕ ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ಇವರು ಮತ್ತು ಇವರ ಸಹಚರರು ಕೂಟದ ಲೇಟರ್ ಹೇಡ್ ಅನ್ನು ನಕಲು ಮಾಡಿ, ಕೂಟದ ಹೆಸರನ್ನು ದುರ್ಬಳಕೆ ಮತ್ತು ನಕಲಿ ಸಹಿ ಮಾಡಿ 01.08.2025 ರಂದು ನಡೆದ ಸಾರಿಗೆ ಮುಷ್ಕರಕ್ಕೆ ಬೆಂಬಲ ಘೋಷಣೆ ಮಾಡಿದ ಲೇಟರ್ ಹೇಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ತಕ್ಷಣ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಇವರನ್ನು ಮಾತೃ ವಿಭಾಗಕ್ಕೆವಾದ ದಾವಣಗೆರೆಗೆ ಆಗಸ್ಟ್ ತಿಂಗಳಲ್ಲಿ ವರ್ಗಾವಣೆ ಮಾಡಿತ್ತು.
ಸಾರಿಗೆ ನೌಕರರ ಕೂಟ ದ ಲೇಟರ್ ಹೇಡ್ ಅನ್ನು ನಕಲು ಮಾಡಿ, ಕೂಟದ ಹೆಸರನ್ನು ದುರ್ಬಳಕೆ ಮತ್ತು ನಕಲಿ ಸಹಿ ಮಾಡಿದ್ದ ವಿರುದ್ಧ ಈತ ಸೇರಿದಂತೆ ಈತನ ಸಹಚರರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 10.11.2025 ರಂದು ಎಫ್.ಐ.ಆರ್ ಸಂಖ್ಯೆ:152/2025 ದೂರು ದಾಖಲಿಸಿ ಸಂಸ್ಥೆಗೆ ಇವರ ವಿರುದ್ಧ ಸಂಸ್ಥೆಯ ನಿಯಮಾವಳಿಗಳಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರು (ಸಿಬ್ಬಂದಿ & ಜಾಗೃತ) ಆಧಿಕಾರಿಗಳಿಗೆ ದೂರು ನೀಡಿಲಾಗಿದೆ. ಈ ದೂರುಗಳು ತನಿಖೆ ಹಂತಗಳಲ್ಲಿ ಇವೆ.
ಈ ನಡುವೆ ದಾವಣಗೆರೆ ವಿಭಾಗಕ್ಕೆ ವರ್ಗಾವಣೆಗೊಂಡ ಎಸ್. ಓಂಕಾರಪ್ಪನನ್ನು ಆಗಸ್ಟ್ ತಿಂಗಳಿನಲ್ಲಿ ವರ್ಗಾವಣೆ ಮಾಡಲಾಗಿತ್ತು. ಈತ ನವೆಂಬರ್ ವರೆಗೆ ಅಲ್ಲಿ ಕರ್ತವ್ಯ ನಿರ್ವಹಿಸಿರುವುದು ಕೇವಲ 18 ದಿನಗಳು ಮಾತ್ರ ( ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿರುವ ಮಾಹಿತಿ ಪ್ರಕಾರ ಹಾಜರಾತಿ ದಾಖಲೆ ಆಗಸ್ಟ್ ನಿಂದ ನವೆಂಬರ್ ವರೆಗೂ 122 ದಿನಗಳಿಗೆ ಗೈರು ಹಾಜರಿ 96 ದಿನಗಳು ಅಧಿಕೃತವಾಗಿ ರಜೆ ಪಡೆದಿರುವುದು 08 ದಿನಗಳು, ಕರ್ತವ್ಯ ನಿರ್ವಾಹಿಸಿರುವುದು ಕೇವಲ 18 ದಿನಗಳು) ಗೈರು ಹಾಜರಿ ಪ್ರಕರಣವು ಸಹ ದಾವಣಗೆರೆ ವಿಭಾಗದಲ್ಲಿ ವಿಚಾರಣಾ ಹಂತದಲ್ಲಿ ಇದೆ. ಅಲ್ಲದೆ ಇಷ್ಟೊಂದು ಆರೋಪಗಳು ತನಿಖಾ ಹಾಗೂ ವಿಚಾರಣ ಹಂತದಲ್ಲಿರುವ ಆರೋಪಿಯನ್ನು ಏಕಾಏಕಿ ಮತ್ತೆ 26.12.2025 ರಂದು ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಿಂದ ಕೂಡಲೇ ಬೆಂಗಳೂರಿನ ಕೇಂದ್ರೀಯ ವಿಭಾಗಕ್ಕೆ ವರ್ಗಾವಣೆ ನೀಡಿರುವ ಆದೇಶ ನೋಡಿ ನಮಗೆ ಅಚ್ಚರಿಯಾಯಿತು.
ಪ್ರಾಮಾಣಿಕವಾಗಿ ಮತ್ತು ಗೈರು ಹಾಜರಿಯಿಲ್ಲದೆ ದುಡಿಯುತ್ತಿರುವ ಸಾವಿರಾರು ನೌಕರರು ಹಲವು ವರ್ಷಗಳಿಂದ ತಮ್ಮ ಕುಟುಂಬ ಮತ್ತು ಬಂಧು ಬಳಗ ಬಿಟ್ಟು ದೂರ ದೂರದ ಸ್ಥಳಗಳಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದು, ಅಂಥ ನೌಕರರು ತಮ್ಮ ವಯಸ್ಸಾದ, ಅನಾರೋಗ್ಯ ಮತ್ತು ಅಂಗವಿಕಲ ತಂದೆ ತಾಯಿ, ಹೆಂಡತಿ, ಮಕ್ಕಳು ಹಾಗೂ ಅವರ ಅವಲಂಬಿತರೊಂದಿಗೆ ಬಂದು ನಿತ್ಯ ಕೇಂದ್ರ ಕಚೇರಿಗೆ ಅದೆಷ್ಟು ಬಾರಿ ಸುತ್ತಾಡತ್ತಾರೋ ದೇವರಿಗೆ ಗೊತ್ತು. ಆದರೂ ಅಂತಹವರನ್ನು ವರ್ಗಾವಣೆ ಮಾಡದ ಅಧಿಕಾರಿಗಳು ಎಸ್. ಓಂಕಾರಪ್ಪ ಅವರನ್ನು ಮಾತ್ರ ಈತನಿಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡುತ್ತಾರೆ ಎಂದರೆ ಏನು ಅರ್ಥ ಎಂದು ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಇನ್ನು 05.08.2025 ರಂದು ನಡೆದ ಸಾರಿಗೆ ಮುಷ್ಕರದ ಕಾರಣ ಮೂರು ನಿಗಮಗಳಲ್ಲಿ ಸುಮಾರು 33 ಸಾವಿರ ನೌಕರರಿಗೆ ನಾನಾ ಕಲಂಗಳ ಅಡಿಯಲ್ಲಿ ಚಾರ್ಜ್ ಶೀಟ್ ನೀಡಿ, ಈ ಸಮಯದಲ್ಲಿ ಅವರಿಗೆ ಸಿಗಬೇಕಾದ ಎಲ್ಲ ಸೇವಾ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಆದರೆ ಓಂಕಾರಪ್ಪ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷರಾಗಿದ್ದು, ಇವರ ಆಡಳಿತದಲ್ಲಿ ಲಕ್ಷಾಂತರ ರೂ.ಗಳ ಭ್ರಷ್ಟಚಾರವಾಗುತ್ತಿದೆ ಎಂದು ಇವರ ವಿರುದ್ಧ ಸಹ ನಿರ್ದೇಶಕರು ಹಾಗೂ ಸದಸ್ಯರು ಸಹಕಾರ ಇಲಾಖೆಗೆ ದೂರುಗಳನ್ನು ಸಲ್ಲಿಸಿದ್ದು, ಆ ದೂರುಗಳು ತನಿಖಾ ಹಂತದಲ್ಲಿ ಇವೆ. ಇಷ್ಟೊಂದು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನಿಗೆ 6 ತಿಂಗಳು ಕಳಿಯುವಷ್ಟರಲ್ಲೇ ಎರಡೆರಡು ಬಾರಿ ವರ್ಗಾವಣೆ ಭಾಗ್ಯ ನೀಡಿರುವುದು ನೋಡಿದರೆ ಇವರು ಕ್ರೆಡಿಡ್ ಸಂಘದಲ್ಲಿ ಮತ್ತಷ್ಟು ಭ್ರಷ್ಟಚಾರ ಮಾಡಲು ಸಂಸ್ಥೆಯ ಕೇಲವು ಆಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಪ್ರೋತ್ಸಾಹ ನೀಡುವುತ್ತಿರುವುದು ತಿಳಿಯುತ್ತದೆ.
ಅಲ್ಲದೆ ಎಸ್. ಓಂಕಾರಪ್ಪ ವಿರುದ್ಧ ಸಂಸ್ಥೆಗೆ ನಾವು ನೀಡಿರುವ ದೂರುಗಳಿಗೂ ನ್ಯಾಯ ಸಿಗುತ್ತದ ಎಂಬ ಅನುಮಾನ ನಮಗೆ ಮೂಡುವುದರ ಜತೆಗೆ ಸಂಸ್ಥೆಯಲ್ಲಿ ಭ್ರಷ್ಟಚಾರ ಯಾವ ಹಂತಕ್ಕೆ ಬೆಳೆದು ನಿಂತಿದೆ ಎಂದು ತಿಳಿಯುತ್ತದೆ. ಆದ್ದರಿಂದ ಈ ಕೂಡಲೇ ಓಂಕಾರಪ್ಪನನ್ನು ಬೆಂಗಳೂರಿನ ಕೇಂದ್ರೀಯ ವಿಭಾಗಕ್ಕೆ ವರ್ಗಾವಣೆ ಮಾಡಿರುವ ಆದೇಶವನ್ನು ರದ್ದು ಮಾಡಿ ಮೂಲ ಸ್ಥಾನಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿ ಹಾಗೂ ಇವರ ಕಾನೂನು ಬಾಹಿರ ಕೃತ್ಯಗಳಿಗೆ ಪ್ರೋತ್ಸಾಹ ನೀಡಿ ಈತ ಭ್ರಷ್ಟಚಾರ ಮಾಡಲು ಮತ್ತಷ್ಟು ಅನುವು ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ಧವೂ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಎಸ್. ಓಂಕಾರಪ್ಪನ ವಿರುದ್ಧ ದಾಖಲಾಗಿರುವ ದೂರುಗಳು ಮತ್ತು ಎಚ್ಚರಿಕೆ ಏನು?
1.ವಿಲ್ಸನ್ ಗಾರ್ಡನ್ ಪೊಲೀಸ್ ರಾಣೆಯ ಎಫ್.ಐ.ಆರ್ ಸಂಖ್ಯೆ:152/2025
2. ಸಾರಿಗೆ ಸಚಿವರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಆಧಿಕಾರಿಗಳಿಗೆ ದೂಎಉ ನೀಡಲಾಗಿದೆ
3. 02/08/2025 ರಂದು ಓಂಕಾರಪ್ಪ ಅವರ ಎರವಲು ಸೇವೆಯನ್ನು ರದ್ದು ಪಡಿಸಿ ಮಾತೃ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು
4. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿರುವ ಹಾಜರಾತಿ ದಾಖಲೆಯೂ ಇದೆ
5. ಈ ನಡುವೆ ಇದೇ ಡಿಸೆಂಬರ್ 26 ರಂದು ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಿಂದ ಕೂಡಲೇ ಬೆಂಗಳೂರಿನ ಕೇಂದ್ರೀಯ ವಿಭಾಗಕ್ಕೆ ವರ್ಗಾವಣೆ ನೀಡಿರುವ ಆದೇಶದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ
Related









