Vijayapatha - ವಿಜಯಪಥ > Blog > NEWS > Crime > ಮಳವಳ್ಳಿ ಬಸ್ ನಿಲ್ದಾಣದಲ್ಲಿ 7 ತಿಂಗಳ ಮಗು ಎತ್ತಿಕೊಂಡು ಮಹಿಳೆ ಪರಾರಿ
ಮಳವಳ್ಳಿ: ಪ್ರಯಾಣಿಕರಿಂದ ತುಂಬಿದ್ದ ಬಸ್‌ನಲ್ಲಿ ಸೀಟು ಸಿಗದೆ ಎತ್ತಿಕೊಳ್ಳಲು ನೀಡಿದ್ದ ಮಗುವನ್ನು ಅಪರಿಚಿತೆ ಕದ್ದು ಪರಾರಿಯಾದ ಘಟನೆಯೊಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಿ. ನರಸೀಪುರ ತಾಲೂಕಿನ ವಡ್ಡರಕೊಪ್ಪಲು ನಿವಾಸಿ ಸವಿತಾ ಮಗು ಕಳೆದುಕೊಂಡ ತಾಯಿ. ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಸವಿತಾ ಮಗುವಿನ ಸಮೇತ ಬಸ್ ಹತ್ತಿದ್ದಾರೆ. ಈ ವೇಳೆ ಬಸ್‌ನಲ್ಲಿ ಜನರು ತುಂಬಿದ್ದ ಕಾರಣ ಸೀಟ್‌ನಲ್ಲಿ ಕೂತಿದ್ದ ಅಪರಿಚಿತ ಮಹಿಳೆಯೊಬ್ಬರ ಕೈಗೆ ಸವಿತಾ ಮಗು ನೀಡಿದ್ದಾರೆ.
ಆದರೆ ಮಳವಳ್ಳಿ ಬಸ್ ನಿಲ್ದಾಣದಲ್ಲಿ ತಾನೂ ಇಳಿಯುವುದಾಗಿ ಹೇಳಿ ಕ್ಷಣಾರ್ಧದಲ್ಲಿ ಮಗು ಜೊತೆ ಪರಾರಿಯಾಗಿದ್ದಾಳೆ.
ಇತ್ತ ಸವಿತಾ ಲಗೇಜ್ ಹಿಡಿದುಕೊಂಡು ಬಸ್‌ನಿಂದ ಇಳಿಯುವಷ್ಟರಲ್ಲಿ ಮಗು ಸಮೇತ ಅಪರಿಚಿತ ಮಹಿಳೆ ಎಸ್ಕೇಪ್ ಆಗಿದ್ದು, ಸದ್ಯ 7 ತಿಂಗಳ ಗಂಡು ಮಗು ಕಳೆದುಕೊಂಡು ತಾಯಿ ಕಂಗಾಲಾಗಿದ್ದಾರೆ.
ಈ ಸಂಬಂಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಕಳ್ಳಿಯನ್ನು ಶೋಧದಲ್ಲಿ ಪೊಲೀಸರು ತೊಡಗಿದ್ದಾರೆ.
Related
Deva
Leave a reply