
ಬೆಂಗಳೂರು: ಪುಡಿ ರೌಡಿಗಳು ನಾವು ಸಿಲಿಕಾನ್ ಸಿಟಿಯಲ್ಲಿ ಇದ್ದೇವೆ ಎಂಬುವುದನ್ನು ಪೊಲೀಸರಿಗೆ ಆಗಾಗೆ ನೆನೆಪಿಸಲು ಕೆಲ ಕಿಡಿಗೇಡಿ ಕೃತ್ಯಗಳನ್ನು ಎಸಗುತ್ತಿರುತ್ತಾರೆ. ಇದರಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಗೊಳಗಾಗಿ ಜನರು ತೊಂದರೆಗ ಸಿಲುಕುತ್ತಿರುತ್ತಾರೆ.
ಅದೇ ರೀತಿ ಕೆ.ಆರ್. ಪುರಂ ಮಾರುಕಟ್ಟೆಯಲ್ಲಿ, ಒಬ್ಬ ರೌಡಿ ವಿಧ್ವಂಸಕ ಎಸಗಿದ್ದು, ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳ ಮೇಲೆ ಲಾಂಗ್‌ಬೀಸಿ ಕಾರುಗಳ ಕಿಟಕಿ ಗ್ಲಾಸ್‌ಗಳನ್ನು ಒಡೆದು ಪುಡಿಪುಡಿ ಮಾಡಿದ್ದಾನೆ.
ಇಂದು ಬೆಳಗಿನ ಜಾವ, ಕಾರು ಮತ್ತು ಸರಕು ಸಾಗಣೆ ವಾಹನದ ಗಾಜುಗಳನ್ನು ಒಡೆದು ಹಾಕಿದ್ದಾನೆ. ಇದರಿಂದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಗಾಂಜಾ ಅಮಲಿನಲ್ಲಿ, ವ್ಯಾಪಾರಿಗಳು ಮತ್ತು ಅಲ್ಲಿದ್ದ ಜನರನ್ನು ಲಾಂಗ್‌ನಿಂದ ಬೆದರಿಸಿ ವಾಹನಕ್ಕೆ ಹಾನಿಗೊಳಿಸಿದ್ದಾನೆ ಕಿಡಿಗೇಡಿ.
ಇನ್ನು ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಸಾರ್ವಜನಿಕರು ಪುಡಿರೌಡಿಯನ್ನು ಹಿಡಿದು ಗೂಸಕೊಟ್ಟು ಕೆ.ಆರ್. ಪುರಂ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.