NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಇದೇ ಜ.25ರೊಳಗೆ 2026 ಜ.1ರಿಂದ ಅನ್ವಯವಾಗುವಂತೆ ಶೇ.17ರಷ್ಟು ವೇತನ ಹೆಚ್ಚಳದ ಘೋಷಣೆ ಬಹುತೇಕ ಖಚಿತ !?

ವಿಜಯಪಥ ಸಮಗ್ರ ಸುದ್ದಿ
  • 38 ತಿಂಗಳ ಬದಲಿಗೆ 14 ತಿಂಗಳ ಹಿಂಬಾಕಿ ಬಿಡುಗಡೆಗೂ ಸರ್ಕಾರ ನಿರ್ಧಾರ !?
  • ಒಂದುವೇಳೆ ಸರ್ಕಾರ ಏಕಪಕ್ಷೀಯವಾಗಿ ಜಾರಿ ಮಾಡಿದರೆ ಸಂಘಟನೆಗಳ ಮುಂದಿನ ನಡೆ ಏನು? 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನವು ನಿಯಮಿತವಾಗಿ ಪರಿಷ್ಕರಣೆಯಾಗುತ್ತಿತ್ತು. ಆದರೆ, 2020ರಲ್ಲಿ ಬಂದ ಕೊರೊನಾದಿಂದಾಗಿ ಅಂದಿನ ಬಿಜೆಪಿ ಸರ್ಕಾರ 2020ರ ಜನವರಿ 1 ಮಾಡಬೇಕಿದ್ದ ನೌಕರರ ವೇತನ ಪರಿಷ್ಕರಣೆಗೆಯನ್ನು 2023ರ ಮಾರ್ಚ್‌ ವೇತನಕ್ಕೆ ಶೇ.15ರಷ್ಟು ವೇತನ ಸೇರಿಸಿ ಕೊಟ್ಟು, ಉಳಿದ 38 ತಿಂಗಳ ಹಿಂಬಾಕಿಯ ಬಗ್ಗೆ ಒನ್‌ಮ್ಯಾನ್‌ ಕಮಿಟಿ ಜತೆ ಸಂಘಟನೆಗಳು ಸಭೆ ಸೇರಿ ನಿರ್ಧಾರ ಮಾಡಬೇಕು ಎಂದು ಹೇಳಿತ್ತು.

ಬಳಿಕ 2023ರ ಮೇನಲ್ಲಿ ಚುನಾವಣೆ ಬಂದಿದ್ದರಿಂದ ಆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಈಗ ಅಂದಿನ ಬಿಜೆಪಿ ಸರ್ಕಾರ ಮಾರ್ಚ್‌ 2023ರಿಂದ ವೇತನ ಹೆಚ್ಚಳ ಮಾಡಿದೆ. ಹೀಗಾಗಿ ನಾವು ಈ 38 ತಿಂಗಳ ವೇತನ ಹಿಂಬಾಕಿ ಕೊಡುವುದಿಲ್ಲ ಅಲ್ಲದೆ 2027ರ ಮಾರ್ಚ್‌ಗೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿಕೆ ನೀಡುವ ಮೂಲಕ ನೌಕರರಿಗೆ ಅನ್ಯಾಯವೆಸಗುತ್ತಿದೆ.

ಈ ನಡುವೆ ಸಾರಿಗೆ ನೌಕರರ ಒಕ್ಕೂಟ ಹಾಗೂ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರ್ಕಾರಕ್ಕೆ ಪ್ರತ್ಯೇಕವಾಗಿ ಬೇಡಿಕೆ ಇಟ್ಟು ನಮಗೆ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಹಿಂದಿನ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡಲೇಬೇಕು. ಜತೆಗೆ 2024ರ ಜನವರಿ 1ರಿಂದ ಅನ್ವಯವಾಗುಂತೆ ಮತ್ತೆ ವೇತನ ಪರಿಷ್ಕರಣೆ ಆಗಲೇಬೇಕು ಎಂದು ಪಟ್ಟು ಹಿಡಿದಿವೆ.

ಇದರಲ್ಲಿ ಒಕ್ಕೂಟದ ಪದಾಧಿಕಾರಿಗಳು ಇಲ್ಲ ನಮಗೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಿರುವ ಶೆ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡಿ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಕೊಡುತ್ತಿರುವಂತೆ 7ನೇ ವೇತನ ಆಯೋಗ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಿ ಎಂದು ಪಟ್ಟು ಹಿಡಿದ್ದಿದ್ದಾರೆ.

ಈ ನಡುವೆ ಈ ಎರಡು ಸಾರಿಗೆ ಬಣಗಳ ಒಡಕಿನ ಲಾಭ ಪಡೆದುಕೊಳ್ಳುತ್ತಿರುವ ಸರ್ಕಾರ ಈಗ ಮತ್ತೆ ತನ್ನ ಪ್ಲೇಟ್‌ ಬದಲಾಯಿಸಿ ಇಲ್ಲ 2020ರಿಂದ ಜಾರಿಗೆ ಬರುವಂತೆ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡಲು ಸಾಧ್ಯವಿಲ್ಲ. ಕಾರಣ ಅಂದು ಕೊರೊನಾದಿಂದ ಲಾಸ್‌ಆಗಿದೆ ಹೀಗಾಗಿ ನಾವು 14 ತಿಂಗಳ ಹಿಂಬಾಕಿ ಕೊಡುತ್ತೇವೆ ಜತೆಗೆ 2026ರ ಜನವರಿ-1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳುತ್ತಿದೆ.

ಆದರೆ, ಇದಕ್ಕೆ ಸಾರಿಗೆ ನೌಕರರ ಯಾವುದೇ ಸಂಘಟನೆಗಳ ಮುಖಂಡರು ಒಪ್ಪುತ್ತಿಲ್ಲ. ಹೀಗಾಗಿ ಸರ್ಕಾರ ಏಕಪಕ್ಷೀಯವಾಗಿಯೇ ಈಗ 2026ರ ಜನವರಿ 1ರಿಂದ ಅನ್ವಯವಾಗುವಂತೆ ಶೆ.17ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇದು ಒಂದುವೇಳೆ ಸರ್ಕಾರ ಮತ್ತೆ ಯಾವುದೇ ಸಾರಿಗೆ ಸಂಘಟನೆಗಳ ಮರ್ಜಿಗೂ ಒಳಗಾಗದೆ ಶೇ.17ರಷ್ಟು ವೇತನ ಹೆಚ್ಚಳವನ್ನು ಇದೇ 2026ರ ಜನವರಿ 1ರಿಂದ ಜಾರಿ ಮಾಡಿದರೆ ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಕೆಲ ಸಂಘಟನೆಗಳ ನಾಯಕರು ಇದ್ದರೆ, ಇನ್ನೂ ಕೆಲ ನಾಯಕರು ಸರ್ಕಾರ ಮೊದಲು ಏನು ಮಾಡಲು ಹೊರಟಿದೆಯೋ ಅನ್ನು ಮಾಡಲ ಬಳಿಕ ನಾವು ಏನು ಮಾಡಬೇಕು ಎಂಬುದನ್ನು ಕಾದು ನೋಡೋಣ ಎಂಬ ಹೇಳಿಕೆ ನೀಡುತ್ತಿದ್ದಾರೆ.

ಈ ಎಲ್ಲದರ ನಡುವೆ ಇದೇ ಜನವರಿ 25ರೊಳಗೆಯೇ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಘೋಷಣೆ ಮಾಡುವ ಸಂಭವವು ಹೆಚ್ಚಾಗಿದೆ. ಅಲ್ಲದೆ ಇದು 2026ರ ಜನವರಿ 1ರಿಂದಲೇ ಜಾರಿಗೆ ಬರಲಿದ್ದು 2024ರ ಜನವರಿ 1ರಿಂದ ಅನ್ವಯವಾಗುವುದಿಲ್ಲ. ಹೀಗಾಗಿ ಯಾವುದೇ ಹಿಂಬಾಕಿ ಈ ವೇತನ ಹೆಚ್ಚಳಕ್ಕೆ ಕೊಡಲು ಬರುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ ಎಂದು ತಿಳಿದು ಬಂದಿದೆ.

ಇನ್ನು 38 ತಿಂಗಳ ಹಿಂಬಾಕಿ ಬದಲಿಗೆ 14 ತಿಂಗಳ ಹಿಂಬಾಕಿಯನ್ನು ಕೊಟ್ಟು ಒಟ್ಟಾರೆ ಸಾರಿಗೆ ನೌಕರರ ವೇತನ ಹೆಚ್ಚಳ ಸಮಸ್ಯೆ ಸಮನವಾಗಿದೆ ಎಂಬ ಸಂದೇಶವನ್ನು ಸಾರಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು ಇದೇ ಫೈನಲ್‌ ಎಂಬುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಒಂದುವೇಳೆ ಸರ್ಕಾರ ತಾನು ಅಂದುಕೊಂಡಿರುವಂತೆ ಈ ನಿರ್ಧಾರ ತೆಗೆದುಕೊಂಡು ಘೋಷಣೆ ಮಾಡಿದರೆ ಸಾರಿಗೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಪ್ರತಿಯೊಬ್ಬ ನೌಕರರಿಗೂ ಲಕ್ಷಾಂತರ ರೂಪಾಯಿ ಲಾಸ್‌ ಆಗಲಿದೆ. ಹೀಗಾಗಿ ಅಧಿಕಾರಿಗಳು ಹಾಗೂ ನೌಕರರು ಒಂದುವೇಳೆ ಸರ್ಕಾರ ಜ.25ರೊಳಗೆ ಘೋಷಣೆ ಮಾಡಿದರೆ ಇದನ್ನು ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದನ್ನೂ ಕೂಡಕಾದು ನೋಡಬೇಕಿದೆ.

ನೌಕರರ ಬೇಡಿಕೆ ಏನು?: ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ಹೆಚ್ಚಳ, ಕನಿಷ್ಠ ವೇತನದ ಪರಿಷ್ಕರಣೆ ಮತ್ತು ಬಾಕಿ ವೇತನ (Arrears) ಪಾವತಿಗೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ ನೌಕರರು 7ನೇ ವೇತನ ಆಯೋಗದ ಮಾದರಿಯಲ್ಲಿ ಕನಿಷ್ಠ ವೇತನ ರೂ. 36,000ಕ್ಕೆ ಏರಿಕೆ ಮಾಡಲು ಒತ್ತಾಯಿಸುತ್ತಿದ್ದಾರೆ.

ಸರ್ಕಾರಿ ನೌಕರರಿಗೆ ಸಿಗುವಂತೆ ಸಮಾನ ವೇತನ ನೀಡಬೇಕು. 38 ತಿಂಗಳುಗಳ ವೇತನ ಬಾಕಿ (Arrears) ಪಾವತಿಸಬೇಕು. ಅಲ್ಲದೆ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಿ ಅದರ 24 ತಿಂಗಳುಗಳ ಹಿಂಬಾಕಿಯನ್ನು ಕೊಡಬೇಕು.

ಮೊದಲು ನಿಮ್ಮ ಸರ್ಕಾರ ಸರಿ ಸಮಾನ ವೇತನ ಕೊಡಲು ಒಪ್ಪಿದೆ. ಅಲ್ಲದೆ ನಿವೃತ್ತ ನೌಕರರಿಗೆ ಈಗಾಗಲೇ 38ತಿಂಗಳ ಕೆಲವೊಂದು ಹಿಂಬಾಕಿ ಕೊಡುವುದಕ್ಕೆ 221 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅದನ್ನು ನಿವೃತ್ತರಿಗೆ ಕೊಟ್ಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ಕುರಿತು 4ಕ್ಕೂ ಹೆಚ್ಚು ಸಭೆಗಳು ನಡೆದಿವೆ.

ನೀವು ಈ ಹಿಂದೆಯಲ್ಲ ನೌಕರರಿಗೆ 38 ತಿಂಗಳ ಹಿಂಬಾಕಿ ಕೊಡಬೇಕು ಎಂದ ಹೇಳಿಕೊಂಡು ಬಂದು ಇತ್ತೀಚೆಗೆ ಇಲ್ಲ ಬಿಜೆಪಿ ಸರ್ಕಾರ ಸರಿಯಾಗಿ ಘೋಷಣೆ ಮಾಡಿಲ್ಲ ಎಂಬ ಕುಂಟುನೆಪ್ಪ ಹೇಳಿಕೊಂಡು ನಮಗೆ ಅನ್ಯಾಯ ಮಾಡಲು ಹೊರಟಿರುವುದು ಸರಿಯಲ್ಲ ನಾವು ದಿನದ 24 ಗಂಟೆಯೂ ಜನ ಸೇವೆಯಲ್ಲಿ ನಿರತರಾಗಿದ್ದೇವೆ ಹೀಗಾಗಿ ನಮಗೆ ಈ ಎಲ್ಲ ಸೌಲಭ್ಯಗಳ ಜತೆಗೆ ಹೆಚ್ಚುವರಿಯಾಗಿ ಪ್ರತಿವರ್ಷವೂ 1 ತಿಂಗಳ ವೇತನವನ್ನು ಬೋನಾಸ್‌ ರೂಪದಲ್ಲಿ ಕೊಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

Megha
the authorMegha

Leave a Reply

error: Content is protected !!