ಸಕಲೇಶಪುರ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದು, ಮತ್ತೊಬ್ಬ ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗ್ಗೆ ತಾಲೂಕಿನ ಮೂಗಲಿ ಗ್ರಾಮದಲ್ಲಿ ನಡೆದಿದೆ.

ಮೂಗಲಿ ಗ್ರಾಮದ ನಿವಾಸಿ ಶೋಭಾ (40) ಎಂಬುವರೆ ಆನೆ ದಾಳಿಗೆ ಸಿಲುಕಿ ಮೃತಪಟ್ಟವರು. ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ತನ್ನ ತಾಯಿ ರಾಜಮ್ಮ ಅವರೊಂದಿಗೆ ಶೋಭಾ ಹೋಗುತ್ತಿದ್ದಾಗ ಅವರ ಮೇಲೆ ಆನೆ ದಾಳಿ ಮಾಡಿದೆ. ಈ ವೇಳೆ ಆನೆಯ ತುಳಿತಕ್ಕೆ ಆಕೆ ಬಲಿಯಾಗಿದ್ದಾರೆ.
ಮೃತ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು ಅವರ ತಾಯಿ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ.
ಈ ವೇಳೆ ತಾಯಿ ರಾಜಮ್ಮ ಅವರು ಓಡಿಹೋಗಿ ಬಚಾವಾಗಿದ್ದು ಶೋಭಾ ಅವರು ಆನೆಯ ತುಳಿತಕ್ಕೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಾಜಮ್ಮ ಅವರು ಬೆಳಗೋಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆಗಳು ಪದೇಪದೆ ದಾಲಿ ಮಾಡುತ್ತಿದ್ದರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಆನೆ ಇತ್ತೀಚೆಗೆ ಕೊಡಗಿನಿಂದ ಬಂದಿದ್ದು, ಅಕ್ರಮಣಕಾರಿಯಾಗಿ ವರ್ತಿಸುವ ದೈತ್ಯ ಆನೆಯಾಗಿದೆ. ಇದಕ್ಕೆ ಶೋಭಾ ಅವರು ಮೊದಲ ಬಲಿಯಾಗಿದ್ದು, ಇನ್ನು ಎಷ್ಟುಜನ ಪ್ರಾಣಕಳೆದುಕೊಳ್ಳಬೇಕೋ ಗೊತ್ತಿಲ್ಲ ಎಂದು ಜನರು ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
Related










