KKRTC ವಿಜಯಪುರ: ನೌಕರರ ವಿರುದ್ಧ ಕೇಸ್ ಬರೆಯಲು ತಾವೇ ಪಾರ್ಸಲ್‌ನಲ್ಲಿ 500 ರೂ. ಇಟ್ಟು ತನಿಖೆಗೆ ಬಂದ ಸಂಚಾರ ನಿರೀಕ್ಷಕರು, ಈ ಭ್ರಷ್ಟರಿಗೆ ಲಂಚಬಾಕ ಡಿಸಿ ಸಾಥ್- ಆರೋಪ

- ಅಮಾನತಿಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಕೆಆರ್‌ಟಿಸಿ ಎಂಡಿ ಡಾ.ಸುಶೀಲ ಅವರಿಗೆ ಪತ್ರ ಬರೆದ ಯಾಕೂಬ್ ನಾಟೀಕಾರ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ ನಾರಾಯಣಪ್ಪ ಕುರಬರ ಅವರು 2026ನೇ ಮೇ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಇವರು ನಿವೃತ್ತಿಯ ಅಂಚಿನಲ್ಲಿರುವುದರಿಂದ ವಿಭಾಗದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣಗಳು ಹೆಚ್ಚಿಗೆ ಸಿಗಲೆಂದು ವಿಜಯಪುರ ವಿಭಾಗದ ತನಿಖಾ ತಂಡದವರ ಮೇಲೆ ಒತ್ತಡ ಹಾಕಿ ಅನಧೀಕೃತವಾಗಿ ಹಾಗೂ ಅಮಾನವಿಯವಾಗಿ ಪ್ರಕರಣಗಳನ್ನು ದಾಖಲು ಮಾಡಲು ಪ್ರಾರಂಭಿಸಲು ತನಿಖಾಧಿಕಾರಿಗಳಿಗೆ ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇನ್ನು ಇವರ ಆದೇಶಕ್ಕೆ ಮಣಿದು, ತನಿಖಾ ತಂಡದ ತನಿಖಾಧಿಕಾರಿಗಳು ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿ ಚಾಲನಾ ಸಿಬ್ಬಂದಿಗೆ ತೊಂದರೆ ನೀಡುತ್ತಿದ್ದಾರೆ.
ಇದಕ್ಕೆ ನಿದರರ್ಶನವೂ ಇದೆ.. ನಿರ್ವಾಹಕನ ಸೀಟ್ ಕೆಳಗೆ 500 ರೂ. ಇಟ್ಟು ಹೆಚ್ಚುವರಿ ಹಣ ಇದೆ ಎಂದು 20 ಸಾವಿರ ವಸೂಲಿ ಮಾಡಿದ ಕೀಚಕರು: 1) 08/12/2025 ರಂದು ಮಾರ್ಗ ಸಂಖ್ಯೆ 110/111 ಬೆಳಗಾಂವಿಯಿಂದ ಇಂಡಿ ಮಾರ್ಗದಲ್ಲಿ ಚಲಿಸುತ್ತಿದ್ದ ವಾಹನವನ್ನು ಇಂಡಿ ಬಸ್ ನಿಲ್ದಾಣದಲ್ಲಿ ತನಿಖಾಧಿಕಾರಿಗಳಾದ ಯಲಗೂರಪ್ಪ ತಳೇವಾಡ (ಸಂಚಾರ ನಿರೀಕ್ಷಕರು) ಹಾಗೂ ಸಿದ್ದರಾಮ ಉಟಗಿ (ಸಂಚಾರ ನಿರೀಕ್ಷಕರು) ಸೇರಿ ವಾಹನವನ್ನು ತನಿಖೆಗೆ ಒಳಪಡಿಸಿದ್ದರು.
ಈ ವಾಹನದಲ್ಲಿ ತುಕಾರಾಂ ಕೋಳಿ ನಿರ್ವಾಹಕರಾಗಿದ್ದರು. ಈ ವಾಹನದಲ್ಲಿರುವ ಪ್ರಯಾಣೇಕರ ಟಿಕೆಟಗಳನ್ನು ಪರಿಶೀಲನೆ ಮಾಡಿದ ನಂತರ ನಿರ್ವಾಹಕರ ಕ್ಯಾಶನ್ನು ಪರಿಶೀಲನೆ ಮಾಡಲು ಪ್ರಾರಂಭ ಮಾಡಿರುತ್ತಾರೆ. ಈ ತನಿಖಾಧಿಕಾರಿ ಸಿದ್ದರಾಮ ಉಟಗಿ ಅವರಿಗೆ ಹಣ ಕೊಡುತ್ತಿರುವಾಗ ಯಲಗೂರಪ್ಪ ತಳೇವಾಡ ಅವರು ತಮ್ಮ ಬಳಿ ಇದ್ದ 500 ರೂ. ನೋಟವನ್ನು ನಿರ್ವಾಹಕರ ಸೀಟ್‌ಕೆಳಗೆ ಒತ್ತಿದ್ದಾರೆ. ಈ ನಿರ್ವಾಹಕರ ಹತ್ತಿರ ಇರುವ ಹಣ (ಕ್ಯಾಶನ್ನು) ಎಣಿಕೆ (ತಾಳೆ) ಮಾಡಿದ ನಂತರ ಕ್ಯಾಶ್ ಸರಿಯಾಗಿರುವ ಬಗ್ಗೆ ಸೂಚಿಸಿ ವಾಹನದಲ್ಲಿ ಅಲ್ಲಿ ಇಲ್ಲ ಪರಿಶೀಲನೆ ಮಾಡಲು ಪ್ರಾರಂಭಿಸಿರುತ್ತಾರೆ.
ನಂತರ ನಿರ್ವಾಹಕರ ಸೀಟ್‌ಕೆಳಗೆ ಪರಿಶೀಲನೆ ಮಾಡಿ ಸೀಟ್ ಕೆಳಗೆ 500 ರೂ. ಇದೆಯಲ್ಲ ಎಂದು ಹೇಳಿ ನಮಗೆ ನೋಡಿ 500 ರೂ. ಸೀಟಿನ ಕೆಳಗಡೆ ಬಳ್ಳಿ ಇಟ್ಟಿರುತ್ತಿ ಎಂದು ಎಕ್ಸೆಸ್ ಕ್ಯಾಶ್ ಇರುವ ಬಗ್ಗೆ ಮೆಮೋ ಕೊಡಲು ಮುಂದಾಗಿದ್ದಾರೆ. ಈ ವೇಳೆ ನಿರ್ವಾಹಕ ತುಕಾರಾಂ ಕೋಳಿ ಅವರು ಸರ್ ಆ ಹಣ ನನ್ನದಲ್ಲ ಎಂದು ಎಷ್ಟು ಹೇಳಿ ಅಂಗಲಾಚಿದರೂ ಅವರ ಅದಕ್ಕೆ ಕ್ಯಾರೆ ಅನ್ನದೇ ಪ್ರಕರಣ ದಾಖಲು ಮಾಡಿ ಸೇವೆಯಿಂದ ಅಮಾನತು ಮಾಡಿಸುವುದಾಗಿ ಬೇದರಿಕೆ ಹಾಕಿದ್ದಾರೆ.
ಬಳಿಕ ಇದೇ ಸಮಯದಲ್ಲಿ ಇಂಡಿ ಘಟಕದ ಚಾಲಕ ಕಂ ನಿರ್ವಾಹಕ ಅಬ್ಬಾಸ್ ಅಲಿ ಮುಲ್ಲಾ ಅವರನ್ನು ಇಂಡಿ ಬಸ್ ನಿಲ್ದಾಣಕ್ಕೆ ಕರೆಯಿಸಿ ವ್ಯವಹಾರ ಕುದರಿಸಲು ಸೂಚನೆ ನೀಡಿ ಕೆಳಗೆ ಇಳಿದಿದ್ದಾರೆ. ಅಭ್ಯಾಸ್ ಅಲಿ ಮುಲ್ಲಾ ಅವರು 35000 ರೂ.ಗಳನ್ನು ನೀಡಲು ನಿರ್ವಾಹಕರಿಗೆ ಹೇಳುತ್ತಾರೆ. ಅದಕ್ಕೆ ಅವರು ನಾನು ಮಾಡದೇ ಇರುವ ತಪ್ಪಿಗೆ ಅಷ್ಟು ಹಣ ನೀಡಲು ಆಗುವುದಿಲ್ಲ ಎಂದು ಹೇಳಿದ ನಂತರ ಮಾತುಕತೆ ಮಾಡಿ ಕೊನೆಗೆ 20000 ರೂ.ಗಳಿಗೆ ವ್ಯವಹಾರ ಮುಗಸಿರುತ್ತಾರೆ.
9/12/2025 ರಂದು ಸಮಯ 07:40 ಗಂಟೆಗೆ ನಿರ್ವಾಹಕ ತುಕಾರಾಂ ಕೋಳಿ ಅವರು ಫೋನ್ ಪೇ ಮೂಲಕ 20000 ರೂ.ಗಳನ್ನು ಮುಲ್ಲಾ 1274 ಇಂಡಿ ಇವರ ಶ್ರೀಮತಿ ರಿಯಾನಾ ಮುಲ್ಲಾ ಅವರ ಖಾತೆಗೆ UTR No 294787589966 ಹಣವನ್ನು ಕಳುಹಿಸಿದ್ದಾರೆ. ಅಬ್ಬಾಸ್ ಅಲಿ ಮುಲ್ಲಾ ಅವರು ಮಾರನೆ ದಿನಕ್ಕೆ ಯಲಗೂರಪ್ಪ ತಳೇವಾಡ ಅವರಿಗೆ 10000 ರೂ.ಗಳನ್ನು ಹಾಗೂ ಸಿದ್ದರಾಮ ಉಟಗಿ ಸಂಚಾರ ನಿರೀಕ್ಷಕ ಅವರಿಗೆ ಫೋನ್ ಪೇ ಮೂಲಕ ನೀಡಿರುವುದಾಗಿ ಮೊಬೈಲ್‌ನಲ್ಲಿ ನಿಗಮದ ಕೆಲವು ನೌಕರರ ಜತೆಗೆ ಮಾತನಾಡಿರುವ ವಾಯ್ಸ್ ರಿಕಾರ್ಡ್ ಲಭ್ಯ ವಿದೆ.
ನಿರ್ವಾಹಕನ ವಿರುದ್ಧ ಕೇಸ್ ದಾಖಲಿಸಲು ಬಸ್‌ನಲ್ಲಿ ಪಾರ್ಸಲ್ ಇಟ್ಟು ಅದರಲ್ಲಿ 500 ರೂ. ಹಾಕಿದ ಭ್ರಷ್ಟ TIಗಳು: 2) ದಿನಾಂಕ 12/12/2025 ರಂದು ವಾಹನ ಸಂಖ್ಯೆ KA-28-F-2410 ವಿಜಯಪುರದಿಂದ ಇಂಡಿ ಮಾರ್ಗದ ಮೇಲೆ ಕಾರ್ಯಾಚರಣೆ ಮಾಡುತ್ತಿರುವಾಗ ವಿಜಯಪುರ ಬಸ್ ನಿಲ್ದಾಣದಲ್ಲಿ ತಮ್ಮ ಸಹಾಯಕನಿಂದ ಒಂದು ಸಣ್ಣ ಪಾರ್ಸಲವನ್ನು ಬಸ್‌ನಲ್ಲಿ ಪ್ಯಾಸೆಂಜರ್ ಹತ್ತಿರ ಇಟ್ಟು ಇಂಡಿ ಬಸ್ ನಿಲ್ದಾಣದಲ್ಲಿ ತೆಗೆದುಕೊಳ್ಳುತ್ತಾರೆ. ಎಂದು ಹೇಳಿ ಹೋಗಿದ್ದಾರೆ. ಈ ಬಸ್ ಗುಂಡು ತಾಂಡಾ ಹತ್ತಿರ ಬಂದಾಗ ಇದೇ ಸಂಚಾರ ನಿರೀಕ್ಷಕ ಯಲಗೂರಪ್ಪ ತಳೇವಾಡ ಹಾಗೂ ಸಿದ್ದರಾಮ ಉಟಗಿ ಸೇರಿ ವಾಹನವನ್ನು ತನಿಖೆಗೆ ಒಳಪಡಿಸಿದ್ದಾರೆ.
ವಿಜಯಪುರದಲ್ಲಿ ಕೊಟ್ಟ ಪಾರ್ಸಲ್ ಎಲ್ಲ ಇದೆ ಹೇಳು ಎಂದು ಕೇಳಿದ್ದಾರೆ. ಸರ್ ಪಾರ್ಪಲ ನನ್ನ ಹತ್ತಿರ ಇಲ್ಲ ಅದೂ ಪ್ಯಾಸೆಂಜರದೂ ಇದೆ ಎಂದು ಚಾಲಕ ಹೇಳಿದ್ದಾರೆ. ಪ್ಯಾಸೇಂಜರವನ್ನು ವಿಚಾರಿಸಿದಾಗ ಅದೂ ಪಾರ್ಸಲ ನನ್ನದು ಇದೇ ಎಂದು ಹೇಳಿದ ನಂತರ ತನಿಖಾಧಿಕಾರಿಗಳು ಮರಳಿ ಹೋಗಿದ್ದಾರೆ. ಇಂಡಿ ನಗರಕ್ಕೆ ಪ್ರವೇಶ ಮಾಡುತ್ತಿರುವಾಗ ನೀರಿನ ಟ್ಯಾಂಕ್ ಹತ್ತಿರ ದಾವಲಮಲಿಕ ವಾಲಿಕಾರ (ಪಿಂಜಾರ) ಸಹಾಯಕ ಸಂಚಾರ ನಿರೀಕ್ಷಕ ಅವರ ಜತೆಗೆ ಇನ್ನೊಬ್ಬ ಸಹಾಯಕ ಸಂಚಾರ ನಿರೀಕ್ಷಕ ಈ ವಾಹನವನ್ನು ಮತ್ತೆ ತನಿಖೆಗೆ ಒಳ ಪಡಿಸಿ ಪಾರ್ಸಲ್ ಬಗ್ಗೆ ವಿಚಾರಿಸಿದ್ದಾರೆ.
ಮತ್ತೇ ಪ್ಯಾಸೆಂಜರ್ ಅದೂ ಪಾರ್ಸಲ ನನ್ನದು ಎಂದು ಹೇಳಿದಾಗ ಸುಮ್ಮನೆ ಇದ್ದು ಅವರು ಬಸ್‌ನಿಂದ ಬಸ್ ನಿಲ್ದಾಣದವರೆಗೆ ಹೋಗಿದ್ದಾರೆ. ಈ ಪಾರ್ಸಲನಲ್ಲಿ 500 ರೂ.ನೋಟ್ ಇದೆ ಅದೂ ಕೊಡು ಎಂದು ಈ ಮೇಲಿನವರು ಬೆಬ್ಬು ಬಿದ್ದಿದ್ದಾರೆ. ಈ ಸಮಯದಲ್ಲಿ ಚಾಲಕರ ಹತ್ತಿರ ಪಾರ್ಸಲ್ ಸಿಕ್ಕಿದರೆ ಅದನ್ನು ತೆರೆದು ಅದರಲ್ಲಿ ಹಣವನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿದ್ದ ಎಂದು ಪ್ರಕರಣ ದಾಖಲು ಮಾಡಲು ಪ್ಲಾನ್ ಮಾಡಿದ್ದಾರೆ. ಇದಕೆಲ್ಲ ಈ ತನಿಖಾಧಿಕಾರಿಗಳು ನೇರವಾಗಿ ಕಾರಣರಾಗಿದ್ದಾರೆ.
ಬಸ್ ಡಿಕ್ಕಿ ತೋರಿಸಲು ಹಣದ ಬ್ಯಾಗ್ ಇಲ್ಲೇ ಇಟ್ಟು ಬಾ ಎಂದು 1000 ರೂ. ಎಗರಿಸಿದ ನೀಚರು: 3) ದಿನಾಂಕ 19/08/2025 ರಂದು ದಾವಣಗೆರೆ ಇಂಡೆ ರೂಟ್ ನಂಬರ್ 85/86 ಬಾಬು ರಾಥೋಡ್ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡಗುಂದೆ ಬಸ್ ನಿಲ್ದಾಣದಲ್ಲಿ ವಿಭಾಗೀಯ ತನಿಖಾಧಿಕಾರಿಗಳಾದ ಸಿದ್ದರಾಮ ಉಟಗಿಗೆ ಮತ್ತು ಯಲಗೂರಪ್ಪ ತಳೇವಾಡ ಅವರು ವಾಹನವನ್ನು ತಪಾಸಣೆ ಮಾಡುತ್ತಾ ಇಲ್ಲ ಸಲ್ಲದ ಆರೋಪ ಮಾಡುತ್ತಾ ಪ್ರಯಾಣಿಕರಿಗೆ ಕೆಳಗೆ ಇಳಿಸಿ ನೀನು ದಾವಣಗೆರೆಯಿಂದ ಬಂಗಾರದ ಆಭರಣಗಳನ್ನು ಪಾರ್ಸಲ್ ತಂದಿದ್ದೀಯಲ್ಲ ಅದನ್ನು ಎಲ್ಲಿ ಇಟ್ಟಿದೀಯಾ ಕೊಡು ಎಂದು ಬೆದರಿಸಿರುತ್ತಾ ವಾಹನದಲ್ಲಿ ಎಲ್ಲ ಕಡೆ ಹುಡುಕಿ ಏನೋ ಸೆಗದೇ ಇದ್ದಾಗ ಕೆಟ್ಟ ಶಬ್ದಗಳಿಂದ ಬೈಯುತ್ತಾ ರೂಟ್ ಮಧ್ಯ ನಿನ್ನ ಹತ್ತಿರ ಎಷ್ಟು ಹಣ ಇದೆ ಕೊಡು ನಾವು ತಪಾಸಣೆ ಮಾಡುತ್ತೇವೆ ಎಂದು ಯಲಗೂರಪ್ಪ ಮತ್ತು ಸಿದ್ದರಾಮ ಅವರು ಬಾಬು ರಾತೋಡ್ ಕಡೆ ಇದ್ದ ಕಲೆಕ್ಷನ್ ಹಣವನ್ನು ಸೀಟಿನ ಮೇಲೆ ಇಡಿಸಿದ್ದಾರೆ.
ಬಳಿಕ ಸಿದ್ದರಾಮ ಅವರು ಬಾಬುಗೆ ಬಸ್ ಪಾರ್ಸಲ್ ಇಡುವ ಜಾಗದಲ್ಲಿ (ಡಿಕ್ಕಿಯಲ್ಲಿ) ಏನಿದೆ ತೋರಿಸು ನಡೆ ಎಂದು ಕೆಳಗೆ ಕರೆದುಕೊಂಡು ಹೋಗಿದ್ದಾರೆ ಬಾಬು ಡಿಕ್ಕಿಯನ್ನು ಓಪನ್ ಮಾಡಿ ತೋರಿಸಿ ಒಳಗೆ ಬರುವಷ್ಟರಲ್ಲೇ ಬಾಬು ಎಣಿಸಿ ಇಟ್ಟಿದ್ದ ಹಣದಲ್ಲೇ ಯಲುಗೂರಪ್ಪ ತಳೇವಾಡ ಒಂದು ಸಾವಿರ ರೂಪಾಯಿ ಎಗರಿಸಿ ಬಳಿಕ ಬಾಬು ಮುಂದೆ ಮತ್ತೊಮ್ಮೆ ಹಣ ಎಣಿಸುವ ಹಾಗೆ ನಾಟಕವಾಡಿ 1000 ಕಡಿಮೆ ಇದೆ ಎಂದು ಕೇಸ್ ಬರೆದಿದ್ದಾರೆ.
ಈ ವೇಳೆ ಇಲ್ಲ ಸರ್ ನಾನು ಎಣಿಸಿ ಇಟ್ಟು ಕೆಳಗಡೆ ಹೋಗಿದ್ದೇನೆ ಎಂದು ಬಾಬು ಎಷ್ಟು ಅಂಗಲಾಚಿದರು ನನ್ನ ಹತ್ತಿರ 1000 ರೂ. ಕಡಿಮೆ ಎಂದು ದಬಾಯಿಸಿ ಬಳಿಕ ಸರಿ ಇದನೇನು, ಏನಾದರೂ ಸೆಟಲ್‌ಮೆಂಟ್‌ಮಾಡೆಕೊಂಡರೆ ಸರಿ ಇಲಾಂದ್ರೆ, ನಿನ್ನ ಮೇಲೆ ಕೇಸ್ ಬರಿತ್ತೀವಿ ಎಂದು ಹೆದರಿದ್ದಾರೆ. ಆಗ ಬಾಬು ನನ್ನ ಕಡೆಯಿಂದ ಹಣ ಕೊಡಲು ಆಗುವುದಿಲ್ಲ ಸರ್ ಎಂದು ಹೇಳಿದಾಗ ನೀನು 1000 ರೂ. ಮೈನಸ್ ಬಾಲೆನ್ಸ್ ಬರೇಸಿಕೋ ಇಲ್ಲ ಅಂದ್ರೆ 140 ರೂ.ಟಿಕೆಟ್ ಬರೇಸಿಕೋ ಎಂದು ಬೆದರಿಸುತ್ತಾ ಕೊನೆಗೆ 140 ರೂ. ಅನ್ಯಾಯವಾಗಿ ಕೇಸ್ ಬರೆದು ನಿರ್ವಾಹಕ ಕರ್ತವ್ಯ ಲೋಪ ವೆಸಗಿದ್ದಾರೆ ಎಂದು ಬಾಬು ರಾಥೋಡ್ ವಿರುದ್ಧ ಕೇಸ್ ಬರೆದಿದ್ದಾರೆ ಈ ಭ್ರಷ್ಟರು. ಈ ಬಗ್ಗೆ ಬಾಬು ತಮ್ಮ ಅಳಲು ತೋಡಿಸಿಕೊಂಡಿದ್ದಾರೆ.
ಹೀಗಾಗಿ ಈ ವಿಷಯದಲ್ಲಿ ಯಲಗೂರಪ್ಪ ತಳೇವಾಡ ಹಾಗೂ ಸಿದ್ದರಾಮ ಉಟಗಿ, ವಿಜಯಪುರ ವಿಭಾಗೀಯ ತನಿಖಾ ದಳದ ಸಹಾಯಕ ಸಂಚಾರ ನಿರೀಕ್ಷಕ ದಾವಲಮಲಿಕ ವಾಲಿಕಾರ (ಪಿಂಜಾರ) ಇವರು 12/12/2025 ರಂದು ವಾಹನ ಸಂಖ್ಯೆ KA-28-F-2410 ವಿಜಯಪುರದಿಂದ ಇಂಡಿ ಮಾರ್ಗದ ಮಧ್ಯೆ ವಾಹನವನ್ನು ತನಿಖೆ ಮಾಡಿದ ಇನ್ನುಳಿದ ತನಿಖಾಧಿಕಾರಿಗಳನ್ನು ಹಾಗೂ ಚಾಲಕ ಕಂ ನಿರ್ವಾಹಕ ಅಬ್ಬಾಸ್ ಅಲಿ ಮುಲ್ಲಾ ನನ್ನು ಸಂಸ್ಥೆಯ ಶಿಸ್ತು ಮತ್ತು ನಡತೆ ನಿಯಮಾವಳಿಗಳನ್ವಯ ವಿಚಾರಣಾ ಪೂರ್ವ ಅಮಾನತು ಮಾಡಬೇಕು.
ಜತೆಗೆ ಭ್ರಷ್ಟ ಮತ್ತು ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ನಿವೃತ್ತಿ ಅಂಚಿನಲ್ಲಿರುವುದರಿಂದ ಇನ್ನಷ್ಟು ಭ್ರಷ್ಟಾಚಾರ ಮಾಡುವ ಸಂಭವವಿದೆ. ಹೀಗಾಗಿ ಅವರನ್ನು ಶಿಸ್ತು ಮತ್ತು ಆಡಳಿತ ಶಾಖೆ ಹಾಗೂ ಇನ್ನುಳದ ಶಾಖೆಗಳಲ್ಲಿ ತೆಗೆದುಕೊಳ್ಳುವ ಶಿಸ್ತಿನ ಕ್ರಮಗಳ ಶಿಸ್ತುಪಾಲನಾಧಿಕಾರ ಹಾಗೂ ಇನ್ನುಳಿದ ಅಧಿಕಾರವನ್ನು ಅವರಿಂದ ಕೂಡಲೇ ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಕೆಆರ್‌ಟಿಸಿ ಎಂಡಿ ಡಾ.ಸುಶೀಲ ಅವರಿಗೆ ಯಾಕೂಬ್ ನಾಟೀಕಾರ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
Related









