NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಒಂದೇ ಕಂತಿನಲ್ಲಿ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು: ಕೂಟ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಚುನಾವಣಾ ಪೂರ್ವದಲ್ಲಿ ತಮ್ಮ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿನ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಕಲಬುರಗಿ ವಿಭಾಗದ ಗೌರವಾಧ್ಯಕ್ಷ ಶೌಕತ್‌ ಅಲಿ ಆಲೂರ, ರಾಜ್ಯ ಕಾರ್ಯಾಧ್ಯಕ್ಷ ಜಯರಾಮ ರಾಠೋಡ್‌ ಮನವಿ ಸಲ್ಲಿಸಿದ್ದಾರೆ.

ಗುರುವಾರ ಕಲಬುರಗಿ ಬಸ್‌ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ ವೇಳೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು. 2021ರ ಮುಷ್ಕರದ ಸಮಯದಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ನೌಕರರಿಗೆ ಆಗಿರುವ ವಜಾ, ವರ್ಗಾವಣೆ, ಸಂಸ್ಥೆಯ ಶಿಕ್ಷಾದೇಶಗಳನ್ನು ರದ್ದು ಮಾಡಬೇಕು ಹಾಗೂ ಪೊಲೀಸ್ ಕೇಸ್‌ಗಳನ್ನು ಹಿಂಪಡೆದು 06-04-2021 ರ ಯಥಾಸ್ಥಿತಿ ಕಾಪಾಡಬೇಕು.

ನೌಕರರ ಸಂಘಟನೆಗಳ ಚುನಾವಣೆ ಕಳೆದ 30 ವರ್ಷಗಳಿಂದ ಆಗಿಲ್ಲ. ಹೀಗಾಗಿ ಶೀಘ್ರದಲ್ಲೇ ಚುನಾವಣೆ ನಡೆಸುವುದಕ್ಕೆ ಆದೇಶ ಹೊರಡಿಸಬೇಕು. ಆ ಬಳಿಕ ಪ್ರಜಾಸತಾತ್ಮಕ ವ್ಯವಸ್ಥೆಯಡಿ ನಿಗದಿತ ಸಮಯಕ್ಕೆ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡು ನೌಕರರ ಸಂಘಟನೆಗಳ ಚುನಾವಣೆಯನ್ನು ನಿಗದಿತ ಅವಧಿಯೊಳಗೆ ನಡೆಸಬೇಕು.

3. ಸರ್ಕಾರ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆ ಘೋಷಣೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಹುದ್ದೆವಾಋು ಸರಿಸಮಾನ ವೇತನ ಮತ್ತು ಇತರ ಸೌಲತ್ತುಗಳನ್ನು ನೀಡಬೇಕು.

01-01-2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೌಕರರಿಗೆ ಒಂದೇ ಕಂತಿನಲ್ಲಿ 38 ತಿಂಗಳ ವೇತನ ಹಿಂಬಾಕಿ ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ರಜೆ ನಗದಿಕರಣದ ವಿಳಂಬ ನೀತಿಯನ್ನು ಸರಿಪಡಿಸಿ ಪ್ರತಿ ವರ್ಷ ನೌಕರರಿಗೆ ಸಕಾಲಕ್ಕೆ ಸರಿಯಾಗಿ ರಜೆ ನಗದಿಕರಣ ಸೌಲಭ್ಯವನ್ನು ಜಾರಿಗೊಳಿಸಬೇಕು.

ವಿದ್ಯುತ್ ಚಾಲಿತ ವಾಹನ ನಿರ್ವಹಣೆಗಾಗಿ ಖಾಸಗಿ ನೌಕರರನ್ನು ಸೇವೆಗೆ ಬಳಸಿಕೊಳ್ಳುತ್ತಿರುವ ಹಾಗೂ ಇತರೆ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳು ತಾಂತ್ರಿಕ ಹಾಗೂ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ಸಾರಿಗೆ ಸಂಸ್ಥೆಯನ್ನು ಹಂತ-ಹಂತವಾಗಿ ಖಾಸಗಿಕರಿಸುವ ಹುನ್ನಾರವನ್ನು ಕೂಡಲೇ ಕೈಬಿಟ್ಟು ಸಂಸ್ಥೆಯನ್ನು ಖಾಸಗಿಕರಣದಿಂದ ರಕ್ಷಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.

ಇದಿಷ್ಟೇ ಅಲ್ಲದೆ ಕೂಟವೂ ಚುನಾವಣಾ ಪೂರ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಧ್ಯಕ್ಷ ಚಂದ್ರಶೇಖರ ಅವರನ್ನು ಒಳಗೊಂಡಂತೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುದ್ದಿಗೊಷ್ಠಿ ಮಾಡಿ ಸಾರಿಗೆ ನೌಕರರು ಮತ್ತು ಕುಟುಂಬ ಹಾಗೂ ಸಂಬಂಧಿಕರು ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಬಹಿರಂಗವಾಗಿ ಪ್ರಚಾರ ಮಾಡಿದ್ದೇವೆ.

ಈ ವೇಳೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರೂ ಸಹ ನಮ್ಮ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದೆಂಬ ಸದುದ್ದೇಶದಿಂದ ತಮ್ಮ ಪಕ್ಷಕ್ಕೆ 20 ಲಕ್ಷಕ್ಕೂ ಹೆಚ್ಚು ಮತಗಳನ್ನು ಹಾಕಿಸುವುದಕ್ಕೆ ಪ್ರಮಾಣಿಕ ಪ್ರಯತ್ನ ಪಟ್ಟಿರುತ್ತೇವೆ.

ಆದರೆ ಇತ್ತೀಚಿನ ದಿನಮಾನಗಳಲ್ಲಿ ಬಹುಪಾಲು ಸಾರಿಗೆ ನೌಕರರ ಬೆಂಬಲಿತ ಸಂಘಟನೆಯಾದ ಸಾರಿಗೆ ನೌಕರರ ಕೂಟವನ್ನು ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಿರ್ಲಕ್ಷ್ಯ ಮಾಡುತ್ತಿರುವುದು‌ ಕಂಡು ಬರುತ್ತಿದೆ. ಇದನ್ನು ನೋಡಿದರೆ ಕೆಲವೇ ಕೆಲವು ಜನ ಬೆಂಬಲ ಇರುವ ನೌಕರರಲ್ಲದ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಿ ತಾತ್ಸಾರ ಮನೋಭಾವ ತೋರುತ್ತಿದೆ.

ಕರ್ನಾಟಕದ ನವನಿರ್ಮಾಣದ ಕನಸು ಹೊತ್ತಿರುವ ಮತ್ತು ಮಹತ್ವದ ಯೋಜನೆಯಲ್ಲಿ ಒಂದಾದ ಸ್ತ್ರೀಶಕ್ತಿ ಯೋಜನೆಯಿಂದ ರಾಜ್ಯದ ನಾಲ್ಕೂ ನಿಗಮಗಳಿಗೆ ಶಕ್ತಿ ತುಂಬದಕ್ಕೆ ತಮ್ಮ ಸರ್ಕಾರಕ್ಕೆ ಇಂದಿನ ದಿನದಂದು ಮೈಸೂರಿನಲ್ಲಿ ಸಾರಿಗೆ ನೌಕರರ ಕೂಟ ಅಭಿನಂದನಾ ಕಾರ್ಯಕ್ರಮ ಆಯೋಜಿಸಿತ್ತು.

ಆದರೆ, ಅದನ್ನು ಕೂಡ ನಿರಾಕರಿಸಿದ್ದು ಗಮನಿಸಿದರೆ ಸದ್ಭಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರ ಬೆಂಬಲಿತ ಸಾರಿಗೆ ನೌಕರದ ಕೂಟವನ್ನು ಕಡೆಗಣಿಸುತ್ತಿರುವುದು ತುಂಬಾ ನೋವಿನ ಸಂಗತಿ. ಈ ನಡೆಯನ್ನು ಸಾರಿಗೆ ನೌಕರರ ಕೂಟ ತಿವ್ರವಾಗಿ ಖಂಡಿಸುತ್ತದೆ.

ಆದ್ದರಿಂದ ತಾವು ಕೂಡಲೆ ಬಹುಪಾಲು ಸಾರಿಗೆ ನೌಕರರ ಬೆಂಬಲಿತ ಸಂಘಟನೆಯನ್ನು ಕರೆದು ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವದಲ್ಲಿನ ಪ್ರಣಾಳಿಕೆಯಲ್ಲಿರುವ ಸಾರಿಗೆ ನೌಕರರ ಈ ಎಲ್ಲ ಬಹು ಮುಖ್ಯ ಬೇಡಿಕೆಗಳನ್ನು ದ್ವಿಪಕ್ಷಿಯ ಮಾತುಕತೆ ಮುಖಾಂತರ ಬಗೆಹರಿಸಿಕೊಡಬೇಕೆಂದು ಶೌಕತ್‌ ಅಲಿ ಆಲೂರ, ಜಯರಾಮ ರಾಠೋಡ್‌ ಸೇರಿದಂತೆ ಇತರ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ