NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಬಿಡುಗಡೆಯಾಗಿರುವ 450 ಕೋಟಿ ರೂ.ನಲ್ಲಿ KSRTC ನೌಕರರಿಗೆ ಮೇ 11ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ

ಏ.29ರಂದೇ ಮೊದಲ ಹಂತವಾಗಿ 450 ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರಿಗೆ ಕರ್ನಾಟಕ ಸರ್ಕಾರವು 38 ತಿಂಗಳ ಹಿಂಬಾಕಿ ಬದಲು 26 ತಿಂಗಳ ಹಿಂಬಾಕಿ ನೀಡುವ ನಿರ್ಧಾರ ಮಾಡಿ ಏ.29ರಂದು ಮೊದಲ ಹಂತವಾಗಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ನೌಕರರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿರಲಿಲ್ಲ.

ಹೀಗಾಗಿ ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 450 ಕೋಟಿ ರೂ.ಗಳನ್ನು ನೌಕರರ ಬ್ಯಾಂಕ್‌ ಖಾತೆಗೆ ಮೇ 11ರ ಸೋಮವಾರ ಪಾವತಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಅಕ್ರಮ್‌ ಪಾಷ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಂದು ಕೇಂದ್ರ ಕಚೇರಿಯಲ್ಲಿ ಎಂಡಿ ಅಧ್ಯಕ್ಷತೆಯಲ್ಲಿ ನಿಗಮದ ಎಲ್ಲ ವಿಭಾಗಗಳ ಅಧಿಕಾರಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗಿರುವ 450 ಕೋಟಿ ರೂಪಾಯಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (KSRTC): 143.85 ಕೋಟಿ ರೂ. ಸಿಕ್ಕಿದೆ. ಈ ಹಣವನ್ನು ಎಲ್ಲ ನೌಕರರಿಗೂ ಹಿಂಬಾಕಿ ಪಾವತಿಸಬೇಕಿದ್ದು, ಪ್ರತಿ ನೌಕರರಿಗೂ 11 ತಿಂಗಳ ಹಿಂಬಾಕಿ ಪಾವತಿ ಈ ಹಣದಿಂದ ಸಾಧ್ಯವಾಗಲಿದೆ.

ಹೀಗಾಗಿ ಮೇ 11ರಂದು ಎಲ್ಲ ನೌಕರರ ಬ್ಯಾಂಕ್‌ ಖಾತೆಗೆ ಪಾವತಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಅಧಿಕೃತ ಮಾಹಿತಿ ವಿಜಯಪಥಕ್ಕೆ ಲಭ್ಯವಾಗಿದೆ. ಅಲ್ಲದೆ ಉಳಿದ 15 ತಿಂಗಳ ವೇತನ ಹಿಂಬಾಕಿಯನ್ನು ಎರಡನೇ ಹಂತದಲ್ಲಿ 7 ಅಥವಾ 8 ತಿಂಗಳ ಹಿಂಬಾಕಿ ಪಾವತಿಸಲಾಗುವುದು ಆ ಬಳಿಕ ಮೂರನೇ ಹಂತದಲ್ಲಿ ಉಳಿದ ತಿಂಗಳುಗಳ ಹಿಂಬಾಕಿ ಪಾವತಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ.

ಆದರೆ, ಮೊದಲ ಹಂತವಾಗಿ ಸರ್ಕಾರ 450 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಇನ್ನುಳಿದ ಹಣವನ್ನು ಸರ್ಕಾರ ಯಾವಾಗ ಬಿಡುಗಡೆ ಮಾಡುತ್ತದೋ ಆಗ ಅದನ್ನು ಸಹ ತಕ್ಷಣವೇ ನೌಕರರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಸಭೆಯಲ್ಲಿ ಚರ್ಚೆಯಾಗಿದೆ.

ಇನ್ನು ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ (Arrears) ಪಾವತಿಸಬೇಕಿತ್ತು. ಆದರೆ 12 ತಿಂಗಳ ಹಿಂಬಾಕಿ ಪಾವತಿಸಲು ಆಗುವುದಿಲ್ಲ ಎಂದು ಸದ್ಯ 26 ತಿಂಗಳ ಹಿಂಬಾಕಿ ಪಾವತಿಗೆ ನೌಕರರು ಹಾಗೂ ಸಂಘಟನೆಗಳ ವಿರೋಧದ ನಡುವೆಯೂ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಿದೆ.

ಆ ಭಾಗವಾಗಿ ಏ.29ರಂದು 450 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಿತ್ತು. ಇದರಿಂದಾಗಿ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಲಕ್ಷಾಂತರ ನೌಕರರಿಗೆ ಆರ್ಥಿಕ ನೆರವು ಸಿಕ್ಕಂತಾಗಿದೆ. ಆದರೆ, ನ್ಯಾಯಯುತವಾಗಿ ಸಿಗಬೇಕಿರುವ ಹಿಂಬಾಕಿಯಿಂದ ವಂಚಿತರಾಗುತ್ತಿದ್ದಾರೆ.

ಇನ್ನು 26 ತಿಂಗಳ ವೇತನ ಬಾಕಿ ಪಾವತಿಗೆ ಕ್ರಮ: 01.01.2020ರಿಂದ 28.02.2023 ರವರೆಗಿನ ಒಟ್ಟು 36 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಪಾವತಿಸಲು ನೌಕರರು ಸತತವಾಗಿ ಒತ್ತಾಯಿಸುತ್ತಿದ್ದರು. ಆದರೆ ಸರ್ಕಾರ 01.01.2021 ರಿಂದ 28.02.2023 ಒಟ್ಟು 26 ತಿಂಗಳ ಹಿಂಬಾಕಿ ಪಾವತಿಸಲು ಆದೇಶ ನೀಡಿದ್ದು, ಈ ಬಾಕಿ ಮೊತ್ತದ ಒಟ್ಟು ಬೇಡಿಕೆ 1271.92 ಕೋಟಿ ರೂಪಾಯಿಯಾಗಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಮೊದಲ ಹಂತವಾಗಿ 450 ಕೋಟಿ ರೂ.ಗಳನ್ನು ವಿಶೇಷ ಅನುದಾನದಡಿ ಬಿಡುಗಡೆಗೊಳಿಸಿ ಆದೇಶಿಸಿದೆ.

ಅದರಲ್ಲಿ ಯಾವ ನಿಗಮಕ್ಕೆ ಎಷ್ಟು ಅನುದಾನ? (ಕೋಟಿ ರೂ.ಗಳಲ್ಲಿ): ಸರ್ಕಾರದ ಆದೇಶದಂತೆ ಬಿಡುಗಡೆಯಾದ 450 ಕೋಟಿ ರೂ.ಗಳನ್ನು ನಾಲ್ಕೂ ನಿಗಮಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC): 143.85 ಕೋಟಿ ರೂ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): 137.24 ಕೋಟಿ ರೂ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): 87.00 ಕೋಟಿ ರೂ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC): 81.91 ಕೋಟಿ ರೂ.
ಒಟ್ಟು ಮೊತ್ತ: 450.00 ಕೋಟಿ ರೂ.

ಕಟ್ಟುನಿಟ್ಟಿನ ಷರತ್ತುಗಳು: ಅನುದಾನ ಬಿಡುಗಡೆ ಮಾಡುವ ವೇಳೆ ಸರ್ಕಾರವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ.

ಬಿಡುಗಡೆ ಮಾಡಲಾದ ಈ ಮೊತ್ತವನ್ನು ಕೇವಲ ನೌಕರರ ವೇತನ ಬಾಕಿ ಪಾವತಿಸಲು ಮಾತ್ರ ಬಳಸತಕ್ಕದ್ದು.
ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನೌಕರರ ಖಾತೆಗೆ ಈ ಹಣವನ್ನು ತಲುಪಿಸಬೇಕು.
ಅನುದಾನ ಬಳಕೆಯ ನಂತರ ಸಾರಿಗೆ ಸಂಸ್ಥೆಗಳು ಕಡ್ಡಾಯವಾಗಿ ಬಳಕೆಯ ಪ್ರಮಾಣ ಪತ್ರವನ್ನು (Utilization Certificate) ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರಿಗೆ ಬಿಡುಗಡೆಯಾಗಿರುವ 450 ಕೋಟಿ ರೂ.ನಲ್ಲಿ KSRTC ನೌಕರರಿಗೆ ಮೇ 11ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ... ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌ KSRTC ನೌಕರರ ಕೂಟ- ಜಂಟಿ ಸಮಿತಿ ಸಭೆ ಸೇರುವ ಬಗ್ಗೆ ಎರಡು ದಿನದಲ್ಲಿ ನಿರ್ಣಯ: ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾ... ರಾಜೀನಾಮೆ ನೀಡದೇ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ- ಸರ್ಕಾರ ವಜಾಗೊಳಿಸಿದ ರಾಜ್ಯಪಾಲ KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪ... ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕ... ಬಸ್–ತೈಲ ಟ್ಯಾಂಕರ್ ನಡುವೆ ಡಿಕ್ಕಿ: 16 ಮಂದಿ ಸಜೀವ ದಹನ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನಗಳು KSRTC ಸಂಸ್ಥೆಯ ನೌಕರರ ಬಾಳು ಹಸನು ಮಾಡಲು ಸಂಘಟನೆಗಳ ನಾಯಕರು ಒಗ್ಗಟ್ಟಾಗಿ: ಜೀವನ್ ಮಾರ್ಟಿಸ್ ಮನವಿ ಟನ್‌ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ