KSRTC ನಾಲ್ಕೂ ನಿಗಮಗಳ ನೌಕರರ ಪರ ಅರ್ಜಿ ವಿಚಾರಣೆ: ನಾಲ್ವರು ಎಂಡಿಗಳು, ಪ್ರಧಾನ ಕಾರ್ಯದರ್ಶಿ, CAOಗೆ ನೋಟಿಸ್ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಪರಿಷ್ಕರಣೆ 14ತಿಂಗಳಗಳು ಕಳೆದರೂ ಆಗದಿರುವ ಸಂಬಂಧ ನಾಲ್ಕೂ ನಿಗಮಗಳ ಎಂಡಿಗಳು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಇಂದು ರಾಜ್ಯ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಪರಿಷ್ಕರಣೆಯನ್ನು 14ತಿಂಗಳಗಳು ಕಳೆದರೂ ಮಾಡಿದಿರುವ ಬಗ್ಗೆ ಮಾ.10 ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಆ ಅರ್ಜಿ ವಿಚಾರಣೆಯನ್ನು ಇಂದು (ಮಾ.11) ಕೈಗೆತ್ತಿಕೊಂಡ ಹೈಕೊರ್ಟ್ ನ್ಯಾಯಮೂರ್ತಿ ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯಪೀಠ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಮುಂದಿನ ತಿಂಗಳು ಅಂದರೆ ಏಪ್ರಿಲ್ 7ಕ್ಕೆ ಮುಂದೂಡಿದೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲೇನಿದೆ: ಸರ್ಕಾರಿ ನೌಕರರಿಗೆ ಕೊಡುತ್ತಿರುವ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ಕೊಡಬೇಕು. ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯನ್ನು ಇನ್ನೂ ಮಾಡಿಲ್ಲ ಎಂಬುವುದು ಸೇರಿದಂತೆ ನೌಕರರಿಗೆ ಹಲವು ಸೌಲಭ್ಯಗಳನ್ನು ಕೊಟ್ಟಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಬಹು ವರ್ಷದ ಸರಿ ಸಮಾನ ಸೌಲಭ್ಯದ ಕನಸ್ಸು ಈ ಮೂಲಕ ಈಡೇರುವ ನಿರೀಕ್ಷೆಯಲ್ಲಿದ್ದಾರೆ ನೌಕರರು.
ಸಾರಿಗೆ ನೌಕರರ ಮಲತಾಯಿಯಂತೆ ಕಾಣುತ್ತಿರುವ ಸರ್ಕಾರ: ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ.
ಒಟ್ಟಾರೆ ಸರ್ಕಾರ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಈವರೆಗೂ ನೌಕರರಿಗೆ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮತ್ತೆ ವೇತನ ಪರಿಷ್ಕರಣೆ ಆಗಬೇಕಿತ್ತು, ಅದನ್ನು ಕೂಡ ಮಾಡಿಲ್ಲ.
ಈ ಎಲ್ಲವನ್ನು ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ನೌಕರರಿಗೆ ಸರಿ ಸಮಾನ ಸೌಲಭ್ಯ ಕೊಡಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related

You Might Also Like
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...
ಸಾರಿಗೆ ನೌಕರರ ಮುಷ್ಕರದ ಬಗ್ಗೆ ನನ್ನ ಅಭಿಪ್ರಾಯ-ಅನಿಸಿಕೆಗಳು
ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ...
ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ...
KSRTC ನೌಕರರ ವೇತನ ಹೆಚ್ಚಳ ಸಂಬಂಧ ಉಪವಾಸ ಸತ್ಯಾಗ್ರಹ ಮಾಡುವ ಕುರಿತು ಜು.18ರಂದು ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.29ರಿಂದ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ...
ಜು.29ರೊಳಗೆ KSRTC ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಂಡಿಗೆ ಒಕ್ಕೂಟ ಮನವಿ
ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಜುಲೈ...