NEWSನಮ್ಮಜಿಲ್ಲೆಮೈಸೂರುಸಂಸ್ಕೃತಿ

ಮಾನವೀಯತೆ ಬೆಳಸಲು ಕಲೆ, ಸಾಹಿತ್ಯ ಸಂಗೀತ ಸಹಕಾರಿ: IAS ಅಧಿಕಾರಿ ಧನರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಂಗಭೂಮಿ ಎಂಬುದು ಧರ್ಮಾತೀತ, ಜಾತ್ಯತೀತ ಅಲ್ಲದೇ ದೇಶಾತೀಶ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣಿಸದ್ದಾರೆ.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಆವರಣದ ಕೆಎಸ್‌ಜಿಎಚ್ ಸಭಾಂಗಣದಲ್ಲಿ ಸಂಗೀತ ವಿವಿ ಹಾಗೂ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ‘ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು” ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಎಂಬುದು ಭಾಷೆ, ದೇಶ, ಹೀಗೆ ಎಲ್ಲ ಗಡಿಗಳನ್ನೂ ಮೀರಿದ್ದು ಇಲ್ಲಿಗೆ ಬರುವವರು ರಾಮನಾಗುತ್ತಾರೆ, ಕೃಷ್ಣನಾಗುತ್ತಾರೆ ಎಲ್ಲ ಮಹಾಪುರುಷರ ಆದರ್ಶಗಳನ್ನು ಅಭಿನಯದ ಮೂಲಕ ತೋರುತ್ತಾರೆ ಈ ಮೂಲಕ ಅವರು ಆದರ್ಶ ವ್ಯಕ್ತಿಗಳಾಗಲು ಯತ್ನಿಸುತ್ತಾರೆ ಎಂದು ಹೇಳಿದರು.

ಭಾರತ ಎಂಬುದು ಬಹುತ್ವದ ದೇಶ. ಇಲ್ಲಿ ನೃತ್ಯ, ಸಂಗೀತ, ಆದಿವಾಸಿ, ಬುಡಕಟ್ಟುಗಳ ಕಲೆಗಳು ವಿಭಿನ್ನವಾಗಿವೆ ನಮ್ಮ ರಾಜ್ಯದಲ್ಲಿ ಸಂಗೀತ ವಿವಿ, ಮಹಿಳಾ ವಿವಿ, ಕನ್ನಡ ವಿವಿ, ರಾಣಿ ಚನ್ನಮ್ಮ ವಿವಿ. ನಾಟಕ ಅಕಾಡೆಮಿ, ಹೀಗೆ ಎಲ್ಲವೂ ಇದೆ. ಇಷ್ಟು ವೈವಿಧ್ಯತೆ ದೇಶದ ಬೇರೆ ರಾಜ್ಯಗಳಲ್ಲಿ ಕಾಣ ಸಿಗುವುದಿಲ್ಲ ಎಂದರು.

ಜಗತ್ತು ಇಂದು ಬದಲಾಗುತ್ತಿದೆ ತಂತ್ರಜ್ಞಾನ, ವಿಜ್ಞಾನ ಎಲ್ಲೆಡೆ ತನ್ನ ಭಾವು ಮೂಡಿಸುತ್ತಿದೆ. ಎಐ ತಂತ್ರಜ್ಞಾನದ ಮೂಲಕ ಕಳೆದು ಹೋಗಿರುವ ನಾಗರಿಕತೆಯನ್ನೇ ಹುಟ್ಟುಹಾಕಬಹುದಾಗಿದೆ. ಇದರ ನಡುವೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಎಂದು ಹೇಳಿದರು.

ಮಧ್ಯಪ್ರದೇಶ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹಾಗೂ ಹಿರಿಯ ಐಎಎಸ್ ಅಧಿಕಾರಿ ಎಸ್.ಧನರಾಜು ಮಾತನಾಡಿ, ಮನುಷ್ಯರಲ್ಲಿ ಮಾನವೀಯತೆ ಬೆಳಸಲು ಕಲೆ, ಸಾಹಿತ್ಯ ಸಂಗೀತ ಸಹಕಾರಿ ಎಂದು ತಿಳಿಸಿದರು.

ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ನಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುಎಸ್‌ಎನ ಟೆಕ್ಸಾಸ್ ವಿವಿಯ ವಸ್ತ್ರ ವಿನ್ಯಾಸಕಿ ಪ್ರೊ.ಸಾರಾ ಮೋಷರ್, ಪ್ರೊ. ಸಾರಾ ಕರನ್ ಐಸ್, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ಮುಂತಾದವರು ಇದ್ದರು.

Megha
the authorMegha

Leave a Reply

error: Content is protected !!