ಚಿಕ್ಕಮಗಳೂರು: ಕುಡಿದ ಅಮಲಿನಲ್ಲಿದ್ದ ತಂದೆ ಮಗನನ್ನೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಆನೆಗುಂಡಿ ಗ್ರಾಮದಲ್ಲಿ ನಿವಾಸಿ ಪ್ರದೀಪ್ ಆಚಾರ್ (29) ತಂದೆಯಿಂದಲೇ ಕೊಲೆಯಾದವರು. ರಮೇಶ್ ಆಚಾರ್ ಎಂಬಾತನೆ ಮಗನನ್ನು ಹತ್ಯೆ ಮಾಡಿದ ಆರೋಪಿ.
ಅಪ್ಪ ಮಗನ ಮಧ್ಯೆ ಕ್ಷುಲಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಅಪ್ಪ ಮಗನ ಮೇಲೆ ಮಾರಕಾಸ್ತ್ರ ಬೀಸಿ ಕೊಲೆ ಮಾಡಿದ್ದಾನೆ.
ಈ ಇಬ್ಬರೂ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಕುಡಿದು ಗಲಾಟೆ ಮಾಡುತ್ತಿದ್ದ ಅಪ್ಪ-ಮಗನ ಕಾಟಕ್ಕೆ ಬೇಸತ್ತು ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ಬಳಿಕ ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು ಎಂದು ತಿಳಿದು ಬಂದಿದೆ.
ಇನ್ನು ನಿನ್ನೆ ರಾತ್ರಿ ಈ ಅಪ್ಪ-ಮಗನ ಮಧ್ಯೆ ಜಗಳವಾಗಿದೆ ಈ ವೇಳೆ ಮಗನನ್ನು ಕಡಿದುಹಾಕಿ ಅಪ್ಪ ಅಲ್ಲೇ ಮಲಗಿದ್ದ. ಮಗ ಪ್ರದೀಪ್ ಇಡೀ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದು ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾನೆ.
ಇಂದು ಬೆಳಗ್ಗೆ ಮಗನ ಮೃತದೇಹವನ್ನು ಇದೇ ಅಪ್ಪ ರಮೇಶ್ ಆಚಾರ್ ಮನೆಯ ಹಾಲ್‌ನಿಂದ ಹೊರಕ್ಕೆ ಎಳೆದು ತಂದಿದ್ದ. ಾದನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Related










