ನಟ ದರ್ಶನ್‌ಗೆ ಹಾಸಿಗೆ, ದಿಂಬು ಏನನ್ನೂ ಕೊಡ್ತಾ ಇಲ್ಲ- ತುಂಬಾ ಕನಿಷ್ಠವಾಗಿ ನಡೆಸಿಕೊಳ್ತಾ ಇದ್ದಾರೆ ಜೈಲಧಿಕಾರಿಗಳು

ಬೆಂಗಳೂರು: ಜೈಲಿನಲ್ಲಿ ಹಾಸಿಗೆ, ದಿಂಬು ವಿಚಾರಕ್ಕೆ ನಟ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅರ್ಜಿ ವಿಚಾರಣೆ ನಡೆಯಲಿದೆ.
ಕೊಲೆ ಪ್ರಕರಣದ ಆರೋಪದಡಿ ಮತ್ತೆ ಜೈಲುಸೇರಿರುವ ದರ್ಶನ್ ಕೆಲ ಮೂಲಸೌಕರ್ಯಗಳಿಗೆ ಕೋರ್ಟ್‌ನಲ್ಲಿ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಕಳೆದ ವಾರ ಜೈಲಿನ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿ ಎಂದು ಕೋರ್ಟ್ ಆದೇಶ ಕೂಡ ಮಾಡಿತ್ತು.
ಅದೇ ರೀತಿ ಜೈಲಿನ ಅಧಿಕಾರಿಗಳು ಜಮ್ಖಾನ, ದಿಂಬು ಕಲ್ಪಿಸಿದ್ದರು. ಜತೆಗೆ ವಾಕಿಂಗ್‌ಗೆ ಅವಕಾಶ ನೀಡಿದ್ದಾರೆ. ಆದರೆ ಹಾಸಿಗೆ, ದಿಂಬು ಕೊಟ್ಟಿಲ್ಲ ಎಂದು ಆರೋಪಿಸಿ ದರ್ಶನ್ ಮತ್ತೆ ಕೋರ್ಟ್‌ಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ಕೋರ್ಟ್ ಹೇಳಿದರೂ ಕೂಡ ಹಾಸಿಗೆ ಕೊಟ್ಟಿಲ್ಲ ಅಂತ ಮತ್ತೆ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ನನಗೆ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಜೈಲು ಸೇರಿ ತಿಂಗಳಾದ್ರೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಅರ್ಜಿ ಸಲ್ಲಿಸಿದ ಬಳಿಕ ಸುನೀಲ್ ವಾದ ಮಂಡಿಸಿ, ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆದು ಹೋಗಿದೆ. ಇನ್ನೂ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿದ್ದಾರೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಬೇಕು. ಇನ್ನು ಬಿಸಿಲಿನ ವಿಚಾರಕ್ಕೆ ಸೂರ್ಯನನ್ನು ತರೋದಕ್ಕೆ ಆಗುತ್ತಾ ಅಂತ ಹಾರಿಕೆ ಉತ್ತರ ಕೊಡ್ತಾರೆ.
ಜತೆಗೆ ಹಾಸಿಗೆ, ದಿಂಬು ಏನನ್ನೂ ಕೊಡ್ತಾ ಇಲ್ಲ. ತುಂಬಾ ಕನಿಷ್ಠವಾಗಿ ನಡೆಸಿಕೊಳ್ತಾ ಇದ್ದಾರೆ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.

ಇದೇ ವಿಚಾರಕ್ಕೆ ಈ ಹಿಂದೆ ಕೋರ್ಟ್‌ನಲ್ಲಿ ವಿಚಾರಣೆ ಮಾಡುವ ವೇಳೆ ಜೈಲಿನಲ್ಲಿ ಸರಿಯಾಗಿ ಸೌಲಭ್ಯ ಕೊಡ್ತಿಲ್ಲ. ನಾನು ಸಾಯ್ತೀನಿ, ವಿಷ ಕೊಟ್ಟುಬಿಡಿ ಎಂದು ದರ್ಶನ್ ಬೇಸರದಿಂದ ನ್ಯಾಯಾಧೀಶರ ಬಳಿ ಅಳಲು ತೋಡಿಕೊಂಡಿದ್ದರು.
Related
