Please assign a menu to the primary menu location under menu

CrimeNEWSನಮ್ಮಜಿಲ್ಲೆ

ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ತುಂಬಿದ ಲಾರಿ ಡಿಕ್ಕಿ: ಹೊತ್ತಿ ಉರಿದ ಕ್ಯಾಂಟರ್‌- ಚಾಲಕರಿಗೆ ಗಂಭೀರ ಗಾಯ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಸಿಎನ್‍ಜಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ ಚಾಲಕ ನರಸಿಂಹಮೂರ್ತಿ ಹಾಗೂ ಮಾದಪ್ಪ ಎಂಬವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುನೇಗಲ್ ಬಳಿ ಯೂ ಟರ್ನ್ ಪಡೆಯಲು ನಿಂತಿದ್ದ ಸಿಎನ್‍ಜಿ ಸಿಲಿಂಡರ್ ತುಂಬಿದ್ದ ಲಾರಿಗೆ, ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಿಎನ್‍ಜಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ.

ಘಟನೆಯಿಂದ ಹುನೇಗಲ್ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಹಾನಿಗೊಳಗಾದ ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

Leave a Reply

error: Content is protected !!
LATEST
KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು KSRTC: ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡೇಮಾಡುತ್ತೇವೆ- ಕ್ರಿಯಾ ಸಮಿತ... ಪಂಚಭೂತಗಳಲ್ಲಿ ಲೀನವಾದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್‌ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಪಾಪಿಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: 5 ಸಾವಿರ ಪ್ರವಾಸಿಗರ ರಕ್ಷಿಸಿದ ಪೊಲೀಸರು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ತುಂಬಿದ ಲಾರಿ ಡಿಕ್ಕಿ: ಹೊತ್ತಿ ಉರಿದ ಕ್ಯಾಂಟರ್‌- ಚಾಲಕರಿ... KSRTC: ನಾಲ್ಕೂ ನಿಗಮಗಳ ಸಾರಿಗೆ ನೌಕರರು ಜ.1ರಿಂದ 6 ತಿಂಗಳುಗಳ ಕಾಲ ಮುಷ್ಕರ ಮಾಡುವಂತಿಲ್ಲ- ಸರ್ಕಾರ ಆದೇಶ ಟೀ ಕುಡಿದು ಹೋಗುವಿರಂತೆ ಮನೆಗೆ ಬನ್ನಿ ಎಂದು ಕರೆದ ಸುಂದರಿಯ ಮಾತು ನಂಬಿ ಹನಿ ಟ್ರ್ಯಾಪ್‌ಗೆ ಬಿದ್ದ ಕಂಟ್ರ್ಯಾಕ್ಟರ್ 4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ