KSRTC ನೌಕರರ ವೇತನ ಹೆಚ್ಚಳ ವಿಷಯದಲ್ಲಿ ಕಳ್ಳಾಟವಾಡುತ್ತಿರುವ ಸರ್ಕಾರಕ್ಕೆ 2026ರ ಮಾರ್ಚ್‌ನಲ್ಲಿ ಬಿಸಿ ಮುಟ್ಟಿಸಲು ಸಿದ್ಧವಾಗುತ್ತಿದೆ ಭಾರಿ ಪಡೆಯೊಂದು!

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದು. ಸಿಬ್ಬಂದಿಗೆ 2024ರ ಜನವರಿ 1 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಅಂದು ಅಂದರೆ ಕಳೆದ 2025ರ ಏಪ್ರಿಲ್ 15ರಲ್ಲಿ ಸಾರಿಗೆ ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿ ಎಲ್ಲಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದ್ದರು.
ಇನ್ನು ಬೇಡಿಕೆಗಳ ಈಡೇರಿಕೆಗಾಗಿ ಮತ್ತೊಮ್ಮೆ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸುತ್ತೇನೆ. ಆ ಸಂದರ್ಭದಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಿ ಬೇಡಿಕೆ ಅನುಷ್ಠಾನಕ್ಕೆ ಮುಂದಾಗಲಾಗುವುದು ಎಂದಿದ್ದರು. ಆದರೆ, ಇತ್ತೀಚೆಗೆ ನಡೆದ ಸಭೆಗಳಲ್ಲಿ ಇದೇ ಸಿಎಂ ಉಲ್ಟಾಹೊಡೆದಿದ್ದು ಬಿಜೆಪಿ ಸರ್ಕಾರ ಮಾರ್ಜ್ 2023ರಿಂದ ವೇತನ ಹೆಚ್ಚಳ ಮಾಡಿದೆ ಎಂದು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿದೆ ಎಂದಿದ್ದ ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆಯುತ್ತಿರುವುದು ಏತಕ್ಕೆ? ಕಾರಣ ನೌಕರರ ಸಂಘಟನೆಗಳ ಮುಖಂಡರಿಗೆ ಬೆನ್ನುಮೂಳೆ ಇಲ್ಲ ಇವರಿಂದ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಒಂದು ರೀತಿ ಇವರು ಸಾಕು ನಾ* ಇದ್ದಂತೆ ಎಂದು ಈ ಉದಾಸೀನತೆ ತೋರುತ್ತಿರಬಹುದೇನೋ ಗೊತ್ತಿಲ್ಲ.
ಏಕೆಂದರೆ ಸಾರಿಗೆ ನೌಕರರ ಇಂದಿನ ಬಹುತೇಕ ಮುಖಂಡರು ಸಿಎಂ ಅಂದುಕೊಂಡಿರುವಂತೆಯೇ ಇದ್ದಾರೆ ಎಂದರೆ ತಪ್ಪಾಗಲಾರದು. ಕಾರಣ ಕಳೆದ 2012ರಿಂದ ಇಂದಿನ ವರೆಗೂ ಈ ಮುಖಂಡರೆನಿಸಿಕೊಂಡವರು ನೌಕರರಿಗೆ ಸೌಲಭ್ಯ ಕಲ್ಪಿಸಲು ಹೋರಾಡಿದ್ದು, ಈಗ ಹೋರಾಡುತ್ತಿರುವುದರ ಬಗ್ಗೆ ಪ್ರತಿಯೊಬ್ಬ ನೌಕರನೂ ಗಮನಿಸುತ್ತಿದ್ದಾನೆ.
ಇನ್ನು ಇಂಥ ನ* ಸತ್ತವರು ಸಾರಿಗೆ ನೌಕರರಿಗೆ ಕಾನೂನಾತ್ಮಕವಾಗಿ ಸಿಗಬೇಕಿರುವುದನ್ನು ಸರ್ಕಾರದಿಂದ ಕೊಡಿಸುತ್ತಾರೆ ಎಂಬ ನಂಬಿಕೆಯನ್ನು ಇಟ್ಟುಕೊಳ್ಳುವುದಾದರೂ ಹೇಗೆ? ಇವರಲ್ಲಿ ಈಗ ಯಾವುದೇ ಪವರ್ ಇಲ್ಲ ಜತೆಗೆ ಹೋರಾಟ ಮಾಡುವುದಕ್ಕೆ ಬರಿ ಚಾಲನಾ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಅದು ಕೂಡ ಬೀದಿಯಲ್ಲಿ ನಿಂತು ಆಹ್ವಾನ ಕೊಡುತ್ತಾರೆ. ಅಂದರೆ ಇವರಿಗೆ ಚಾಲನಾ ಸಿಬ್ಬಂದಿಗಳನ್ನು ಬಿಟ್ಟರೆ ಅಧಿಕಾರಿಗಳು ಹೋರಾಟಕ್ಕೆ ಬರುವಂತಿಲ್ಲ. ಕಾರಣ ಈ ಸಂಘಟನೆಗಳು ಫ್ಯಾಕ್ಟರಿ ಆಕ್ಟ್‌ಅಡಿ ಬರುವುದರಿಂದ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ನೌಕರ ವರ್ಗ ಇದಕ್ಕೆ ಎಂಟ್ರಿ ಕೊಡುವಂತಿಲ್ಲ.
ಹೀಗಾಗಿ ಇವರು ಅಧಿಕಾರಿ ವರ್ಗವನ್ನು ಮಾತನಾಡಿಸುವುದಿಲ್ಲ. ಆದರೆ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಡಿಪೋ ಡಿಪೋಗಳ ಬಳಿ ಹೋಗಿ ಬನ್ನಿ ಬನ್ನಿ ಎಂದು ಕರೆದು ಪ್ರಯೋಜನಕ್ಕೆ ಬಾರದ ಎರಡು ಮಾತುಗಳನ್ನಾಡಿ ಬಳಿಕ ನೌಕರರಿಗೂ ನಮಗೂ ಸಂಬಂಧ ಇಲ್ಲ ಎಂಬಂತೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಇನ್ನು ಇತ್ತ ಅಂದರೆ ನಾವು ಮಾತ್ರ ಹೋರಾಟ ಮಾಡಿ ಅಮಾನತು, ವಜಾ, ವರ್ಗಾವಣೆ ಪೊಲೀಸ್ ಕೇಸ್ ಹಾಕಿಸಿಕೊಂಡು ಕೆಲಸವನ್ನು ಕಳೆದುಕೊಳ್ಳಬೇಕು.
ಯಾವುದೇ ಹೋರಾಟಕ್ಕೂ ಇಳಿಯದೇ ನಮ್ಮ ಹೋರಾಟದ ಫಲದಿಂದ ಹೆಚ್ಚಳವಾಗುವ ವೇತನವನ್ನೂ ಪಡೆದು ನಮ್ಮನ್ನು ಶಿಕ್ಷಿಸುವ ಅಧಿಕಾರಿ ವರ್ಗಕ್ಕೆ ನಾವು ಅನುಕೂಲ ಮಾಡಿಕೊಡಲು ಇವರ ಜತೆ ಕೈ ಜೋಡಿಸಬೇಕು. ಇದು ಹೇಗಿದೆ ಎಂದರೆ ನಮ್ಮ ಮನೆ ಕದ (Door) ಕೊಟ್ಟು ರಾತ್ರಿಪೂರ ನಾಯಿ ಕಾದಂತೆ ಎಂಬ ಗಾದೆ ಮಾತಿನಂತಿದೆ. ಹೋರಾಟ ಮಾಡುವವರು ನಾವು ಅದರ ಪ್ರತಿಫಲ ಪಡೆಯುವವರು ಮುಖ್ಯವಾಗಿ ಸಂಸ್ಥೆಯಲ್ಲಿರುವ ಇತರ ಎಲ್ಲ ವರ್ಗದ ನೌಕರರು.ಿವರಿಗೆ ಯಾವದೇ ರೀತಿಯ ಶಿಕ್ಷೆಯೂ ಇಲ್ಲ ಗೈರುಹಾಜರಿಯೂ ಇಲ್ಲ!
ಹೀಗಾಗಿ ನಾವು ಅಧಿಕಾರಿಗಳು ಬರದ ಹೊರತು ಯಾವುದೇ ಕಾರಣಕ್ಕೂ ಹೋರಾಟಕ್ಕೆ ಇಳಿಯುವುದಿಲ್ಲ ಎಂದು ಬಹುತೇಕ ಎಲ್ಲ ನೌಕರರು ಹೇಳುತ್ತಿದ್ದಾರೆ.
ಇನ್ನು ಇದನ್ನು ಗಮನಿಸುತ್ತಿರುವ ಬೆರಳೆಣಿಕೆಯಷ್ಟು ಅಧಿಕಾರಿಗಳ ವರ್ಗವು ಸರಿಯಾದ ವೇತನ ಭತ್ಯೆ ಸಿಗದೆ ನಾವು ಬಳಲುತ್ತಿದ್ದೇವೆ. ಹೀಗಾಗಿ, ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇ ಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಈ ಅಧಿಕಾರಿಗಳು ಕೈ ಜೋಡಿಸಿದರೆ ನೌಕರರ ಕುಟುಂಬ ಸದಸ್ಯರು ಹಾಗೂ ಅಧಿಕಾರಿಗಳ ಕುಟುಂಬ ಸದಸ್ಯರು ಸೇರಿ ಮಾರ್ಜ್ ತಿಂಗಳಿನಿಂದ ರಾಜ್ಯದಲ್ಲಿರುವ ನಾಲ್ಕೂ ಸಾರಿಗೆ ನಿಗಮಗಳ ಎಲ್ಲ ಡಿಪೋಗಳ ಮುಂದೆ ಹಾಗೂ ಬೆಂಗಳೂರಿನ ಕೇಂದ್ರ ಕಚೇರಿ ಮತ್ತು ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನಾ ಧರಣಿ ಮಾಡುವುದಕ್ಕೆ ಸಿದ್ಧರಾಗುತ್ತೇವೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.
ಈ ಸಂಬಂಧ ಈಗಾಗಲೇ ಅಧಿಕಾರಿಗಳು ಹಾಗೂ ನೌಕರರ ಕುಟುಂಬ ಸದಸ್ಯರಲ್ಲಿ ಪ್ರಮುಖವಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಹಲವರು ಗೌಪ್ಯ ಸಭೆಗಳನ್ನು ಮಾಡಿದ್ದು, ಅಲ್ಲಲ್ಲಿ ಚರ್ಚೆಯೂ ಆಗುತ್ತಿದೆ.
ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು 2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಿರುವ ವೇತನ ಹೆಚ್ಚಳದ ಶೆ.15ರಷ್ಟು 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ಮಾಡದಿದ್ದರೆ 2026ರ ಮಾರ್ಚ್‌ನಲ್ಲಿ ಭಾರಿ ಸಮಸ್ಯೆ ಎದುರಿಸಬೇಕಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಇಲ್ಲಿ ಟ್ರೇಡ್ ಯೂನಿಯನ್‌ಗಳನ್ನು ಹೊರಗಿಟ್ಟು ಅಧಿಕಾರಿಗಳ ಹಾಗೂ ನೌಕರರ ಕುಟುಂಬ ಸದಸ್ಯರು ಮೊದಲಿಗೆ ಬಸ್‌ಗಳನ್ನು ನಿಲ್ಲಿಸಲು ಅವಕಾಶವಿಲ್ಲದಂತೆ ಶಾಮತಿಯುತ ಧರಣಿ ನಡೆಸುವುದಕ್ಕೆ ಸಜ್ಜಾಗುತ್ತಿದ್ದಾರೆ ಎಂಬುವುದು ಬಹುತೇಕ ಖಚಿತವಾಗಿದೆ.
Related









