
ಬೆಂಗಳೂರು: ಹಾಡುಹಗಲೇ ನಡುರಸ್ತೆಯಲ್ಲಿ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಬೆತ್ತಲೆಯಾಗಿ ರಸ್ತೆ ತುಂಬೆಲ್ಲ ಯಾವುದೇ ಅಂಕೆಶಂಕೆ ಇಲ್ಲದೆ ಓಡಾಡಿರುವುದು HSR ಲೇಔಟ್‌ನಲ್ಲಿ ನಡೆದಿದೆ.
ಇನ್ನು ಆ ಯುವತಿ ನಗ್ನವಾಗಿ ಓಡಾಡುತ್ತಿರುವುದನ್ನು ನೋಡಿ ಜನರು ಒಂದು ಕ್ಷಣ ಶಾಕ್ ಆಗಿದ್ದು ಸಂಜೆ ಹೊತ್ತಲ್ಲಿ ನಮಗೆ ರಸ್ತೆಗೆ ಕಾಲಿಡಲು ಆಗ್ತಾನೆ ಇಲ್ಲ ಎನ್ನುತ್ತಿದ್ದಾರೆ. ಇತ್ತ ಚಿತ್ರ ವಿಚಿತ್ರವಾಗಿ ಹುಡುಗಿಯರು ನಡೆದುಕೊಳ್ಳುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲು ಹೊತ್ತಿನಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಕೆಲ ಜನರು ಬೈಯುತ್ತಿದ್ದರೆ ಇನ್ನು ಕೆಲವರು ಈಕೆಗೆ ಏನಾಗಿದೆ ಎಂದು ನೋಡಿತ್ತಿದ್ದರು.
ಆದರೆ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಯುವತಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದ್ದಾಳೆ. ಆ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
