NEWSನಮ್ಮಜಿಲ್ಲೆ

ಮಂಡ್ಯ: ಐಪಿಎಸ್‌ ಅಧಿಕಾರಿ ಶೋಭಾರಾಣಿ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವಿ.ಜೆ.ಶೋಭಾರಾಣಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಬಳ್ಳಾರಿಯಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೋಭರಾಣಿ ಅವರು 2016ರ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿ ಮತ್ತು ಹೆಚ್ಚುವರಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಇವರು ಹೊಂದಿದ್ದಾರೆ.

ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್ಪೀ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಜಿಲ್ಲೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ ವರ್ಗಾವಣೆಗೊಳಿಸಿದ್ದರಿಂದ ಆ ಸ್ಥಾನಕ್ಕೆ ಶೋಭಾರಾಣಿ ಅವರನ್ನು ನೇಮಕಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

2016ರ ಐಪಿಎಸ್ ಬ್ಯಾಚ್ ಅಧಿಕಾರಿಯಾದ ಮಲ್ಲಿಕಾರ್ಜುನ ಬಾಲದಂಡಿ ಅವರು ರೌಡಿಸಂ ಕೃತ್ಯಗಳ ನಿಯಂತ್ರಣ, ರೌಡಿಗಳ ಗಡೀಪಾರು, ಅಪರಾಧ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಿಲ್ಲೆಯ ಸಾಮಾನು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2024ರ ಜುಲೈ 3ರಂದು ಮಂಡ್ಯ ಎಸ್ಪಿಯಾಗಿ ವರ್ಗಾವಣೆಗೊಂಡು, ಕಳೆದ ಒಂದೂವರೆ ವರ್ಷದಿಂದ ಇಲಾಖೆಯನ್ನು ‘ಜನಸ್ನೇಹಿ ಪೊಲೀಸ್’ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಇವರಂತೆಯೇ ಶೋಭಾರಾಣಿ ಅವರು ಕೂಡ ಸಾಮಾನ್ಯರೊಂದಿಗೆ ಸ್ನೇಹಮಯವಾಗಿ ಇದ್ದು ಕರ್ತವ್ಯ ನಿರ್ವಹಿಸಲಿ ಎಂದು ಹಾರೈಸೋಣ.

ನೂತನ ಎಸ್ಪೀ ಶೋಭಾರಾಣಿ ಅವರಿಗೆ ಜಿಲ್ಲೆಯ ವಿವಿಧ ಸಂಘಟನೆಗಳು ಶುಭ ಕೋರಿದ್ದು, ಅವರ ಕಾರ್ಯವೈಖರಿ ಮಂಡ್ಯ ಜಿಲ್ಲೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Megha
the authorMegha

Leave a Reply

error: Content is protected !!