- 2026 ಜನವರಿ 19 ರಿಂದ 31 ರವರೆಗೆ ಲಸಿಕಾ ಅಭಿಯಾನ
ಬೆಂಗಳೂರು: ಲಸಿಕಾ ದಡಾರ-ರುಬೆಲ್ಲಾ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ, ಸಾರ್ವತ್ರಿಕ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ 9 ರಿಂದ 11 ತಿಂಗಳ ವಯಸ್ಸಿನಲ್ಲಿ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳ ವಯಸ್ಸಿನಲ್ಲಿ ಎರಡನೇ ಡೋಸ್ ದಢಾರ ರುಬೆಲ್ಲಾ ಲಸಿಕೆಯನ್ನು ನೀಡಲಾಗುತ್ತಿದೆ.

ಭಾರತ ಸರ್ಕಾರವು 2026ರ ಅಂತ್ಯದೊಳಗೆ ದಢಾರ-ರುಬೆಲ್ಲಾ ಮತ್ತು ರುಬೆಲ್ಲಾ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಬದ್ದವಾಗಿದ್ದು, ಈ ಮಹತ್ವದ ಗುರಿ ಸಾಧನೆಯಲ್ಲಿ ರಾಜ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ದಡಾರ-ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿಶೇಷ ಗಮನಹರಿಸಿದೆ.
ಕಾರ್ಯಕ್ರಮದ ಗುರಿ:
1. ದಡಾರ-ರುಬೆಲ್ಲಾ ಲಸಿಕೆಯ (MR-1, MR-2) 2 ಡೋಸ್ ಲಸಿಕಾ ಕರಣದ ಪ್ರಗತಿಯು ಶೇ.95 ಕ್ಕಿಂತ ಹೆಚ್ಚಿರಬೇಕು.
2. ದಡಾರ-ರುಬೆಲ್ಲಾ ಮೊದಲನೇ ಮತ್ತು ಎರಡನೇ ಡೋಸ್‌ಗಳ ಡ್ರಾಪ್ ಔಟ್ ರೇಟ್ ಶೂನ್ಯವಿರಬೇಕು.
3. Non-Measles, Non- Rubella discard rate 1 ಲಕ್ಷ ಜನಸಂಖ್ಯೆಗೆ 2 ಕ್ಕಿಂತ ಹೆಚ್ಚಿರಬೇಕು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದಡಾರ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಮತ್ತು ಜನವರಿಯಿಂದ ಮಾರ್ಚ್ ವರೆಗೆ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇರುವುದನ್ನು ಗಮನಿಸಿಸಲಾಗಿದೆ.
ಮುಂದುವರಿದು, ದಡಾರ-ರುಬೆಲ್ಲಾ ಪಾಕ್ಷಿಕ ಲಸಿಕಾ ಅಭಿಯಾನವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಐದು ಪಾಲಿಕೆಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಔಟರೀಚ್ ಪ್ರದೇಶಗಳಲ್ಲಿ 19-01-2026 ರಿಂದ 31-01-2026 ರವರೆಗೆ ಸೆಷನ್‌ಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಗಳಿಂದ ಈವರೆಗೆ ಲಸಿಕೆ ಪಡೆಯಲು ವಿಳಂಬವಾಗಿದ್ದಲ್ಲಿ ಅಥವಾ ಲಸಿಕೆ ಪಡೆಯದೇ ಇದ್ದಲ್ಲಿ, ಪೋಷಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿ.ಬಿ.ಎ (ಆರೋಗ್ಯ ಇಲಾಖೆ) ಪ್ರಕಟಣೆ ಹೊರಡಿಸಿದೆ. ನಿಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ ಆರೋಗ್ಯವಂತರನ್ನಾಗಿಸಿ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಬರುವ 145 ಯೋಜನಾ ಘಟಕಗಳ ದಢಾರ-ರುಬೆಲ್ಲ್ಯಾ ಪಾಕ್ಷಿಕ ಲಸಿಕಾ ಕಾರ್ಯಕ್ರಮದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ದಢಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನದಲ್ಲಿ ಒಟ್ಟು 1,114 ಲಸಿಕಾ ಕೇಂದ್ರಗಳನ್ನು 3,005 ವಲಸೆ ತಾಣಗಳಲ್ಲಿ ಯೋಜಿಸಲಾಗಿದ್ದು, 267 ಮಕ್ಕಳಿಗೆ MR-1 ಲಸಿಕೆ ಮತ್ತು 246 ಮಕ್ಕಳಿಗೆ MR2 ಲಸಿಕೆ ಹಾಗೂ 178 ಮಕ್ಕಳಿಗೆ ಪೆಂಟಾ-1 ಲಸಿಕೆ ಮತ್ತು 183 ಮಕ್ಕಳಿಗೆ DPT 2 ನೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು.
ಈ ಅಭಿಯಾನದ ಅಂಗವಾಗಿ 1,040 ಹೆಚ್ಚಿನ ಅಪಾಯದ ಪ್ರದೇಶಗಳಾದ ಕೊಳೆಗೇರಿಗಳು ಮತ್ತು ದಡಾರ ಪ್ರಕರಣವಿರುವ ಪ್ರದೇಶಗಳನ್ನು ಒಳಗೊಂಡಿದ್ದು. 1,493 ಮಕ್ಕಳಿಗೆ MR1 ಲಸಿಕೆ ಮತ್ತು 1,512 ಮಕ್ಕಳಿಗೆ MR2 ಡೋಸ್ ಲಸಿಕೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಸಹಾಯಕಿಯಯನ್ನು ಸಂಪರ್ಕಿಸಿ.
Related










