
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಆರೋಪದಡಿ ಮಂಗಳವಾರ ನಟಿ ರನ್ಯಾನ ಅರಸ್ಟ್ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ನಟಿ ರನ್ಯಾ ವಿದೇಶದಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಳು ಎಂಬ ಆರೋಪದಡಿ DRI ಅಧಿಕಾರಿಗಳು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡದ ಮಾಣಿಕ್ಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಈಕೆ ಐಪಿಎಸ್ ಅಧಿಕಾರಿಯ ಮಲಪುತ್ರಿಯಾಗಿದ್ದಾರೆ. ಇನ್ನು ಚಿನ್ನ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಈಕೆಯ ಫ್ಲಾಟ್ ಮೇಲೂ ದಾಳಿ ಮಾಡಿದ DRI ಅಧಿಕಾರಿಗಳಿಗೆ ಕೋಟಿ ಕೋಟಿ ರೂ. ಮೌಲ್ಯದ ಚಿನ್ನಾಭರ ಸಿಕ್ಕಿದೆ.
ಲ್ಯಾವೆಲ್ಲಿ ರಸ್ತೆಯ ಮನೆಯಲ್ಲಿ 2.06ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಮಂಗಳವಾರ ರಾತ್ರಿ 2.67 ಕೋಟಿ ನಗದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರನ್ಯಾ ನಂದವಾಣಿ ಮ್ಯಾನ್ಸನ್ನಲ್ಲಿ ವಾಸವಿದ್ದು ತಿಂಗಳಿಗೆ ಬರೋಬರಿ 4.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ನಿನ್ನೆ ಬಂಧಿಸಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈಕೆಯ ಹಿಂದಿರುವವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.