NEWSಬೆಂಗಳೂರು

ನೋಟೀಸ್ ನೀಡಿದ ನಂತರವೂ ಕಂದಾಯ ಪಾವತಿಸದ ಸ್ವತ್ತುಗಳಿಗೆ ಬೀಗ ಹಾಕಿ: ಆಯುಕ್ತ ರಾಜೇಂದ್ರ ಚೋಳನ್ ತಾಕೀತು

ವಿಜಯಪಥ ಸಮಗ್ರ ಸುದ್ದಿ
  • ಸ್ವಯಂ ಟಾಸ್ಕ್ ರೂಪಿಸಿಕೊಂಡು ಅಗತ್ಯ ಕ್ರಿಯಾಯೋಜನೆಯೊಂದಿಗೆ (ಆಕ್ಷನ್ ಪ್ಲಾನ್) ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಇಂಜಿನಿಯರ್‌ಗಳಿಗೆ ಸೂಚನೆ

ಬೆಂಗಳೂರು: ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದ ಸ್ವತ್ತುಗಳ ಪಟ್ಟಿಯನ್ನು ಮಾಡಿ ಅಂತಹ ಸ್ವತ್ತುಗಳಿಗೆ ಬಾಕಿ ಕಂದಾಯ ಪಾವತಿ ಮಾಡಲು ನೋಟಿಸ್ ನೀಡಿ. ನೋಟೀಸ್ ನೀಡಿದ ನಂತರ ಬಾಕಿ ಆಸ್ತಿ ತೆರಿಗೆ ಪಾವತಿ ಮಾಡದಿದ್ದಲ್ಲಿ ಅಂತಹ ಸ್ವತ್ತುಗಳಿಗೆ ಬೀಗ ಹಾಕಿ ಎಂದು ಕಂದಾಯ ವಿಭಾಗದ ಅಧಿಕಾರಿಗಳಿಗೆ ಆಯುಕ್ತ ರಾಜೇಂದ್ರ ಚೋಳನ್ ತಾಕೀತು ಮಾಡಿದರು.

ಇಂದು ಬಿ.ಎಂ.ಆರ್‌.ಡಿ.ಎ ಕಚೇರಿಯಲ್ಲಿ ನಡೆದ ವಿವಿಧ ವಿಭಾಗಗಳ ಇಲಾಖಾ ಮುಖ್ಯಸ್ಥರ ಸಭೆಲ್ಲಿ ಮಾತನಾಡಿದರು. ತಾವೆಲ್ಲರೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಪ್ರತಿ ವಾರ ಹೊಸ ಆಲೋಚನೆಯೊಂದಿಗೆ ಸ್ವಯಂ ಟಾಸ್ಕ್ ರೂಪಿಸಿಕೊಂಡು ಅಗತ್ಯ ಕ್ರಿಯಾಯೋಜನೆಯೊಂದಿಗೆ (ಆಕ್ಷನ್ ಪ್ಲಾನ್) ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.

ಆಯುಕ್ತರ ಸೀಟ್ ನಲ್ಲಿಯೇ ಕೂರಿಸಿ ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ಬೀಳ್ಕೊಡುಗೆ:
ಆಯುಕ್ತರ ನೇತೃತ್ವದಲ್ಲಿ ಡಿಸೆಂಬರ್-2025 ಮಾಹೆಯಲ್ಲಿ ಬೆಂಗಳೂರು ಕೇಂದ್ರ ನಗರಪಾಲಿಕೆಯ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಕಂದಾಯ ವಿಭಾಗದ ಉಪ ಆಯುಕ್ತ ರಾಜು ಅವರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು ನಗರದ ಸ್ವಚ್ಛತೆ ಕಾರ್ಯ ನಿರ್ವಹಿಸುತ್ತಿರುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವೆಂದು ಶ್ಲಾಘಿಸಿ, ಅವರ ನಿವೃತ್ತಿ ಜೀವನ ಸಂತೋಷಮಯವಾಗಿರಲೆಂದು ಶುಭ ಹಾರೈಸಿದರು. ಈ ವೇಳೆ ಪೌರಕಾರ್ಮಿಕರಿಗೆ ಆಯುಕ್ತರು ತಮ್ಮ ಸೀಟ್ ನಲ್ಲಿಯೇ ಕೂರಿಸಿ ಸನ್ಮಾನಿಸಿ ಗೌರವಿಸಿದರು.

ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ಕೆ. ರಂಗನಾಥ್, ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯಕುಮಾರ್ ಹರಿದಾಸ್, ಉಪ ಆಯುಕ್ತರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು ಹಾಜರಿದ್ದರು.

Megha
the authorMegha

Leave a Reply

error: Content is protected !!